ಲೇಖಕರು:
ಮರಾಠಿ ಮೂಲ : ವಿ. ಕೆ. ರಾಜವಾಡೆ.
ಅನುವಾದಕರು: ಚಂದ್ರಕಾಂತ ಪೋಕಳೆ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಇತಿಹಾಸ ಕ್ಷೇತ್ರದಲ್ಲಿ ವಿಶಿಷ್ಟ ಪರಿಣತಿ ಹೊಂದಿದ್ದವರೆಂದು ಮಾನ್ಯ. ವಿ.ಕೆ. ರಾಜವಾಡೆ ಖ್ಯಾತರಾಗಿದ್ದಾರೆ. 'ನಿರುಕ್ತ'ದಂತಹ ಗ್ರಂಥವನ್ನು ದೀರ್ಘ ಟಿಪ್ಪಣಿಗಳ ಸಮೇತ ಸಂಪಾದಿಸಿದ್ದ ಕೀರ್ತಿ ಅವರದು. ಅವರ 'ಸಮಗ್ರ ಸಾಹಿತ್ಯ' ಸಂಪುಟಗಳಲ್ಲಿ ಏಳು ಮತ್ತು ಎಂಟನೆಯ ಸಂಪುಟಗಳಿಂದ ಆಯ್ದ ಪ್ರಬಂಧಗಳ ಸಂಕಲನ ಇದಾಗಿದೆ. ಮಾನ್ಯ ರಾಜವಾಡೆಯವರು ಒಂದರ್ಥದಲ್ಲಿ ತೀರಾ ಸಂಪ್ರದಾಯವಾದಿಗಳು, ಜಾತುರ್ವರ್ಣ್ಯ ಪದ್ಧತಿಯ ಕಟ್ಟಾ ಪ್ರತಿಪಾದಕರು. ಜಾತುರ್ವರ್ಣ್ಯ ಪದ್ಧತಿಯನ್ನು ನಿರಾಕರಿಸುವವರು ಸಹ ಅದರ ಉಗಮ ಮತ್ತು ಬೆಳವಣಿಗೆಯನ್ನು ತಿಳಿಯಬೇಕಾದ್ದು ಅವಶ್ಯಕ. ಮಾನ್ಯ ರಾಜವಾಡೆಯವರ ತೀರ್ಮಾನಗಳನ್ನು ಪ್ರಶ್ನಿಸಲು ಅಡ್ಡಿಯಿಲ್ಲ. ಆದರೆ ಇತಿಹಾಸದ ದೃಷ್ಟಿಯಿಂದ ರಾಜವಾಡೆಯವರು ಕಲೆಹಾಕಿರುವ ಸಾಮಗ್ರಿಯು ಗಮನಾರ್ಹವಾದ್ದು. ಅದರ ವಿಶ್ಲೇಷಣೆಯ ಅಗತ್ಯವಿದೆಯೆಂಬ ದೃಷ್ಟಿಯಿಂದ ಈ ಸಂಕಲನದ ಲೇಖನಗಳು ಮಹತ್ವ ಪಡೆಯುತ್ತವೆ.
ಪುಟಗಳು: 96
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !