ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಹೊಸ ಕೃತಿ ‘ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು’. ಶೀರ್ಷಿಕೆಯೇ ಈ ಕೃತಿಯ ಹೂರಣವನ್ನೂ ಸೂಚಿಸುವ ಹಾಗಿದೆ. ಕನ್ನಡ ಸಾಹಿತ್ಯದ ನವೋದಯ ಮತ್ತು ನವ್ಯ ಕಾಲದ ಕೃತಿ, ಸಾಹಿತಿಗಳ ಮರು ಓದಿನ ಹೊಳಹುಗಳು ಈ ಪುಸ್ತಕದಲ್ಲಿ ಹರಳುಗಟ್ಟಿವೆ. ಲೇಖಕರು ಇವುಗಳನ್ನು ವಿಮರ್ಶೆ ಎನ್ನದೆ ಸಾಹಿತ್ಯ ಪ್ರಬಂಧಗಳು ಎಂದು ಕರೆದುಕೊಂಡಿರುವುದು ಈ ಬರಹಗಳ ಗುಣವನ್ನೂ ಸೂಚಿಸುವಂತಿದೆ. ಬೇಂದ್ರೆ, ಕುವೆಂಪು, ವಿ.ಸೀ., ಕೆಎಸ್‌ನ, ನಿರಂಜನ, ಭಾರತೀಸುತ, ಕಣವಿ, ಅಡಿಗ, ತೇಜಸ್ವಿ, ಲಂಕೇಶ್, ಕಾರ್ನಾಡ, ಶ್ರೀನಿವಾಸ ವೈದ್ಯ ಹೀಗೆ ಸಾಗುವ ಪಟ್ಟಿ ಕೇಶವ ಮಳಗಿ ಮತ್ತು ಜಯಂತ ಕಾಯ್ಕಿಣಿ, ಡಿ.ಪಿ. ಪ್ರಹ್ಲಾದ್ ಅವರವರೆಗೆ ಬಂದು ನಿಲ್ಲುತ್ತದೆ.
ಪ್ರಜಾವಾಣಿ ವಿಮರ್ಶೆ
https://www.prajavani.net/artculture/book-review/book-by-balasubramanya-kanjarpane-773452.html
ಪುಟಗಳು: 248
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !