"ಹಾವು ಮತ್ತು ಏಣಿ" ಒಂದು ಕಡೆ ಇಂದಿನ ರಾಜಕೀಯಕ್ಕೆ ಕನ್ನಡಿ ಹಿಡಿದರೆ ಇನ್ನೊಂದು ಕಡೆ ಗಣಿಗಾರಿಕೆಯಿಂದ ಒಂದು ಸಮಾಜದ ಅಧಿಪತನಕ್ಕೆ ಕನ್ನಡಿ ಹಿಡಿಯುತ್ತದೆ. ಇದು ಒಂದು ಸಾಮಾಜಿಕ ಕಾದಂಬರಿಯೂ ಹೌದು ಪತ್ತೇದಾರಿ ಕಾದಂಬರಿಯೂ ಹೌದು.
ತಗದೂರಿನ ಸುರೇಶ ಗೌಡನನ್ನು ಪೊಲೀಸರು ಕೊಂದಿದ್ದಾರೆ ಅದರ ಬಗ್ಗೆ ತನಿಖೆ ನಡಿಸಿ ನಮಗೆ ನ್ಯಾಯ ಕೊಡಿಸಿ ಎಂದು ಅವನ ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಧರಣಿಗೆ ಕೂರುತ್ತಾರೆ. ಈ ಹಗರಣವನ್ನು ಬಳಸಿ ಅಲ್ಲಿಯ ಎಮ್.ಎಲ್.ಎ ಮಲ್ಲೇಶಿಯನ್ನು ಮಟ್ಟ ಹಾಕಲು ಅವನ ಪಾರ್ಟಿ ಮುಂದಾಗುತ್ತದೆ. ಮಲ್ಲೇಶಿ ಆಡಳಿತ ಹಾಗೂ ವಿರೋಧ ಪಕ್ಷವನ್ನು ಒಡೆದು ಹೊಸ ಪಕ್ಷ ಕಟ್ಟುವ ಸಂಚು ನಡೆಸುತ್ತಾನೆ. ಕಡು ವೈರಿಗಳಾದ ಸೋಮಣ್ಣ ಹಾಗೂ ಪರಮೇಶ್ವರಪ್ಪ ಅವನ ವಿರುದ್ಧ ಒಂದಾಗುತ್ತಾರೆ. ಮಲ್ಲೇಶಿಗೆ ವಿರೋಧ ಪಕ್ಷದ ಬೆಂಬಲ ಹೇಗೆ ದೊರೆಯಿತು?
ಸಹಪಾಠಿಗಳಾದ ಸೋಮಣ್ಣ ಹಾಗೂ ಪರಮೇಶ್ವರಪ್ಪ ಕಡು ವೈರಿಗಳು ಹೇಗಾದರು? ಅವರುಗಳ ಮಧ್ಯ ನಿಂತ ಶಿವಲಿಂಗ ಸ್ವಾಮಿಗಳು ಯಾರು?
ಹೀಗೆ ಆರಂಭಗೊಂಡ ಕಾದಂಬರಿ ಓದುಗನನ್ನು ನಿಧಾನವಾಗಿ ಮಲ್ಲೇಶಿಯ ವಜ್ರ್ರ ಮುಷ್ಟಿಯಲ್ಲಿರುವ ತಗದೂರಿಗೆ ಕರದೊಯ್ಯೂತ್ತದೆ. ಭೂಮಿ ತಾಯಿಯ ಒಡಲಿನ ಅದಿರನ್ನು ಅವನ್ನೊಬ್ಬನೇ ಕಬಳಿಸುತ್ತಿದಾನೊ ಅಥವಾ ಅದರಲ್ಲಿ ಬೇರೆಯವರ ಪಾಲೂ ಇದೆಯೋ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತ ಬಂದ ಪತ್ರಕರ್ತ ರಾಜೇಶ ಪತ್ತೆ ಹಚ್ಚಿದ್ದು ಏನು?
ಊರಿನ ಹುಚ್ಚ ಹೇಳಿದ ಕಥೆ ಏನು?
ಸೈಬರ್ ಕ್ರೈಮ್ ಸ್ಪೆಷಲ್ ಆಫೀಸರ್ ವೇಣುಗೆ ಸುರೇಶನ ಕಂಪ್ಯೂಟರ್ನಲ್ಲಿ ಸಿಕ್ಕ ಮಾಹಿತಿ ಏನು?
ಕೊನೆಗೆ ಸುರೇಶ ಗೌಡ ಏಕೆ ಸತ್ತ?
ಪುಟಗಳು: 90
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !