ಗಡಿನಾಡು ಕಾಸರಗೋಡಿನ ಕುಂಬಳೆ ಈ ಲೇಖಕನ ಹುಟ್ಟೂರು. ಈ ಪ್ರದೇಶದ ಜನರು , ಜನ್ಮತಃ ಕನ್ನಡಿಗರಾಗಿದ್ದರೂ ರಾಜ್ಯ ಗಡಿ ವಿಂಗಡಣೆ ಆಗುವಾಗ ಕೇರಳದ ಪಾಲಿಗೆ ಸೇರಿ ಹೋದವರು. ಈ ಭಾಗ ಮಿಶ್ರ ಸಂಸ್ಕೃತಿಗಳ ಮತ್ತು ಭಾಷೆಗಳ ಪ್ರದೇಶ. ಆಚಾರ ವಿಚಾರಗಳಲ್ಲಿ , ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಕನ್ನಡಿಗರಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ. ಈ ಕಥಾ ಸಂಕಲದಲ್ಲಿ ಬರುವ ಜನ ಜೀವನ, ಆಚಾರ ವಿಚಾರ ಮತ್ತು ಭಾಷೆಯು ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಿನ್ನೆಲೆಯದ್ದು.
' ಗೋವು , ಮಹಿಷಿ ಮತ್ತು ಮಹಾವೃಕ್ಷ ' ಎಂಬ ಈ ಕಥಾ ಸಂಕಲನದಲ್ಲಿ ಇರುವ ಹೆಚ್ಚಿನ ಬರಹಗಳ ಕಾಲಘಟ್ಟ ೧೯೮೦-೧೯೯೦ ರ ದಶಕಗಳು. ಶುಧ್ಧ ಗ್ರಾಮೀಣ ಪರಿಸರ, ಹಿತ ಮಿತ ಅರಿತು ಬದುಕುವ ಸಣ್ಣ ಹಿಡುವಳಿದಾರ ಕುಟುಂಬಗಳು, ಅವರ ಜನಜೀವನ ಇತ್ಯಾದಿ ಈ ಬರಹಗಳ ಕಥಾ ವಸ್ತು . ಸನಾತನ ಸಂಸ್ಕೃತಿಯಲ್ಲಿ, ಪ್ರಕೃತಿಯನ್ನೂ ಪ್ರಾಣಿಗಳನ್ನೂ ಒಂದು ರೀತಿಯ ಆದರದಿಂದ ಕಾಣುವ ಪರಿಪಾಠವಿದೆ. ಎಲ್ಲದಕ್ಕೂ ಅದರದ್ದೇ ಆದ ಮಹತ್ವವಿದೆ; ಎಲ್ಲವೂ ದೈವಸೃಷ್ಟಿಯೇ ! ಮನುಷ್ಯ ಸಾಕು ಪ್ರಾಣಿಗಳ ನಡುವಿನ ಸಂಬಂಧ ಹಾಗೂ ಮನುಷ್ಯನ ಪ್ರಕೃತಿ, ಮರಗಳ ನಡುವಿನ ನಡುವಿನ ಜೀವನದ ವಿವಿಧ ಚಿತ್ರಣ, ಈ ಸಂಕಲದ ಎಲ್ಲ ಕಥೆಗಳಲ್ಲೂ ಮೂಡಿ ಬಂದಿರುತ್ತದೆ. ಈ ಕಥೆ ಮತ್ತು ಲಘು ಬರಹಗಳು ಎಲ್ಲ ವಯೋವರ್ಗದವರಿಗೂ ಇಷ್ಟವಾಗಬಹುದೆಂದು ಭಾವಿಸುತ್ತೇನೆ. ಹೆಚ್ಚಿನ ಶಬ್ದಾಡಂಬರವಿಲ್ಲ ಈ ಬರಹಗಳಲ್ಲಿ ; ಆಡು ಮಾತಿನ , ನಿತ್ಯ ಬಳಕೆಯ ಸರಳ ಕನ್ನಡ ಬಳಕೆ ಮಾಡಿದ್ದೇನೆ. ಪುಸ್ತಕಗಳನ್ನು ಓದುವುದು ಬಹಳ ಕಡಿಮೆ ಆಗುತ್ತಿರುವ ಈ ಕಾಲದಲ್ಲಿ, ಸರಳ ಭಾಷೆಯ , ಮಣ್ಣಿನ ಸೊಗಡು ಇರುವ ಲಘು ಹಾಸ್ಯ ಲೇಪಿತ ಕಥೆಗಳು, ಓದುಗರನ್ನು ಆಕರ್ಷಿಸಬಹುದೆಂದು ಭಾವಿಸುತ್ತೇನೆ. ಹದಿಹರೆಯದ ಮತ್ತು ಎಳೆಯ ಹೊಸ ಓದುಗರನ್ನೂ ಈ ಹಾಸ್ಯ ಲೇಪಿತ ಕಥೆಗಳು ರಂಜಿಸಬಹುದು, ತನ್ಮೂಲಕ ಓದುವ ಹವ್ಯಾಸ ಬೆಳೆಸಲು ಸಹಾಯಕಾರಿಯಾಗಲಿ ಎಂಬ ಆಶಯ ಈ ಲೇಖಕನದ್ದು !
ಪ್ರಕೃತಿಯ ಮಡಿಲಲ್ಲಿ ಬದುಕುವ ಮನುಷ್ಯ ತನ್ನ ಸುತ್ತಲಿನ ಪ್ರಕೃತಿಯ ಜೊತೆಗೆ ಒಂದು ರೀತಿಯ ಆದರ, ಪ್ರೀತಿ ಹೊಂದಿರುತ್ತಾನೆ. ತನ್ನ ಜೀವನಕ್ಕೆ ಸಹಾಯಕಾರಿಯಾಗುವ ದನ, ಎಮ್ಮೆ, ನಾಯಿ.. ಅಷ್ಟೇ ಏಕೆ ಮರಗಳ ಮೇಲೆಯೂ ಅಕ್ಕರೆ ಹೊಂದುತ್ತಾನೆ. ಪರಸ್ಪರ ಅವಲಂಬನದಿಂದ ಒಂದು ರೀತಿಯ ಅವಿನಾಭಾವ ಸಂಬಂಧ ಮೂಡುತ್ತದೆ. ಗಡಿನಾಡು ಕುಂಬಳೆಯ, ೧೯೮೦ ರ ದಶಕದ ಗ್ರಾಮೀಣ ಚಿತ್ರಣದೊಂದಿಗೆ, ಇಂತಹ ಸಂಬಂಧವನ್ನು ಪುಷ್ಟೀಕರಿಸುವ ಹಲವಾರು ಸತ್ಯಘಟನೆಗಳ ಆಧಾರಿತ ಚಿತ್ರಣವೇ ಈ ಕಥಾ ಸರಣಿ . ಓದಿರಿ, ಎಳೆಯನೊಬ್ಬನ ದೃಷ್ಟಿಕೋನದೊಂದಿಗೆ ಮೂಡಿದ ಸರಳ ಭಾಷೆಯ, ಗ್ರಾಮೀಣ ಸೊಗಡಿನ , ತಿಳಿ ಹಾಸ್ಯ ಲೇಪಿತ ಕಥಾ ಸರಣಿ "ಗೋವು, ಮಹಿಷಿ ಮತ್ತು ಮಹಾವೃಕ್ಷ ".
ಒಂದು- ಒಂದೂವರೆ ಘಂಟೆಯಷ್ಟು ಸಮಯದೊಳಗೆ, ಒಮ್ಮೆಗೇ ಓದಿ ಮುಗಿಸುವಂತಹ ಹೊಸ ಪ್ರಕಟಿತ ಪುಸ್ತಕವನ್ನು ಹುಡುಕುತ್ತಿದ್ದಿರಾ ? ಸರಳ ನಿರೂಪಣೆಯ , ಅಶ್ಲೀಲತೆಯ ಸೋಂಕಿಲ್ಲದ ತಿಳಿ ಹಾಸ್ಯ ಭರಿತ , ಮಣ್ಣಿನ ಸೊಗಡಿನ ಸತ್ಯ ಘಟನೆಗಳ ಆಧಾರಿತ ಕಥೆಗಳು ನಿಮಗಿಷ್ಟವೇ ? ಮೆಟ್ರೋ ಪ್ರಯಾಣ, ರೈಲು ಪ್ರಯಾಣ, ಬಸ್ ಪ್ರಯಾಣದಲ್ಲಿ ಒಂದಿಷ್ಟು ಸರಳ ಓದುವಿಕೆ ನಿಮಗಿಷ್ಟವೇ ? ನಿಮಗೆ ಇಷ್ಟವಾಗುವಂತಹ ಒಂದು ಹೊಸ ಪುಸ್ತಕ ಇಲ್ಲಿದೆ.
ನಿಮ್ಮ ಹದಿ ಹರೆಯದ ಮಕ್ಕಳು ಅಥವಾ ತಮ್ಮ ತಂಗಿಯಂದಿರು ಒಂದಿಷ್ಟು ವರ್ಷಗಳ ಹಿಂದಿನ ಚಿತ್ರಣವನ್ನು ಮನದಲ್ಲಿ ಮೂಡಿಸುವ ಒಂದು ಕಥೆ ಪುಸ್ತಕವನ್ನು ಓದಲು ಇಷ್ಟಪಡಬಹುದೇ ?ನೀವೂ, ನಿಮ್ಮ ಮನೆಯವರೂ ಎಲ್ಲರೂ ಓದಬಹುದಾದ ಒಂದು ಸರಳವಾದ, ಕುತೂಹಲಕಾರಿಯಾದ, ಕಥೆಗಳೊಂದಿಗೆ ಅದಕ್ಕೆ ಹೊಂದುವ ಸುಂದರ ರೇಖಾ ಚಿತ್ರಗಳೂ ಇರುವ ಒಂದು ಪುಸ್ತಕ ಇಲ್ಲಿದೆ.
ನೀವು ೮೦-೯೦ ರ ದಶಕದಲ್ಲಿ ಎಳೆಯರಾಗಿದ್ದು, ಒಂದಿಷ್ಟು ಆಟ ಪಾಠ ತುಂಟಾಟ ಮಾಡಿದವರೇ ? ಆ 'nostalgic' ನೆನಪುಗಳನ್ನು ಮೆಲ್ಲನೆ ನೇವರಿಸಿ ಆನಂದಪಡಲು ಆಸಕ್ತಿ ಇದೆಯೇ ? ಅದರೊಂದಿಗೆ, ನಿಮ್ಮ ಮಕ್ಕಳಿಗೆ ನಿಮ್ಮ ಬಾಲ್ಯ ಹೇಗಿತ್ತು ಎಂಬುದರ ಚಿತ್ರಣವನ್ನು ಕೊಡಲೂ ಸಾಧ್ಯವಾದರೆ ಹೇಗಿರುತ್ತದೆ ? ನಿಮ್ಮನ್ನು ನಿಮ್ಮ ಬಾಲ್ಯಕಾಲಕ್ಕೆ ಕೊಂಡೊಯ್ಯ ಬಲ್ಲ ಒಂದು ಕಥೆ ಪುಸ್ತಕ ಇಲ್ಲಿದೆ !
ಓದಿರಿ ' ಗೋವು , ಮಹಿಷಿ ಮತ್ತು ಮಹಾವೃಕ್ಷ ' ಎಂಬ ಈ ಕಥಾ ಸರಣಿಯನ್ನು !
ಪುಟಗಳು: 125
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !