Click here to Download MyLang App

ಸಂಯುಕ್ತಾ ಪುಲಿಗಲ್,    ಗೂಡಿನಿಂದ ಬಾನಿಗೆ (ಆಡಿಯೋ ಬುಕ್),  ಗೂಡಿನಿಂದ ಬಾನಿಗೆ,  sparsha rk,  Samyuktha Puligal,  Samyukta Puligal , liftoff,  lift off,  hema hattangady,  harivu,  Goodininda Baanige,  conzerv,

ಗೂಡಿನಿಂದ ಬಾನಿಗೆ (ಆಡಿಯೋ ಬುಕ್) | Goodininda Baanige (Audiobook)

audio book

ಪಬ್ಲಿಶರ್
ಸಂಯುಕ್ತಾ ಪುಲಿಗಲ್
ಮಾಮೂಲು ಬೆಲೆ
Rs. 249.00
ಸೇಲ್ ಬೆಲೆ
Rs. 249.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಮೂಲ ಲೇಖಕಿ: ಹೇಮಾ ಹಟ್ಟಂಗಡಿ

ಕನ್ನಡ ಅನುವಾದ: ಸಂಯುಕ್ತಾ ಪುಲಿಗಲ್

ಪ್ರಕಾಶಕರು: ಮೈಲ್ಯಾಂಗ್ ಪ್ರಕಾಶನ 

 

ಓದಿದವರು:

ಸ್ಪರ್ಶ ಆರ್. ಕೆ. (Sparsha RK)

ನಿರ್ಮಾಣ : ಹರಿವು ಕ್ರಿಯೇಷನ್ಸ್ (Harivu Creations)

ಆಡಿಯೋ ಪುಸ್ತಕದ ಅವಧಿ : 6 ಗಂಟೆ 26 ನಿಮಿಷ (6 hours 26 mins)

  • ಒಂದು ಸಾಮಾನ್ಯ ಕುಟುಂಬದಲ್ಲಿ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ ಹೇಮಾ ಅವರು ಕನ್ಸರ್ವ್ ಅನ್ನುವ ಡಿಜಿಟಲ್ ವಿದ್ಯುತ್ ಮೀಟರುಗಳ ಕಂಪನಿಯನ್ನು ಕಟ್ಟಿ, ಬೆಳೆಸಿದ ಕತೆ ಗೂಡಿನಿಂದ ಬಾನಿಗೆ
  • ವಿದ್ಯುತ್ ಉದ್ದಿಮೆಯಂತಹ ಭ್ರಷ್ಟಾಚಾರದ ಆಗರದಲ್ಲಿ ಭ್ರಷ್ಟಾಚಾರಕ್ಕೆ ಚೂರು ಅವಕಾಶ ಕೊಡದೇ ಅತ್ಯಂತ ಯಶಸ್ವಿಯಾದ, ಪಾರದರ್ಶಕವಾದ ಸಂಸ್ಥೆಯೊಂದನ್ನು ಕಟ್ಟಿ ಗೆಲುವು ಸಾಧಿಸಿದ ಕತೆ ಗೂಡಿನಿಂದ ಬಾನಿಗೆ
  • ಧಾರವಾಡದಲ್ಲಿ ಓದಿ, ಬೆಳೆದು, ಕಲ್ಕತ್ತೆಯ ಐಐಎಂನಲ್ಲಿ ಎಂಬಿಎ ಪದವಿ ಪಡೆದು ಎರಡು ದಶಕಗಳಲ್ಲಿ ಭಾರತದಲ್ಲೇ ಹೆಸರುವಾಸಿಯಾದ ಸಂಸ್ಥೆ ಕಟ್ಟಿ ಜಗತ್ತಿನ ಖ್ಯಾತ ಬಿಸಿನೆಸ್ ಸ್ಕೂಲ್ಸ್ ಅಲ್ಲಿ ಪಠ್ಯವಾಗುವಂತಹ ಯಶೋಗಾಥೆ ನಿರ್ಮಿಸಿದ ಛಲಗಾತಿ ಹೆಣ್ಣಿನ ಕತೆ ಗೂಡಿನಿಂದ ಬಾನಿಗೆ
  • ಸಂಸ್ಥೆಯೆಂದರೆ ಮಾಲೀಕ, ನೌಕರ ಅನ್ನುವ ಸಂಬಂಧವಲ್ಲ, ಅದೊಂದು ಕುಟುಂಬದ ಸಂಬಂಧ ಅನ್ನುವಂತೆಯೇ ಸಂಸ್ಥೆಯನ್ನು ರೂಪಿಸಿ ಉದ್ಯೋಗಿಗಳಿಗೆಲ್ಲ ಒಳ್ಳೆಯ ಕೆಲಸ, ಏಳಿಗೆ ಸೃಷ್ಟಿಸಿದ ಕನ್ಸರ್ವ್ ಅನ್ನುವ ಸಂಸ್ಥೆಯ ಕತೆ ಗೂಡಿನಿಂದ ಬಾನಿಗೆ

ಭಾರತದಲ್ಲಿ ವಿದ್ಯುತ್ ಉದ್ದಿಮೆಯೆನ್ನುವುದು ಭ್ರಷ್ಟಾಚಾರಕ್ಕೆ ಹೆಸರುವಾಸಿ. ಈ ಕ್ಷೇತ್ರದಲ್ಲಿ ಉತ್ಪಾದನೆ, ವಿತರಣೆ, ಮಾರಾಟ ಹೀಗೆ ಎಲ್ಲ ಹಂತದಲ್ಲೂ ಬಹುತೇಕ ಗಂಡಸರದ್ದೇ ಕಾರುಬಾರು. ಅಂತಹ ಕ್ಷೇತ್ರಕ್ಕೆ ಕಾಲಿಟ್ಟು, ಭ್ರಷ್ಟಾಚಾರಕ್ಕೆ ಚೂರು ಸೊಪ್ಪು ಹಾಕದೇ ಒಂದು ಅದ್ಭುತವಾದ ಸಂಸ್ಥೆ ಕಟ್ಟಿ ತೋರಿಸಿದ, ಧಾರವಾಡದಿಂದ ಹಾರ್ವರ್ಡ್‌ವರೆಗೆ ಹಬ್ಬಿದ ಸಾಧಕಿ ಹೇಮಾ ಹಟ್ಟಂಗಡಿ ಅವರ ಬದುಕಿನ ಕತೆ ಲಿಫ್ಟ್ ಆಫ್ ಅನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿತ್ತು. ಅದನ್ನು ಈಗ ಮೈಲ್ಯಾಂಗ್ ಪ್ರಕಾಶನ ಕನ್ನಡಕ್ಕೆ ತಂದಿದೆ. ಕನ್ನಡದ ಭರವಸೆಯ ಯುವ ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  

Goodininda baanige is the Kannada translation of Hema Hattangady 's life story "Lift Off", published in English by Amazon's West Land. In a completely male dominated and corruption ridden energy industry, Hema, as the CEO of Conzerv Systems, showed the world on how a successful company can be built without resorting to any corrupt means, how a people centric work culture can excel in bringing the best out of people, how a family owned business can be transformed to become one of corporate India's most professionally run business. No wonder Conzerv became one of India's most successful energy efficiency companies and later acquired by Schneider electric. Conzerv's remarkable journey is studied at several business schools in the world including at Harvard Business school!

This story is riveting, engaging and inspiring and is translated to Kannada by one of the very promising Kannada writers of the last decade Samyuktha Puligal 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ. 

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
V
Vasishta Shastry
ಒಂದು ಅತ್ಯುತ್ತಮ ಪುಸ್ತಕ : ಕೇವಲ ಕಥೆಯಲ್ಲ ಇದು, ಪ್ರಯಾಣ

ಈ ಧ್ವನಿಪುಸ್ತಕ ನನ್ನ ಜೀವನದ ಮೊದಲ ಧ್ವನಿ ಪುಸ್ತಕ ಎನ್ನಬಹುದು ಮತ್ತು, ಇದೆ ಪುಸ್ತಕವಾಗಿದುದು ಬಹಳ ಖುಷಿಯ ಸಂಗತಿ

ಈ ಪುಸ್ತಕ ಕೇವಲ ಕಥೆಯಾಗಿರದೆ ಸಂಸ್ಥೆ/conserve communityಯ ಪಯಣವನ್ನು ಬಿಚ್ಚಿಡುತ್ತದೆ,
ನೀವೊಬ್ಬ entrepreneur ಆಗಿದ್ದಲ್ಲಿ ಈ ಪುಸ್ತಕ ಸಹಾಯ ಮಾಡಬಲ್ಲದು, ನೀವೊಬ್ಬ ಸಮಾಜ ಶಾಸ್ತ್ರಾಸಕ್ತರಾದರೆ ಒಂದು ಕುತೂಹಲಕಾರಿ ಕಥೆಯಾಗಬಲ್ಲದು. ಯಾರಿಗೆ ಆದರೂ ಒಳ್ಳ್ಳೆ ಮೌಲ್ಯಗಳು ಸಿಗುವುದರಲ್ಲಿ ಯಾವ ಸಂದೇಹವೂ ಇಲ್ಲ .
ಆಡಿಯೋ ಮೇಕಿಂಗ್ ಕೂಡ ಚೆನ್ನಾಗಿದೆ.

R
Ramesha

Excellent

P
P.S.
ಹೆಣ್ಣುಮಕ್ಕಳು ಓದಲೇ ಬೇಕಾದ ಪುಸ್ತಕ.

'ಗೂಡಿನಿಂದ ಬಾನಿಗೆ ' ಚಂದದ ಪುಸ್ತಕ.ಮಹಿಳೆಯೊಬ್ಬಳ ಸಾಧನೆಯ ಕತೆ.ಸಾಧನೆಯ ಮಾರ್ಗದಲ್ಲಿ ಆಕೆಯ ಅಡೆತಡೆಗಳು ,ಪುರುಷ ಪ್ರಧಾನ ವ್ಯವಸ್ಥೆಯ ಕುಹಕಗಳು ಎಲ್ಲವನ್ನೂ ಮೀರಿ ನಡೆದ ಕತೆ

'ನಿಮ್ಮ ತಾಂತ್ರಿಕ ವಿಭಾಗದಲ್ಲಿ ಗಂಡಸರು ಯಾರೂ ಇಲ್ಲವಾ 'ಎನ್ನುವ ಸಮಾಜದ ಪ್ರಶ್ನೆಯನ್ನು ಕೇಳಿಸಿಕೊಳ್ಳುತ್ತಲೇ  ಸಂಸ್ಥೆ ಬೆಳೆಸಿದವರು ಹೇಮಾ ಹಟ್ಟಂಗಡಿ.

ಹೆಣ್ಣುಮಕ್ಕಳೆಂದರೆ ಹೊರೆಯೆಂದು ನೋಡುವ ಕಾಲಕ್ಕೆ "ನನಗೆಂದೂ ಗಂಡು ಮಗುವಿನ ಅಭಾವ ಕಾಡಲಿಲ್ಲ,ನನ್ನ ಹೆಣ್ಣು ಮಕ್ಕಳು ಗಂಡುಮಕ್ಕಳಿಗೆ ಸಮಾನ ಅಥವಾ ಅವರಿಗಿಂತ ಹೆಚ್ಚು" ಎಂದು ನುಡಿದು,ಗುಣಮಟ್ಟದ ಶಿಕ್ಷಣ ನೀಡುವ ಪರಿಪಕ್ವ ತಾಯಿಯಿಂದ  ಶುರುವಾಗುವ ಕತೆಯ ಪ್ರತಿಪುಟದಲ್ಲಿಯೂ ಸ್ಪೂರ್ತಿಯಿದೆ. ಗೆಲ್ಲುವ ಪ್ರಯತ್ನದಲ್ಲಿ ಕೆಲವೊಮ್ಮೆ ಸೋಲುವ,ಸೋತು ಕಣ್ಣೀರಾಗುವ,ಆದರೆ ಮರುಕ್ಷಣವೇ ಎದ್ದು ನಿಂತು ಮತ್ತೆ ಬದುಕಿನ ಹೋರಾಟಕ್ಕೆ ಅಣಿಯಾಗುವ ದಿಟ್ಟ ಹೆಣ್ಮಗಳೊಬ್ಬಳ ಕತೆ.

ಮೇಲ್ನೋಟಕ್ಕೆ ಇದು ಹೇಮಾರವರ ಸಾಧನೆಯ ಯಶೋಗಾಥೆ.ಆದರೆ ಪುಸ್ತಕದ ಒಳಹೊಕ್ಕು ನೋಡಿದಾಗ ಹೆಣ್ಣೊಬ್ಬಳು ದೊಡ್ಡ ಜವಾಬ್ದಾರಿಯನ್ನು ಹೊತ್ತಾಗ ಅಥವ ಹೊರುವ ಪ್ರಯತ್ನ ಮಾಡಿದಾಗ ಆಕೆ ಎದುರಿಸಬೇಕಾದ ಹತ್ತಾರು ಸಮಸ್ಯೆಗಳನ್ನು ತುಂಬ ಸುಂದರವಾಗಿ ವಿವರಿಸಿದೆ ಪುಸ್ತಕ.

ಪುಸ್ತಕದ ಬರವಣಿಗೆಯ ಬಗ್ಗೆ ಹೇಳುವುದಾದರೆ ಇಲ್ಲಿ ಎಲ್ಲಿಯೂ ಗೊಂದಲ ಹುಟ್ಟಿಸದ ನಿರೂಪಣಾ ಶೈಲಿ ಇಷ್ಟವಾಯಿತು.ಹೇಮಾರ ವ್ಯಕ್ತಿತ್ವದ ಚಿತ್ರಣ ಮೆಚ್ಚುಗೆಯಾಯಿತು.ಅವರ ವೃತ್ತಿಜೀವನ ಮತ್ತು ಕೌಟುಂಬಿಕ ಬದುಕಿನ ಘಟನಾವಳಿಗಳನ್ನು ಚಂದವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಲೇಖಕಿ ಸಂಯುಕ್ತಾ ಪುಲಿಗಲ್.

ಸಾಮಾನ್ಯವಾಗಿ ನಾವು ಆಡಿಯೊ ಪುಸ್ತಕ ಕೇಳುವುದು ಕಡಿಮೆ ಅಥವಾ ಇಲ್ಲವೇ ಇಲ್ಲ.ಆದರೆ ಮೊದಲ ಬಾರಿ ಆಡಿಯೊ ಪುಸ್ತಕ ಕೇಳಿದೆವು.ಆಡಿಯೊ ಬುಕ್ ಬಗ್ಗೆ ಹೇಳುವುದಾದರೆ ಸ್ಪಷ್ಟ ಕನ್ನಡ, ಉಚ್ಚಾರಣೆಯ ಮೂಲಕ ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಸ್ಪರ್ಶಾ ಆರ್.ಕೆ. ಧ್ವನಿಯಲ್ಲಿ ಸಂದರ್ಭಕ್ಕೆ ತಕ್ಕ ಭಾವನೆಗಳನ್ನು ಸಹ ಬಂದಿವೆ.ಒಟ್ಟಾರೆಯಾಗಿ ಒಂದೊಳ್ಳೆಯ ಪುಸ್ತಕ.

S
S.V.
ಸ್ಫೂರ್ತಿ ತುಂಬುವ, ಸಮಸ್ಯೆಗಳನ್ನು ಸರಳವಾಗಿ ಸೆಣೆಸಬಹುದು ಎಂದು ಹೇಳುವ ಮತ್ತು ಛಲ ಬಿತ್ತುವ ಪುಸ್ತಕ ಇದಾಗಿದೆ.

ಪುಸ್ತಕ ಓದಿಮುಗಿಸಿ ೨ ವಾರವಾಗಿದೆ. ನನ್ನನ್ನು, ನನ್ನ ವೃತ್ತಿಜೀವನವನ್ನು ಕಾಡುವ ವಿಷಯಗಳೇ ಸಾಲು ಸಾಲಾಗಿ ಪುಸ್ತಕದ ತುಂಬೆಲ್ಲಾ ಸುಳಿದಾಡಿವೆ. Sparsha Rk ನಿಮ್ಮ ಧ್ವನಿ ಇಂದ ಈ ಪುಸ್ತಕ ಮತ್ತಷ್ಟು ನನಗೆ ಹತ್ತಿರವಾಗಿದೆ.

ಹೆಣ್ಣುಮಕ್ಕಳೇ ಹುಟ್ಟಿರುವ ಕುಟುಂಬದಲ್ಲಿ "ನನಗೆಂದೂ ಗಂಡು ಮಗುವಿನ ಅಭಾವ ಕಾಡಲಿಲ್ಲ" ಎಂದು ಸಮಾಜಕ್ಕೆ ಹೇಳಿ, ಒಂದು ಗಂಭೀರ ಜವಾಬ್ಧಾರಿಯಿಂದ ಉತ್ತಮ ಶಿಕ್ಷಣ ನೀಡುವ ತಾಯಿಯಿಂದ ಶುರುವಾಗುವ ಅಧ್ಯಾಯ. ಒಂದು ಸಾಮಾನ್ಯ ಕುಟುಂಬದ ಹೆಣ್ಣುಮಗು 15 ವರ್ಷದಿಂದ 30 ರ ನಡುವಿನ ವಯಸಿನಲ್ಲಿ ಆಗುವ ಬಹಳಷ್ಟು ಬದಲಾವಣೆ, ಅಂದರೆ - ಉನ್ನತ ಶಿಕ್ಷಣ, ಮದುವೆ, ಹೊಸ ಮನೆಯ ವಾತಾವರಣದಲ್ಲಿ ಕಲಿಕೆ-ಹೊಂದಿಕೆ ಮತ್ತು ಮಕ್ಕಳು. ಇವೆಲ್ಲದರ ನಡುವೆ ಕೌಟುಂಬಿಕ ಉದ್ಯಮದ ಏಳಿಗೆಗೆ ದಣಿಸಬೇಕಾದ ಒಂದು ಸ್ತ್ರಿ ಶಕ್ತಿಯೇ ಈ ಪುಸ್ತಕದ ಮುಂದಾಳು.

ಮಾಡಿರುವ ಅಥವಾ ಮಾಡದಿರುವ ಕೆಲಸಗಳಿಗೂ ೧ ನೇ ತಾರೀಕು ಬಂದೊಡನೆ- ಸಂಬಳ ಎಣಿಸುವ ನೌಕರರ ನಡುವೆ, ತಿಂಗಳು -ವರ್ಷಗಟ್ಟಲೆ ಸಂಬಳ ಕಾಣದಿರುವ ಒಬ್ಬ ಕೊಡುಗೆಗಾರ್ತಿ (ಇದಕ್ಕೆ ಬಹಳಷ್ಟು ಸ್ವಪ್ರೇರಣೆ ಇರಬೇಕು- note that). ಉದ್ಯೋಗದಲ್ಲಿ ಕಠಿಣವ್ಯಕ್ತಿತ್ವ, ಅಧಿಕಾರಿಯುತವಾಗಿರಬಲ್ಲ ಮತ್ತು ಒಳ್ಳೆ ಆದರ್ಶಗಳನ್ನು ಹೊಂದಿರುವ ವ್ಯಕ್ತಿ ಹೇಮಾ ಹಟ್ಟಂಗಡಿ.

ಆಶಯಗಳು ಎಷ್ಟೇ ಸ್ಪೂರ್ತಿ ತುಂಬುವಂತಿದ್ದರು ....ಬೆಟ್ಟದಷ್ಟು ಸವಾಲುಗಳು ಕಣ್ಣ ಮುಂದೆ ಎದ್ದುನಿಲ್ಲುವುದು ಒಂದು ಉದ್ಯಮದಲ್ಲಿ ಸಾಮಾನ್ಯ. ತಮ್ಮ ಕುಟುಂಬದವರೇ ಅವರ ಪ್ರತಿಸ್ಪರ್ಧಿಯಾಗಿ ಅವರ ಸಂಸ್ಥೆಯನ್ನು ಕೊಂಡುಕೊಳ್ಳುವ ಪರಿಸ್ಥಿಯಲ್ಲಿ ಉದ್ಯಮ ಮೊದಲನೇ ಬಾರಿಗೆ ನೆಲಕಚ್ಚುತ್ತದೆ. ಕನಸುಗಳು ಚೆದುರಿ ಚೂರಾಗಿ ಬೀಳುತ್ತವೆ. ಆ ಮೊದಲ ಸೋಲನ್ನು ಒಂದು ಹೊಸ ಅಧ್ಯಾಯಕ್ಕೆ ಮುನ್ನುಡಿಯಾಗಿಸಿ ಛಲದಿಂದ ಸಾಗುತ್ತ ಹೊರಡುತ್ತಾರೆ.

ವೃತ್ತಿಜೀವನ ಮತ್ತು ಕುಟುಂಬ ನಿರ್ವಹಣೆಯ ನಡುವೆ ಸಿಲುಕಿ ಒದ್ದಾಡುವ ಎಲ್ಲಾ ಹೆಣ್ಣುಮಕ್ಕಳಂತೆ ಇವರು ಕೂಡ(note that). ಮಕ್ಕಳಿಗೆ ಉತ್ತಮ ತಾಯಿ ಆಗಬೇಕೆಂಬ ಹಂಬಲ.

ಈ ಪುಸ್ತಕದಲ್ಲಿ ನನಿಗೆ ಬಹಳ ದೊಡ್ಡಮಟ್ಟಕ್ಕೆ ಕಣ್ಣುತೆರೆದ ಒಂದು ಕಲಿಕೆ ಏನಂದ್ರೆ
ಒಂದು ಉದ್ಯಮಕ್ಕೆ " ಆರ್ಥಿಕ ಬಂಡವಾಳಕ್ಕಿಂತ, ಭಾವನಾತ್ಮಕ ಬಂಡವಾಳವೇ ಹೆಚ್ಚು ಮತ್ತು ಪರಿಣಾಮಕಾರಿ".(note that)

ಪುರುಷ ಪ್ರಧಾನ ಮತ್ತು ಕೌಟುಂಬಿಕ ವ್ಯವಹಾರವನ್ನು ಒಂದು ಖಾಸಗಿ ಸಂಸ್ಥೆ ಆಗಿ ಬೆಳೆಸಿ, ಒಂದು ಬ್ರಾಂಡ್ ಅನ್ನು ಕಟ್ಟಿ . ಅಂತರಾಷ್ಟ್ರಿಯ ಸಂಸ್ಥೆ ಒಂದು ಇವರ ಸಂಸ್ಥೆ ಒಡನೆ ಸೇರುವ ಕೀರ್ತಿ ಇವರದ್ದು.

ಅವರ ವಿದ್ಯುತ್ ಉದ್ಯಮದ ಪ್ರಯಾಣವನ್ನು ಬಹಳ ಅಚ್ಚುಕಟ್ಟಾಗಿ, ತಾಂತ್ರಿಕವಾಗಿಯೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಸಾಮಾನ್ಯರಿಂದ ಒಂದು ಉನ್ನತ ಉದ್ಯಮಿ ಆಗುವ ಅವರ ಹಾದಿ "ಗೂಡಿನಿಂದ ಬಾನಿಗೆ" ಎಂಬ ಪುಸ್ತಕರೂಪದಲ್ಲಿ ರಚನೆ ಆಗಿದೆ. ಅತ್ಯುತ್ತಮವಾಗಿ ಕನ್ನಡದಲ್ಲಿ ಸರಳವಾಗಿ ಸಂಯುಕ್ತ ಪುಲಿಗಳ್ ಅವರು ಅನುವಾದಿಸಿದ್ದಾರೆ.

ಹೆಣ್ಣುಮಕ್ಕಳಿಗೆ ಸ್ಫೂರ್ತಿ ತುಂಬುವ, ಸಮಸ್ಯೆಗಳನ್ನು ಸರಳವಾಗಿ ಸೆಣೆಸಬಹುದು ಎಂದು ಪದೆ ಪದೆ ಹೇಳುವ ಮತ್ತು ಸಾಕಷ್ಟು ಛಲ ಬಿತ್ತುವ ಪುಸ್ತಕ ಇದಾಗಿದೆ.