ಪ್ರಕಾಶಕರು: ಗಿರಿಮನೆ ಪ್ರಕಾಶನ
Publisher: Girimane Prakashana
ಬರಹಗಾರರು: ಗಿರಿಮನೆ ಶ್ಯಾಮರಾವ್
ಓದಿದವರು: ಗಿರಿಮನೆ ಶ್ಯಾಮರಾವ್
ಪುಸ್ತಕ ಪ್ರಕಾರ: ವ್ಯಕ್ತಿತ್ವ ಬೆಳವಣಿಗೆ
ನಾವೊಬ್ಬರನ್ನು ಭೇಟಿಯಾದ ತಕ್ಷಣ ಮೊದಲು ನಮ್ಮ ಕಣ್ಣಿಗೆ ಬೀಳುವುದು ಅವರ ರೂಪ. ಮತ್ತೆ ಅವರ ಮಾತು. ನಂತರ ಅವರ ಗುಣ ಸ್ವಭಾವಗಳು. ರೂಪ ಕೊಟ್ಟಿದ್ದು ಭಗವಂತ. ಮಾತನ್ನು ನಾವು ಕಲಿಯುವುದು. ಹುಟ್ಟುಗುಣದ ರೂಪದಲ್ಲಿ ಬರುವ ಗುಣಸ್ವಭಾವಗಳಲ್ಲಿ ಒಳ್ಳೆಯದನ್ನು ಬೆಳೆಸಿಕೊಂಡು ಕೆಟ್ಟದ್ದನ್ನು ಬಿಡುವುದೇ ಶಿಕ್ಷಣ. ಹಾಗಾಗಿ ನಾವು ಹೇಗೆ ಮಾತಾಡುತ್ತೇವೆ ಎನ್ನುವುದು ಬಹು ಮುಖ್ಯ. ನಾವೇ ಅದರ ಬಗ್ಗೆ ತಿಳಿದು ಸರಿಪಡಿಸಿಕೊಳ್ಳುವಂಥದ್ದು. ಸ್ವದೋಷಗಳ ಅರಿವಾಗುವುದು ಕಷ್ಟ. ಮಾತಿನ ದೋಷವೂ ಅಷ್ಟೆ. ನಮಗೇ ತಿಳಿಯದಂತೆ ನಾವು ಹೇಗೋ ಮಾತನ್ನು ರೂಢಿಸಿಕೊಂಡಿರುತ್ತೇವೆ. ಅದರ ಬಗ್ಗೆ ತಿಳಿಯದೆ ಇದ್ದರೆ ಯಾವ ಮಾತಿನಿಂದ ಎಂತಹಾ ಪರಿಣಾಮವಾಗುತ್ತದೆ? ಮಾತಿನ ಬೆಲೆ ಎಷ್ಟು? ಬರಿಯ ಮಾತಿನಿಂದಲೇ ಏನೆಲ್ಲಾ ಸಾಧಿಸಬಹುದು? ಎನ್ನುವುದೇ ಅರಿವಾಗದೆ ಹೋಗುತ್ತದೆ. ನಾವು ಉತ್ತಮರಾಗಬೇಕಾದರೆ ಮೊದಲು ಮಾತಿನ ಬಗ್ಗೆ ತಿಳಿಯಬೇಕು. ನಮ್ಮ ವ್ಯಕ್ತಿತ್ವ ವಿಕಸನವಾಗುವುದು ಮಾತನ್ನು ಸರಿಯಾಗಿ ಆಡಲು ಕಲಿತರೆ ಮಾತ್ರ! ಅದರಲ್ಲೊಂದಿಷ್ಟು ವಿಷಯ ಈ ಕೃತಿಯಲ್ಲಿ ನಿಮಗೆ ಸಿಗಬಹುದು ಎನ್ನುವ ನಂಬಿಕೆ ನನ್ನದು. ಪ್ರಜಾವಾಣಿಯಲ್ಲಿ ಲೇಖನ ರೂಪದಲ್ಲಿ ದಿನನಿತ್ಯ ಪ್ರಕಟವಾಗಿ ಹತ್ತು ಸಾವಿರಕ್ಕಿಂತ ಹೆಚ್ಚು ಮಾರಾಟವಾದ ಕೃತಿ ಇದು.