ಪ್ರಕಾಶಕರು: ಅಂಕಿತ ಪುಸ್ತಕ
Publisher: Ankita Pustaka
ಓದಿದವರು:
ಗಿರಿಜಾ ಲೋಕೇಶ್
ನಿರೂಪಣೆ: ಜೋಗಿ
ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ
ಆಡಿಯೋ ಪುಸ್ತಕದ ಅವಧಿ : 8 ಗಂಟೆ 12 ನಿಮಿಷ
ಏಲಕ್ಕಿ ವ್ಯಾಪಾರ ಮಾಡಿ ಸಾಕಷ್ಟು ಸಿರಿವಂತರಾಗಿದ್ದ ತಂದೆ ರಾತ್ರೋ ರಾತ್ರಿ ಇದ್ದಿದ್ದೆಲ್ಲವನ್ನೂ ಕಳೆದುಕೊಂಡು ಮಕ್ಕಳೆಲ್ಲರು ಊಟಕ್ಕೂ ಪರದಾಡುವ ಸ್ಥಿತಿ ! ಕಷ್ಟದ ಈ ಸ್ಥಿತಿ ತಾಳಲಾಗದೆ ಮಕ್ಕಳನ್ನೆಲ್ಲ ಕೂರಿಸಿಕೊಂಡು ಮನೆಯ ಹಿಂದಿನ ಬಾವಿಗೆ ಹಾರಿ ಜೀವ ಬಿಟ್ಟುಬಿಡೋಣ ಅನ್ನುವ ಮಾತು ತಾಯಿಯಿಂದ ಬಂದಾಗ ಗಿರಿಜಮ್ಮ ಅನ್ನುವ ಈ ಗಟ್ಟಿಗಿತ್ತಿ ತಾಯಿಗೆ ಕೊಟ್ಟ ಉತ್ತರ ಏನು ಗೊತ್ತೇ?
14ರ ವಯಸ್ಸಿನಲ್ಲಿ ಮನೆಯ ಕಷ್ಟ ಪರಿಹರಿಸಲು ಎಸ್ಸೆಸ್ಸೆಲ್ಸಿ ಅರ್ಧಕ್ಕೆ ಬಿಟ್ಟು ಹುಬ್ಬಳ್ಳಿಯಲ್ಲಿ ಒಂದು ನಾಟಕ ಕಂಪನಿ ಸೇರಿ ದುಡಿಯಲು ಶುರು ಮಾಡಿ ಅಪ್ಪ, ಅಮ್ಮ, ತಮ್ಮ ಎಲ್ಲರನ್ನೂ ಸಾಕಲು ಮುಂದಾಗುವ ಇವರು ಕಾರಣಾಂತರಗಳಿಂದ ಆ ಕೆಲಸ ಬಿಡಬೇಕಾಗಿ ಬಂದಾಗ ಕೂಡಿಟ್ಟಿದ್ದ ಜೋಳದ ರೊಟ್ಟಿ ಗಿರಿಜಮ್ಮನವರ ಕುಟುಂಬದ ಹೊಟ್ಟೆ ಹೊರೆದ ಕತೆ ಗೊತ್ತೇ?
ನೀನಾಸಂ ಅಲ್ಲಿ ಕಾಕನಕೋಟೆ ನಾಟಕ ಪ್ರದರ್ಶನ ಮುಗಿಸಿ ಮರುದಿನ ಜೋಗ್ ಫಾಲ್ಸ್ ನೋಡಲು ಹೋದಾಗ ನಟ ಲೋಕೇಶ್ ಅವರು ಜಲಪಾತದಲ್ಲಿ ಬಿದ್ದೋಗೋಣ್ವಾ ಎಂದು ಕೇಳಿದಾಗ ಗಿರಿಜಾ ಲೋಕೇಶ್ ಅವರು ಏನೆಂದರು ಗೊತ್ತಾ?
ಲೋಕೇಶ್ ಅವರು ಒಂದು ದಿನ "ಎಷ್ಟು ದಿನ ಅಂತ ಹೀಗೆ ಇರ್ತೀಯಾ, ಮದ್ವೆ ಮಾಡ್ಕೊಳ್ಳಲ್ವಾ" ಅಂದರು. ಅದಕ್ಕೆ "ಮದ್ವೆನಾ. ನ್ಯಾಶನಲ್ ಅವಾರ್ಡ್ ತಗೊಂಡ ಮೇಲೆನೇ ನಾನು ಮದ್ವೆ ಆಗೋದು. ಅದು ನನ್ನ ಜೀವನದ ಗುರಿ"ಅಂತಾರೆ. ಆಗ ಲೋಕೇಶ್ ಅವರು "ನನ್ನನ್ನೂ ಮಾಡ್ಕೊಳ್ಳಲ್ವೇನೆ?" ಅಂದಾಗ ಗಿರಿಜಮ್ಮ ಏನು ಹೇಳಿದರು ಗೊತ್ತಾ?
ಮೈಸೂರಿನಿಂದ ಲೋಕೇಶ್ ಅವರಿಗೆ ಲವ್ ಲೆಟರ್ ಕಳಿಸಿದ ಗಿರಿಜಾ ಅವರು ಲೋಕೇಶ್ ಅವರ ಉತ್ತರಕ್ಕೆ ಕಾಯುತ್ತಿದ್ದರು. ಕೆಲ ದಿನದ ಮೇಲೆ ಅವರ ಪತ್ರವನ್ನು ಆಸಕ್ತಿಯಿಂದ ಒಡೆದು ಓದಿದರೆ ಅವರಿಗೆ ನಿರಾಸೆಯಾಯ್ತು. ಪತ್ರದಲ್ಲೇನಿತ್ತು ಗೊತ್ತೆ?
ಮದುವೆಗೆ ಮೂರು ಸಾವಿರ ಸಾಲ ತೆಗೆದುಕೊಂಡಿದ್ದ ಲೋಕೇಶ್ ಅವರು ಮದುವೆಯ ದಿನ ಬಂದ ಅಬ್ಬಾಯಿ ನಾಯ್ಡು ಅವರು ಕೊಟ್ಟ ಐದು ಸಾವಿರ ರೂಪಾಯಿಯ ಚೆಕ್ ಅನ್ನು ಅಬ್ಬಾಯಿ ನಾಯ್ಡು ಅವರಿಗೇ ಅಲ್ಲೇ ಮರಳಿಸಿದ್ದು ಯಾಕೆ ಗೊತ್ತಾ?
ಭೂಮಿಗೆ ಬಂದ ಭಗವಂತ ಚಿತ್ರದ ಶೂಟಿಂಗಿಗೆ ಕಾಶ್ಮೀರಕ್ಕೆ ಹೋದಾಗ ಮಗುವನ್ನು ಮಲಗಿಸಿ ಅಲ್ಲಿಯೇ ಶಾಪಿಂಗ್ ಹೋದ ಗಿರಿಜಮ್ಮನವರು ಮರಳಿ ಶೂಟಿಂಗ್ ಜಾಗಕ್ಕೆ ಬಂದರೆ ಅಲ್ಲಿ ಮಗು ಕಾಣದೇ ಕಂಗಾಲಾಗಿ ಕುದುರೆಯೇರಿ ಹುಡುಕಿದ ಗಿರಿಜಮ್ಮನವರ ಕತೆ ಗೊತ್ತೇ?
ರಾಜ್ಯ ಸರ್ಕಾರ ಕೊಡುವ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆಯಲು ವೇದಿಕೆ ಏರಿದ ಗಿರಿಜಮ್ಮನವರು ಅಂದಿನ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿಯವರಿಗೆ ಹೇಳಿದ ಒಂದು ಮಾತು ಪ್ರಶಸ್ತಿಯ ಬಹುಮಾನದ ರೂಪುರೇಷೆಯನ್ನೇ ಬದಲಾಯಿಸಿತು. ಅಷ್ಟಕ್ಕೂ ಅವರು ಹೇಳಿದ್ದೇನು?
ಹೀಗೆ ಒಬ್ಬ ದೊಡ್ಡ ಕಲಾವಿದೆಯ ನೋವು, ನಲಿವುಗಳ ನೂರಾರು ನೆನಪುಗಳ ಕಣಜ ಗಿರಿಜಾ ಲೋಕೇಶ್ ಅವರ ಆತ್ಮಕತೆ "ಗಿರಿಜಾ ಪರಸಂಗ". ಈಗ ಕೇಳಿ ಅವರದ್ದೇ ದನಿಯಲ್ಲಿ ಆಡಿಯೋಪುಸ್ತಕವಾಗಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ..