ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಏಂಗೆಲ್ಸ್ ಕುರಿತು ಹಲವಾರು ಜೀವನ ಚರಿತ್ರೆಗಳು ಬಂದಿವೆ. ಆದರೆ ಜಿ ಆರ್, ಅವರ "ಏಂಗಲ್ಸ್" ಬರೀ ಜೀವನ ಚರಿತ್ರೆಯಾಗುವುದರ ಬದಲು ಅದು ಮಾರ್ಕ್ಸ್‌ವಾದದ ಚರಿತ್ರೆಯೂ ಆಗಿದೆ. ಮಾರ್ಕ್ಸ್‌ವಾದ ಎತ್ತುವ ಹಲವಾರು ತಕರಾರುಗಳನ್ನೂ ಎದುರಿಸುತ್ತದೆ. ಅಷ್ಟೇ ಅಲ್ಲ. ಭಾರತದ ಪರಿಸ್ಥಿತಿಗೂ ಪ್ರಸ್ತುತವಾಗುತ್ತದೆ, ಏಂಗೆಲ್ಸ್ನ ಬಾಲ್ಯ. ಬಾಲ್ಯ, ತಂದೆಯೊಂದಿಗಿನ ಅಧ್ಯಯನ, ಮಾರ್ಕ್ಸ್‌ನೊಂದಿಗಿನ ಒಡನಾಟ, ಕಾವ್ಯ ರಚನೆಯ ಪ್ರಯತ್ನ, ಸ್ವ-ಇಚ್ಛೆಯಿಂದ ಮಿಲಿಟರಿ ಸೇವೆ ಹೀಗೆ ವಿಂಗೆ ಬದುಕಿನ ಒಂದೊಂದೇ ಆಯಾಮ ಇಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಎಂಗೆಲ್ಸ್ ಸ್ವಯಂ ಅನುಭವಿ, ವಿದ್ವಾಂಸ, ವೈಜ್ಞಾನಿಕ ವಿಶ್ಲೇಷಕ, ತನ್ನ ಪ್ರತಿಭೆಯನ್ನು ಸ್ವತಂತ್ರ ಅಧ್ಯಯನ - ಬರವಣಿಗೆಗಳಿಗೆ ಇನ್ನೂ ಹೆಚ್ಚಾಗಿ ಮೀಸಲಿಡಬಹುದಿತ್ತು. ತನ್ನ ವಿದ್ವತ್ತನ್ನು ಮಾರ್ಕ್ಸ್ರ ಅಧ್ಯಯನ, ಸಂಶೋಧನೆ ಮತ್ತು ಪ್ರಕಟಣೆಗಳಿಗೆ ಪೂರಕವಾಗಿ ಮಾತ್ರ ಮಾಡದೆ. ಯಥೇಚ್ಛವಾಗಿ ತನ್ನದೇ ಆದ ಪ್ರಣಾಳಿಕೆಯನ್ನು ಬೆಳೆಸಬಹುದಿತ್ತು. ಆದರೆ ಅವರ ಹೆಚ್ಚಿನ ಉದ್ದಂಥಗಳು ಒಂದರ್ಥದಲ್ಲಿ ಮಾರ್ಕ್ಸ್ ಕೃತಿಗೆ ಪೂರಕವಾಗಿ ಬಂದಿವೆ. ಆವರು ಮಾರ್ಕ್ಸ್ನೊಡಗೂಡಿ ರಚಿಸಿದ "ಪವಿತ್ರ ಕುಟುಂಬ", "ಜರ್ಮನಿಯ ಸೈದ್ಧಾಂತಿಕ ತತ್ವ", "ಕಮ್ಯುನಿಸ್ಟ್ ಪ್ರಣಾಲಿಕೆ", "ಪ್ರಕೃತಿಯಲ್ಲಿ ಗತಿತಾರ್ಕಿಕತೆ" ಮುಂತಾದವುಗಳು ಏಂಗೆಲ್ಸ್ ನ ಬದುಕಿನ ಬಹುಮುಖ್ಯ ಘಟನೆಯಾದ ಮಾರ್ಕ್ಸ್ನ ಸಖ್ಯದಿಂದ ರಚಿತವಾದವು. ಇಂಥ ಮೇರು ವ್ಯಕ್ತಿಯನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟಿರುವ ಜಿ. ಆರ್. ಅಭಿನಂದನಾರ್ಹರು.
- ಟಿ. ಎಸ್. ವೇಣುಗೋಪಾಲ್
ಪುಟಗಳು: 144
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !