ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
“ನನ್ನಲ್ಲಿರುವ ಎಲ್ಲ ಒಳ್ಳೆಯದಕ್ಕೂ ಪುಸ್ತಕಗಳೇ ಕಾರಣ. ನನ್ನ ತಾರುಣ್ಯದಲ್ಲೇ ನನಗೆ ಸುತ್ತಲಿದ್ದ ಜನರಿಗಿಂತ ಕಲೆಯೇ ಹೆಚ್ಚು ವಿಶಾಲವೂ ಉದಾರಿಯೂ ಆದದ್ದು ಎನಿಸಿತ್ತು. ನಾನೊಬ್ಬ ಪುಸ್ತಕ ಪ್ರೇಮಿ, ಒಂದೊಂದು ಪುಸ್ತಕವೂ ನನಗೊಂದು ಪವಾಡದಂತೆ ಕಾಣುತ್ತದೆ. ಲೇಖಕನು ಮಂತ್ರವಾದಿ ಎನಿಸುತ್ತದೆ. ಆಳವಾದ ಭಾವುಕತೆಯಿಲ್ಲದೆ, ಆನಂದೋತ್ಸಾಹವಿಲ್ಲದೆ ನಾನು ಪುಸ್ತಕಗಳ ಬಗ್ಗೆ ಮಾತನಾಡಲಾರೆ.”
-ಮ್ಯಾಕ್ಸಿಂ ಗಾರ್ಕಿ.
ಪುಸ್ತಕ ಓದುವ ಸಂಸ್ಕೃತಿ ನಮ್ಮಲ್ಲಿರುವ ಕೋಪ, ಅಹಂಕಾರ, ಹಮ್ಮುಬಿಮ್ಮುಗಳನ್ನು ಅಳಿಯುವಂತೆ ಮಾಡುತ್ತದೆ. ಆನಂದದ ಮಾರ್ಗವನ್ನು, ಸಂತೋಷದ ದಾರಿಗಳನ್ನು ಕಲ್ಪಿಸುತ್ತದೆ. ಅಂತಹ ಓದುಗರಿಗಾಗಿ “ಎಂಟು ದಿಕ್ಕು ನೂರೆಂಟು ಕಥೆ” ಎಂಬ ಪುಸ್ತಕ ಎಂದೆನಿಸುತ್ತದೆ.
“ಎಂಟು ದಿಕ್ಕು ನೂರೆಂಟು ಕಥೆ” ಪುಸ್ತಕದಲ್ಲಿ ಆಯ್ದ ಪಾಶ್ಚಿಮಾತ್ಯ ಸಾಹಿತ್ಯಲೋಕದಲ್ಲಿನ ಜಗತ್ತಿಗೆ ಶ್ರೇಷ್ಠ ಕೃತಿಗಳನ್ನು ನೀಡಿದ ಒಟ್ಟು ನಲವತ್ತು ಲೇಖಕರ ಲೇಖನಗಳಿವೆ. ಪ್ರತಿಯೊಂದು ಲೇಖನವು ಸೀಮಿತ ಚೌಕಟ್ಟಿನಲ್ಲಿದ್ದರೂ ಆಯಾ ಲೇಖಕರ ಪ್ರಮುಖ ಕೃತಿಗಳ ಚಿತ್ರಣವನ್ನು ಓದುಗರಿಗೆ ನೀಡುತ್ತವೆ. ಒಂದೊಂದು ಲೇಖನ ಮುಗಿದಾಗಲೂ ಮೂಲ ಕೃತಿ ಎಲ್ಲಿದೆ ಓದಬೇಕು ಎಂಬ ಹಂಬಲ ಉಂಟಾಗುತ್ತದೆ. ಅಷ್ಟು ಚೆನ್ನಾಗಿ ಲೇಖನಗಳು ಮೂಡಿಬಂದಿವೆ. ಪುಸ್ತಕ ಓದುವ ಹುಚ್ಚಿರುವ ನನಗೆ ಈ ಪುಸ್ತಕ ಭಕ್ಷಭೋಜನ ಸವಿದಂತಾಯ್ತು.
- ಪುಸ್ತಕಪ್ರೇಮಿ ಬ್ಲಾಗ್ ವಿಮರ್ಶೆ
ಪುಟಗಳು: 192
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !