ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕಿ: ಡಾ|| ಎಚ್. ಎಸ್. ಅನುಪಮಾ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಭಾರತ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಇತಿಹಾಸವು ಎಂದಿಗೂ ಮರೆಯಲಾಗದಂತಹ ಚಿಂತನೆಗಳನ್ನು ನೀಡಿ ಪ್ರಭಾವಿತ ಗೊಳಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಡಾ|| ಬಿ. ಆರ್. ಅಂಬೇಡ್ಕರ್‍ರವರು ತಮ್ಮ ಸಮಕಾಲೀನ ರಾಜಕೀಯ ನಾಯಕರಲ್ಲಿ ಅತ್ಯಂತ ಹೆಚ್ಚಿನ ವಿದ್ಯಾವಂತರಾಗಿದ್ದರು. ತಮ್ಮ ಬಹುಜ್ಞಾನ ಶಿಸ್ತುಗಳಿಗೆ ಹೆಸರಾದವರು. ಕೋಳಿ ಸಾಕಣೆಯಿಂದ ಹಿಡಿದು ಸಾಪೇಕ್ಷ ಸಿದ್ಧಾಂತದವರೆಗೆ ಮಾತನಾಡಬಲ್ಲವರಾಗಿದ್ದರು. ಅಂಬೇಡ್ಕರ್ ಅವರ ಪುಸ್ತಕ ಪ್ರೀತಿ ಅಸದಳ. ಲಂಡನ್ನಿನ ದುಂಡು ಮೇಜಿನ ಪರಿಷತ್ತಿಗೆ ಹೋಗಿದ್ದ ಅಂಬೇಡ್ಕರ್ ಅಲ್ಲಿ 57 ಪೆಟ್ಟಿಗೆಗಳಷ್ಟು ಪುಸ್ತಕಗಳನ್ನು ಕೊಂಡು ಭಾರತಕ್ಕೆ ಹಡಗಿನ ಮೂಲಕ ರವಾನಿಸಿದ್ದರು. ತಮ್ಮ ಅಂತಿಮ ದಿನಗಳಲ್ಲಿ ಅನಿಯಂತ್ರಿತ ಮಧುಮೇಹದ ಕಾರಣ ಅವರ ದೃಷ್ಟಿ ಮಂಜಾಗಲಾರಂಭಿಸಿದಾಗ "ನನಗೆ ಕಣ್ಣು ಕಾಣದಿದ್ದರೆ ನಾನು ಹೇಗೆ ಓದಲಿ?" ಎಂದು ಮಕ್ಕಳಂತೆ ಅತ್ತರು. ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ 18 ಗಂಟೆಗಳ ಕಾಲ ಓದುತ್ತಿದ್ದರು ಅಂಬೇಡ್ಕರ್! ಅಂಬೇಡ್ಕರ್ ಅವರು ಯಾವುದೇ ವಿಷಯವನ್ನಾಗಲಿ ಮೂಲ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಅವರ ವಿಶೇಷ ಗುಣವಾಗಿತ್ತು. ಈ ದೇಶದ ದಲಿತರ ಬಗ್ಗೆ, ಶೋಷಿತರ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಅಂಬೇಡ್ಕರ್ ವಹಿಸಿದಷ್ಟು ಕಾಳಜಿ, ಬಹುಶಃ ಮತ್ಯಾವ ನಾಯಕನೂ ವಹಿಸಲಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !