‘ದಿಗಂತ’ದ ಕಥಾವಸ್ತು ಸ್ಥೂಲವಾಗಿ ಹೀಗೆ- ಎತ್ತಂಗಡಿ ಎಂಬುದೊಂದು ಐವತ್ತು ಸಾವಿರ ಜನಸಂಖ್ಯೆಯ, ಕಾಡು ಪ್ರದೇಶದ ಸಣ್ಣ ಊರು. ಇಲ್ಲೊಂದು ಕಾಲೇಜಿದೆ. ಮಮ್ಮದೆ ಅಂಡ್ ಮಮ್ಮದೆ ಸಾಮಿಲ್’ನ ಇಬ್ಬರು ಮಾಲೀಕರಿಗೆ ಅಲ್ಲಿ ಕಾನೂನು ಬಾಹಿರವಾಗಿ ಕಾಡು ಕಡಿದು ಮರವನ್ನು ಮಾರುವುದೇ ವ್ಯವಹಾರ. ಡಾ. ಸಾರ್ಕುಡೇಲ್ ಎಂಬ ಜನಪರ ವೈದ್ಯರದ್ದು ಕಮ್ಯುನಿಷ್ಟ್ಪರ ಒಲವು. ಆತ ಖಾಸಗಿ ವೈದ್ಯ ನಾದರೆ ಭೃಷ್ಟಾಚಾರದಿಂದಲೇ ವೃತ್ತಿ ನಡೆಸುವ ಡಾ. ರಾಜರತ್ನಂ ಅಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯ. ಸಿದ್ಧಪ್ಪ ಅಲ್ಲಿನ ಕಾಂಪೌಂಡರ್ ಪಾಯಸ್? ಅಲ್ಲಿನ ಚರ್ಚನ ಪಾದ್ರಿ. ಡಾ. ಕೊಲಂಬಸ್ ಎಂಬ ವೈರಾಣು ವಿಜ್ಞಾನಿ ಇಲ್ಲಿನ ಅಪ್ರತ್ಯಕ್ಷ ಪಾತ್ರ. ಸುಬ್ಬಯ್ಯ ಎಂಬ ಕಾಲೇಜು ಹುಡುಗ. ಡಾ. ಸಾರ್ಕುಡೇಲರ ದತ್ತುಪುತ್ರನಂತಿರುವ ಬಡ ರೈತಕಾರ್ಮಿಕನ ಮಗ. ಡಾ.ರೆಡ್ಡಿ - ಕಾಲೇಜಿನ ವಿಜ್ಞಾನ ಅಧ್ಯಾಪಕರಾದರೆ ಶೀಂತ್ರಿ ಎಂಬಾತ ಸಹ ಅಲ್ಲಿ ಅಧ್ಯಾಪಕ. ಇದಲ್ಲದೆ ಇನ್ನೊಂದಿಬ್ಬರು ಸ್ಥಳೀಯ ರಾಜಕಾರಣದ ಆಕಾಂಕ್ಷೆಯುಳ್ಳ ಪಾತ್ರಗಳಿಲ್ಲಿದ್ದಾವೆ.
ಪುಟಗಳು: 150
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !