Click here to Download MyLang App

ದೇವರ ಕಾಲೋನಿ,  ಚಂದ್ರಶೇಖರ್ ಬಂಡಿಯಪ್ಪ,  Devara Coloni,  Chandrashekhar Bandiyappa,

ದೇವರ ಕಾಲೋನಿ (ಇಬುಕ್)

e-book

ಪಬ್ಲಿಶರ್
ಚಂದ್ರಶೇಖರ ಬಂಡಿಯಪ್ಪ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್‌

Publisher: Sahityaloka Publications

  

ಸಿನಿಮಾ ಪತ್ರಕರ್ತ, ಚಿತ್ರಕಥೆ, ಸಂಭಾಷಣೆಗಳ ರಚನೆಯ ಮೂಲಕ ಬಣ್ಣದ ಲೋಕದಲ್ಲಿ ಗುರುತಿಸಿಕೊ೦ಡಿರುವ ಯುವ ಬರಹಗಾರ ಟಿ.ಜಿ ನಂದೀಶ್‌ ಅವರು ತಾವು ಮೆಚ್ಚಿದ ಪುಸ್ತಕದ ಬಗ್ಗೆ ಇಲ್ಲಿ ಬರೆದಿದ್ದಾರೆ. ಅ೦ದಹಾಗೆ 'ದೇವರ ಕಾಲೋನಿ' ಎನ್ನುವ ಈ ಪುಸ್ತಕವನ್ನು 'ರಥಾವರ' ಖ್ಯಾತಿಯ ಚಿತ್ರನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ರಚಿಸಿದ್ದಾರೆ. 

‘ದೇವರ ಕಾಲೋನಿ’ಯಲ್ಲಿ ಒಂದು ಸುತ್ತು. 

ನಾನು ಕಥಾ ಸ೦ಕಲನಗಳನ್ನು ಓದುವುದು ತೀರಾ ಕಡಿಮೆ. ಓದುವಿಕೆಗಿ೦ತ ಬರವಣಿಗೆಯೇ ಪ್ರಿಯವಾದ ಕಾರಣ ಅದರಲ್ಲೇ ಹೆಚ್ಚು ಸಮಯ ಕಳಯುತ್ತೇನೆ. 

ಆದರೆ ಕಳೆದ ಕಲವು ದಿನಗಳಿಂದ ನನ್ನ ಓದಿನಲ್ಲಿ ಮುಳುಗುವಂತೆ ಮಾಡಿದ, ನನ್ನ ಮನಸನ್ನು ಆವರಿಸಿದ ಪುಸ್ತಕ 'ದೇವರ ಕಾಲೋನಿ'. 

‘ರಥಾವರ' ಖ್ಯಾತಿಯ ಚಲನಚಿತ್ರ ನಿರ್ದೇಶಕ ಚ೦ದ್ರಶೇಖರ್‌ ಬ೦ಡಿಯಷ್ಟ ಅವರ ಲೇಖನಿಯಿಂದ ಅರಳಿದ ಮೂರು ವಿಭಿನ್ನ ಕಥೆಗಳ ಸ೦ಕಲನವೇ ಈ ದೇವರ ಕಾಲೋನಿ. 

ಸಾಮಾನ್ಯವಾಗಿ ಬರಹಗಾರರು, ತಮ್ಮೊಳಗಿನ ಕಥೆ ಹೇಳಲು ಸಿನಿಮಾ ಆಯ್ದುಕೊಳ್ಳುವುದು ಲೋಕಾರೂಢಿ. ಆದರೆ ಇಲ್ಲಿಅದಾಗಲೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊ೦ಡ ಚಂದ್ರಶೇಖರ್‌ ಬ೦ಡಿಯಷ್ಟ ಸಿನಿಮಾದಲ್ಲಿ ನೇರ ಮತ್ತು ನಿಖರವಾಗಿ. ಹೇಳಬೇಕೆನಿಸಿದರೂ ಹೇಳಲಾಗದ ಅಂಶಗಳನ್ನು ಹಿನ್ನೆಲೆಯಾಗಿಸಿ ಮೂರು ಅದ್ಭುತ ಕಥೆಗಳನ್ನು ಬರೆದಿದ್ಮಾರೆ. ಅದರಲ್ಲಿಯು ದೇವರ ಕಾಲೋನಿ ಮಾನವೀಯತೆ ಮತ್ತು ಅವಕಾಶವಾದಿಗಳ ನಡುವಿನ ಸತ್ಯಾಸತ್ಯತೆ ಬಟಾಬಯಸಲಾಗಿಸುತ್ತೆ. ಸಿಕ್ಕಂತೆ ಭಾಸವಾಗಿ, ಮರುಕ್ಷಣವೇ ಮಾಯಾವಾಗೋ ಬಂಧ, ಸಂಬ೦ಧಗಳ ಮೇಲೆ ಬೆಳಕು ಚೆಲ್ಲುತ್ತೆ. 

ಎರಡನೇ ಕಥೆ 'ಚೈನಾಸೆಟ್‌’ ನವಿರು ಪ್ರೀತಿಯ ಜೊತೆಗೆ ಊಹಿಸಿಲಾಗದಂಥ ಕಟುಸತ್ಯವನು ಬೆರೆಸಿ ಮತ್ತೊಂದು ವಿಭಿನ್ನ ಅನುಭವ ಕೂಡುತ್ತದೆ. ಬೆಳೆದ ಜಾಗ, ಅನುಸರಿಸುವ ಸಂಸ್ಕೃತಿ, ಅಭ್ಯಾಸವಾದ ಜೀವನಶೈಲಿ ಎಂತಹ ಸಂದಿಗ್ದಗಳನ್ನು ಸೃಷ್ಟಿಸುತ್ತದ ಎಂಬುದನ್ನು ಪ್ರತಿಬಿಂಬಿಸುತ್ತದೆ. 

ಮೂರನೇ ಕಥೆ ‘ಉಯಿಲು’. ಮೊದಲರಡು ಕಥೆಗಿಂತ ಭಿನ್ನ. ಆಧುನಿಕ ಯುಗದಲ್ಲೂ ಕೂನೆಯಾಗದ ಗೊಡ್ಡು ಸಂಪ್ರದಾಯವನ್ನು ವಿರೋಧಿಸುವ ಮತ್ತು ಹೊಸ ಆಶಯಗಳಿಗೆ ಹುಟ್ಟು ನೀಡುವ ಹೆಣ್ಮೊಬ್ಬಳ ನಿರ್ಧಾರ ಮತ್ತು ಅದರ ಸುತ್ತ ಮುತ್ತಲಿನ ಘಟನಾವಳಿಗಳನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. 

ಚಂದ್ರಶೇಖರ್‌ ಬ೦ಡಿಯಪ್ಪನವರ ಬರವಣಿಗೆಯಲ್ಲಿ ನಾವೀನ್ಯತೆ ಇದೆ, ಸಲೀಸಾಗಿ ಓದಿಸಿಕೊಳ್ಳುತ್ತದೆ. ಕಥೆಯಲ್ಲಿನ ವೇಗ ಸಿನಿಮಾವೊಂದರಲ್ಲಿ ಕಾಣಬಹುದಾದ ರೋಚಕತೆಯನ್ನು ಹೊಂದಿದೆ. ಪುಸ್ತಕ ಪ್ರಕಟಿಸುವ ಅವರ ಹಲವು ವರ್ಷಗಳ ಕನಸು ಸಾಕಾರಾಗೊಳ್ಳಲು ಪರೋಕ್ಷವಾಗಿ ಕಾರಣವಾಗಿದ್ದು ಲಾಕ್‌ ಡೌನ್‌ ಮತ್ತು ಲಾಕ್‌ ಡೌನ್‌ ಸ೦ದರ್ಭದಲ್ಲಿ ಸಿಕ್ಕ ಅಮೂಲ್ಯ ಬಿಡುವಿನ ಸಮಯ. ಒ೦ದು ಅದ್ಭುತ ಕಥಾಸ೦ಕಲನ ಬರೆಯುವ ಮೂಲಕ ಆ ಸಮಯವನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. 

ಪುಸ್ತಕ ಪ್ರಿಯರ ಜೊತೆಗೆ ಸಿನಿಪ್ರಿಯರು ಕೂಡ ಓದಲೇಬೇಕಾದ ಚೆಂದದ ಪುಸ್ತಕ ದೇವರ ಕಾಲೋನಿ. 

ಒಂದೊಳ್ಳೆ ಪುಸ್ತಕ ಓದಿದ ಖುಷಿಗೆ ಕಾರಣರಾದ ಚಂದ್ರಶೇಖರ್‌ ಬಂಡಿಯಪ್ಪನವರಿಗೆ ಧನ್ಯವಾದ.

 

ಕೃಪೆ

https://cinikannada.com/2021/02/23/chandrasekhar-bandiyappa-story-book-cinikannada/

 

ಪುಟಗಳು: 94

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 

Customer Reviews

Based on 16 reviews
94%
(15)
0%
(0)
0%
(0)
0%
(0)
6%
(1)
B
Bhyrava
ಸ್ಫೂರ್ತಿ

ಮೊದಲಿಗೆ ನನ್ನ ಗುರುಗಳಿಗೆ ನಮಸ್ಕಾರ 🙏ನೀವೆ ನನಗೆ ಸ್ಫೂರ್ತಿ ನೀವೇನೇ ಮಾಡಿದರು ಅದರಲ್ಲೊಂದು ಸ್ಫೂರ್ತಿ ತುಂಬುವ ಶಕ್ತಿ ಅಡಗಿರತ್ತೆ ನಿಮ್ಮ ಈ ಹೊಸ ಹೆಜ್ಜೆ ತುಂಬಾ ಯಶಸ್ಸು ಕಾಣಲಿ ಅಣ್ಣ ನಿಮ್ಮ ಪುಸ್ತಕ ಮುಖಪುಟದಿಂದಲೇ ಓದುಗರನ್ನ ತನ್ನತ ಸೆಳೆದುಕೊಂಡಿದೆ ನಿಮ್ಮ ಬರಹದಲ್ಲಿ ಇನ್ನು ಹೆಚ್ಚು ಪುಸ್ತಕಗಳು ಬರಲಿ all the very best anna💐🙏

S
Shivappa H S
ದೇವರ ಕಾಲೋನಿ ಶೀರ್ಷಿಕೆ ನೋಡಿದರೆ ಪುಸ್ತಕವನ್ನು ಮುಟ್ಟಬೇಕು, ಮುಟ್ಟಿದರೆ ತೆರೆಯಬೇಕು, ತೆರೆದರೆ ಓದಬೇಕು ಅನಿಸುತ್ತದೆ.

ದೇವರ ಕಾಲೋನಿ ಶೀರ್ಷಿಕೆ ನೋಡಿದರೆ ಪುಸ್ತಕವನ್ನು ಮುಟ್ಟಬೇಕು ಅನಿಸುತ್ತದೆ. ಮುಟ್ಟಿದರೆ ತೆರೆಯಬೇಕು ಅನಿಸುತ್ತದೆ. ತೆರೆದರೆ ಓದಬೇಕು ಅನಿಸುತ್ತದೆ. ಓದಲು ಪ್ರಾರಂಭಿಸಿದರೆ ಮುಗಿಯುವವರೆಗೂ ಬಿಡದಂತೆ ಓದಿಸಿಕೊಳ್ಳುತ್ತವೆ. ಓದುವಾಗ ಕಥಾ ಪಾತ್ರಗಳ ಜೀವ-ಭಾವ-ಅಭಾವ, ಸಮಾಜದ ಪ್ರಭಾವ, ಲೇಖಕರ ಅನುಭವ ಅನಾವರಣಗೊಳ್ಳುತ್ತದೆ ಹಾಗೂ ಓದುಗರ ಅಂತಃಕರಣ ಕಲಕುತ್ತಾ ಹೋಗುತ್ತದೆ.

ಕಥೆ ಕಾದಂಬರಿಗಳನ್ನು ಸಿನಿಮಾ ಮಾಡಿ ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರಿಗೆ ತೋರಿಸಿಸುತ್ತಾರೆ. ಆದರೆ, ಶ್ರೀ ಚಂದ್ರಶೇಖರ್ ಬಂಡಿಯಪ್ಪ ರವರು ಬರೆದಿರುವ ದೇವರ ಕಾಲೋನಿ, ಚೈನಾಸೆಟ್, ಮತ್ತು ಉಯಿಲು ಕಥೆಗಳನ್ನು ಓದುವಾಗ ಪ್ರತಿಯೊಂದು ಕಥೆಯು ಸಿನಿಮಾ ನೋಡಿದಂತೆ, ಪುಟಗಳೇ ಪರದೆಗಳಂತೆ, ಸ್ಥಳಗಳು ಮತ್ತು ಪಾತ್ರಗಳು ಕಣ್ಣ ಮುಂದೆ ಬಂದಂತೆ, ನಡೆದಾಡಿದಂತೆ ಭಾಸವಾಗುತ್ತವೆ. ಓದುಗರು ಈ ಕಥೆಗಳನ್ನು ಓದುವಾಗ ಪ್ರೇಕ್ಷಕರೂ ಸಹ ಆಗಿಬಿಡುವ ಸಾಧ್ಯತೆಗಳಿವೆ. ಸಿನಿಮೀಯ ರೀತಿಯಲ್ಲಿ ಅನಿರೀಕ್ಷಿತ ನಾಟಕೀಯತೆ ಮತ್ತು ತಿರುವುಗಳನ್ನು ಕಥೆಗಳು ಹೊಂದಿರುವುದರಿಂದ ಕೊನೆಯವರೆಗೂ ಬಿಡದಂತೆ ಕುತೂಹಲದಿಂದ ಓದಿಸಿಕೊಳ್ಳುತ್ತವೆ. ಹಾಗೂ ಸಿನಿಮಾ ನೋಡಿದ ಮತ್ತು ಸಿನಿಮಾದ ಕಥೆಯ synopsis ಓದಿದ ಅನುಭವ ನೀಡುತ್ತವೆ.

ಕಥೆಗಳಲ್ಲಿನ ಪಾತ್ರಗಳನ್ನು ವಾಸ್ತವ ಸ್ಥಳಗಳಲ್ಲಿ ನಿಲ್ಲಿಸಿ, ಸಂಬಂಧಗಳಿಂದ ಹೊಸೆದು, ಭಾವಗಳಿಂದ ಬೆಸೆದಿರುವುದರಿಂದ ಕಥೆಗಳನ್ನು ಓದುವಾಗ ಕಥಾವಸ್ತುಗಳು, ಪಾತ್ರಗಳು ಹಾಗೂ ಸನ್ನಿವೇಶಗಳು ವೈಯಕ್ತಿಕ ಮತ್ತು ಕಾಲ್ಪನಿಕ ಅನಿಸುವುದಿಲ್ಲ. ಆದ್ದರಿಂದ, ಓದುಗರು ಸಹ ಕಥೆಗಳಲ್ಲಿ ಅವರಿಷ್ಟದ ಪಾತ್ರಗಳಾಗುವಷ್ಟು, ಅವರವರ ಅನುಭವಗಳೊಂದಿಗೆ ಹೋಲಿಸಿಕೊಳ್ಳುವಷ್ಟು ವಾಸ್ತವಿಕ ನೆಲೆಗಟ್ಟನ್ನು ಮತ್ತು ಸಾಮಾಜಿಕ ಚೌಕಟ್ಟನ್ನು ಹೊಂದಿವೆ. ಜೊತೆಗೆ ಲೇಖಕರ ಮಾನವೀಯ ಕಾಳಜಿಯನ್ನು, ಸಾಮಾಜಿಕ ಜವಾಬ್ದಾರಿಯನ್ನು ಕಥೆಗಳು ಎತ್ತಿ ತೋರಿಸುತ್ತವೆ.

ಹೊಸ ಹೊಸ ಸಾಹಿತ್ಯ ಸೃಷ್ಟಿಗೆ ಪುಸ್ತಕಗಳನ್ನು ಕೊಂಡು ಓದುವ ಸಹೃದಯ ಓದುಗರ ಪ್ರೋತ್ಸಾಹವೇ ಬರಹಗಾರರಿಗೆ ದೊಡ್ಡ ಪ್ರೇರಣೆ..

ಸಹೃದಯ ಓದುಗರು ದೇವರ ಕಾಲೋನಿ ಕಥಾಸಂಕಲನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡು ಓದುವಂತಾಗಲಿ..

ಶ್ರೀ ಚಂದ್ರಶೇಖರ್ ಬಂಡಿಯಪ್ಪ ರವರು ಹೆಚ್ಚು ಹೆಚ್ಚು ಉತ್ತಮ ಕೃತಿಗಳನ್ನು ಬರೆಯಲಿ ಎಂದು ಶುಭ ಕೋರುತ್ತೇನೆ.
- ಹೆಚ್ ಎಸ್ ಶಿವಪ್ಪ, ಮೈಸೂರು
9980503567

P
Pruthvi

ನಿಮ್ಮ ಪ್ರತಿ ಸಿನಿಮಾದಲ್ಲೂ ಒಂದೊಂದು ರೀತಿಯಾ ವಿಭಿನ್ನ ಕಥೆ, ಅದರಲ್ಲೂ ನಿಮ್ಮ ಈ "ಉಯಿಲು" ಕಥೆಯ ಒಂದೊಂದು ಪಾತ್ರವು ಈ ಜಗತ್ತಿನ ನಂಬಿಕೆ ಅಪನಂಬಿಕೆಗಳ ಯೋಚನೆಯನ್ನು ಸಹ ಬದಲಿಸುವ ಶಕ್ತಿ ನಿಮ್ಮ ಬರಹದಲ್ಲಿದೆ, ವಾಸ್ತವಾಗಿ ನಿಮ್ಮ ಪ್ರತಿ ಪಾತ್ರಗಳು ಬರಹದಲ್ಲಿದ್ದರು ಸಹ ವಾಸ್ತವ ಸಿನಿಮಾ ಚಿತ್ರದಂತೆ ನಿಮ್ಮ ಪ್ರತಿ ಅಕ್ಷರವು ಯೋಚನಾಮಾಯಾ.... ಒಳ್ಳೇದಾಗ್ಲಿ ಗುರುಗಳೇ.

A
A Arunkumar

Keep Writing Sir, Chaina Set And Uyilu Are Really Inspired

P
Prathap.Cheetah

Suupr sir.