ಪ್ರಕಾಶಕರು: ಸಂಕಥನ
Publisher: Sankathana
ಉಪಖಂಡದ ಭಕ್ತಿಪಂಥಗಳು ಮತ್ತು ಸೂಫಿ-ಭಕ್ತಿಗಳೆರಡನ್ನು ಸೇರಿಸಿ ಪ್ರಕಟಿಸುತ್ತಿರುವುದು ಕನ್ನಡದಲ್ಲಿ ಹೊಸ ಪ್ರಯತ್ನ. ಮಾತ್ರವಲ್ಲ, ಎರಡೂ ಧಾರೆಯ ಅಪರೂಪದ ಕವಿಗಳು ಒಂದೆಡೆ ಸೇರುತ್ತಿರುವುದು ಕೂಡ ಕನ್ನಡದಲ್ಲಿ ಮೊದಲಸಲವೇ. ಅನುವಾದದಲ್ಲಿ ಮೂಲಕ್ಕೆ ನಿಷ್ಠೆ ಇಟ್ಟುಕೊಂಡು, ಭಾವಾರ್ಥಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಅಲ್ಲದೆ, ಇವುಗಳಲ್ಲಿ ಬಹುಪಾಲು ಕವಿತೆಗಳ ಮೂಲಭಾಷೆ ಬೇರೆ. ಅವು ಮೊದಲು ಇಂಗ್ಲಿಶಿಗೆ, ಅಲ್ಲಿಂದ ಕನ್ನಡಕ್ಕೆ ಬರುತ್ತಿರುವಂಥವು. ಭಾರತೀಯ ಕವಿಗಳನ್ನು ಕನ್ನಡಿಸುವಾಗ ಹಲವೊಮ್ಮೆ ಗೆಳೆಯರ ಸಹಾಯದಿಂದ ಮೂಲಭಾಷೆಯಿಂದ ಅನುವಾದಿಸಲು ಪ್ರಯತ್ನಿಸಿರುವೆ. ಬಂಗಾಳಿ, ಗುಜರಾತಿ, ತಮಿಳು, ತೆಲುಗು, ಮರಾಠಿ, ಸಂಸ್ಕೃತ ಭಾಷೆಯ ಕವಿತೆಗಳನ್ನು ನೇರವಾಗಿ ಅನುವಾದಿಸಿರುವೆ. ಆದರೆ, ಅವುಗಳ ಸಂಖ್ಯೆ ಬಹಳ ಕಡಿಮೆ. ಮುಖ್ಯ ಅವಲಂಬನೆ ಇಂಗ್ಲಿಶ್ ಅನುವಾದಗಳ ಮೇಲೆಯೆ.
ಎರಡೂ ಬಗೆಯ ಕಾವ್ಯಧಾರೆಗಳಲ್ಲಿ ಹಲಬಗೆಯ ಛಂದಸ್ಸನ್ನು ಕಾಣುತ್ತೇವೆ. ಆದರೆ, ಅನುವಾದದಲ್ಲಿ ಯಾವುದೇ ಛಂದಸ್ಸಿನ ನಿಯಮಗಳನ್ನು ಪಾಲಿಸಿಲ್ಲ. ಮುಕ್ತತೆಯೇ ಇಲ್ಲಿನ ಹೊಸಛಂದಸ್ಸು. ಪ್ರಾಸ, ಲಾಲಿತ್ಯ, ಆರ್ದ್ರತೆ, ನವಿರುತನ ಕಂಡರೆ ಅವು ಸಹಜವಾಗಿ ಬಂದಿರುವಂಥದ್ದೇ ಹೊರತು, ವ್ಯಾಕರಣ ಮತ್ತು ಛಂದಸ್ಸಿನ ಪಾಲನೆಯಿಂದ ಅಲ್ಲ. ಇಲ್ಲಿ ಪ್ರತಿಪದ ಅರ್ಥಕ್ಕಿಂತ ಭಾವಾರ್ಥವೇ ಮುಖ್ಯವಾಗಿದೆ. ಕವಿತೆಗಳನ್ನು ಓದಿದಾಗ ಅವುಗಳ ಮೂಲ ಆಶಯ ತುಸುವಾದರೂ ತಲುಪಿದೆ ಎಂದು ಓದುಗನಿಗೆ ಅನ್ನಿಸಿದರೆ ಅದು ಈ ಪ್ರಕ್ರಿಯೆಯಲ್ಲಿ ನಾನು ಗಳಿಸುತ್ತಿರುವ ಪುಣ್ಯ.
-ಕೇಶವ ಮಳಗಿ
ಪುಟಗಳು: 208
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !