ಲೇಖಕರು:
ಮರಾಠಿ ಮೂಲ ಶ್ರೀಪಾದ ಅಮೃತ ಡಾಂಗೆ
ಕನ್ನಡಕ್ಕೆ ಚಂದ್ರಕಾಂತ ಪೋಕಳೆ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಈ ಭಾಷಣಗಳನ್ನು ೧೯೬೭ರಲ್ಲಿ ಗ್ರಂಥರೂಪದಲ್ಲಿ ನಾವು ಪ್ರಕಟಿಸಿದಾಗ ಅನೇಕ ಜನರು ಇದನ್ನು ಸ್ವಯಂಸ್ಫೂರ್ತಿಯಿಂದ ಸ್ವಾಗತಿಸಿದರು. ‘ಮರಾಠಾ’ ಪತ್ರಿಕೆಯ ಆಚಾರ್ಯ ಅತ್ರೆ, ‘ನವಕಾಳ’ ಪತ್ರಿಕೆಯ ಶ್ರೀ ಅಪ್ಪಾಸಾಹೇಬ ಖಾಡಿಲ್ಕರ್, ‘ನವಶಕ್ತಿ’ಯ ಪು. ರಾ. ಬೆಹೆರೆ, ಶ್ರೀ ಪಾಂ. ವಾ. ಗಾಡ್ಗೀಳರು ಮುಂತಾದ ಪತ್ರಕರ್ತರು ವಿಶೇಷ ಅಗ್ರಲೇಖನಗಳನ್ನು ಬರೆದು ಅದರ ಮಹತ್ವವನ್ನು ಕೊಂಡಾಡಿದರು. ಸಾಕಷ್ಟು ವೃತ್ತಪತ್ರಿಕೆಗಳು ಅದರ ವಿಸ್ತೃತ ಪರಾಮರ್ಶೆಯನ್ನು ಕೈಗೊಂಡವು. ಅನೇಕ ಓದುಗರು ಸತತವಾಗಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ ನಮಗೆ ಅಭಿನಂದನೆ ಸಲ್ಲಿಸಿದರು. ಸಮಾಜದ ಎಲ್ಲ ಸ್ತರಗಳಲ್ಲೂ ಈ ಕೃತಿಯನ್ನು ಅತ್ಯುತ್ತಮವಾಗಿ ಸ್ವಾಗತ ಮಾಡಲಾಯಿತು. “ಲೋಕಮಾನ್ಯ ತಿಲಕರ ನಂತರ ಭಾರತದ ರಾಜಕಾರಣದ ಮೇಲೆ ತಮ್ಮ ಛಾಪು ಬೀರುವ ನಾಯಕ ಕಾ|| ಡಾಂಗೆ ಬಿಟ್ಟರೆ ಬೇರೊಬ್ಬರಿಲ್ಲ” ಎಂದು ಮಾಡಖೋಲ್ಕರ್‌ರಂತಹ ಅನುಭವಿ ಪತ್ರಕರ್ತರು ಮತ್ತು ಶ್ರೇಷ್ಠ ಸಾಹಿತಿಗಳು ಅವರ ಬಗ್ಗೆ ಮಾಡಿದ ಉದ್ಗಾರವು ಒಂದು ರೀತಿಯಲ್ಲಿ ಕಾ|| ಡಾಂಗೆಯವರ ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ನೀಡಿದ ಗೌರವವೆಂದೇ ನಾವು ಭಾವಿಸುತ್ತೇವೆ.
‘ಭಾಷಣದಿಂದ ನಾಯಕತ್ವ ಮತ್ತು ನಾಯಕತ್ವದಿಂದ ಭಾಷಣ, ಇವುಗಳ ಸಮತೋಲನವನ್ನು ಸಾಧಿಸಿದ ಕಾ|| ಡಾಂಗೆಯಂತಹ ಸವ್ಯಸಾಚಿ ನಾಯಕ ಭಾರತದಲ್ಲಿ ಸಿಗುವುದು ಅಪರೂಪ’ ಎಂದು ‘ನವಕಾಳ’ ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಇದೀಗ ೭೬ ವರ್ಷ ದಾಟಿದ ಕಾ|| ಡಾಂಗೆಯವರು, ೧೬ನೇ ವಯಸ್ಸಿನಿಂದ ಆರಂಭಿಸಿ ಇಲ್ಲಿಯವರೆಗೂ ಅಕ್ಷರಶಃ ಸಾವಿರಾರು ಸಭೆ-ಸಮ್ಮೇಳನ-ಮೈದಾನಗಳಲ್ಲಿ ಮಾಡಿದ ಭಾಷಣಗಳು ಅಪೂರ್ವವಾದವು. ಇಂದಿಗೂ ಅವರ ವಾಗ್ಮಯತೆ ಕಿಂಚಿತ್ತೂ ಕುಂದಿಲ್ಲ. ಚುನಾಯಿತ ಪ್ರತಿನಿಧಿಯಾಗಿ ಅವರು ಮಾಡಿರುವ ಭಾಷಣಗಳನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸಬಹುದಾಗಿದೆ. ರಾಜಕಾರಣ, ಕಾರ್ಮಿಕ ಚಳವಳಿ, ಅರ್ಥಶಾಸ್ತ್ರ, ಚರಿತ್ರೆ, ಸಾಹಿತ್ಯ, ತತ್ವಜ್ಞಾನ, ಯಾವುದೇ ವಿಷಯವೂ ಕಾ|| ಡಾಂಗೆಯವರಿಗೆ ನಿಷಿದ್ಧವಾಗಿರಲಿಲ್ಲ.
ಯಾರಾದರೂ ಘನವಿದ್ವಾಂಸರು ಹಳೆಯ ವೃತ್ತಪತ್ರಿಕೆಗಳಲ್ಲಿರುವ ಅವರ ಭಾಷಣಗಳನ್ನು ಕಡತಗಳಿಂದ ಹುಡುಕಿ ತೆಗೆದು ಒಂದೆಡೆ ಸಂಕಲನ ಮಾಡಿದಲ್ಲಿ ಭಾರತದ ಚರಿತ್ರೆಗೆ ಅಮೂಲ್ಯ ಕೊಡುಗೆಯಾಗಬಹುದು ಎಂದೇ ನಾನು ಭಾವಿಸುತ್ತೇನೆ. ಅಲ್ಲಿಯವರೆಗೆ ಇದು ಕ್ಷೀರದಾಹವನ್ನು ತಣಿಸಿಕೊಳ್ಳುವ ಒಂದು ಯತ್ನವಾಗಿದೆ.
- ವಾಮನ ವಿಷ್ಣು ಭಟ್ಟ
ಪುಟಗಳು: 112
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !