ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ಟಿ. ಎಸ್. ಗೋಪಾಲ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಜ್ಞಾನಪೀಠ ಪುರಸ್ಕೃತರಾದ ಡಾ|| ಯು. ಆರ್. ಅನಂತಮೂರ್ತಿಯವರು ಕಂಬಾರರ ಕಾವ್ಯದ ವೈಶಿಷ್ಟ್ಯವನ್ನು ಕುರಿತು
"ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೊ ಹಾಂಗ
ಹಾಡಬೇಕೋ ತಮ್ಮಾ ಹಾಡಬೇಕು
ಕಲ್ಲಿನ ಎದೆಯಲ್ಲಿ ಜೀವಜಲ ಚಿಲ್ಲೆಂದು
ಚಿಮ್ಮುವಂಥಾ ಹಾಡ ಹಾಡಬೇಕು
ಆಕಾಶದಂಗಳ ಬೆಳದಿಂಗಳೂ ಕೂಡಾ
ಕಂಗಾಲಾಗುವ ಹಾಡ ಹಾಡಬೇಕು"
ಎಂದು ಹೇಳುವ ಮಾತು ಕಂಬಾರರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.
"ನವ್ಯ ಚಳವಳಿಯಲ್ಲಿ ಬಂದವರಲ್ಲಿ ಬಹಳಷ್ಟು ಮಂದಿ ಎಲಿಯಟ್‍ನನ್ನು ಅನುಕರಣೆ ಮಾಡ್ತಿದ್ದಾಗ ನಾನು "ಹೇಳತೇನ ಕೇಳ" ಬರೆದೆ. ವಸಾಹತುಶಾಹಿಯ ಆಕ್ರಮಣದಿಂದ ನಮ್ಮ ಸಂಸ್ಕೃತಿ ಹೇಗೆ ನಾಶ ಆಗುತ್ತಿದೆ ಅಂತ ಹೇಳಿದೆ. ಹಾಗೆ ನೋಡಿದರೆ ನನ್ನ ಕಾವ್ಯವೇ ನವ್ಯರಿಗಿಂತ ಹೆಚ್ಚು ಮಾಡರ್ನ್. ನನ್ನ ಸಂಸ್ಕೃತಿಯನ್ನು ನಾನು ಹೇಗೆ ಉಳಿಸಿಕೊಳ್ಳಬೇಕು ಅನ್ನೋದು ನನಗೆ ಮುಖ್ಯವೇ ಹೊರತು ಎಲಿಯಟ್‍ನನ್ನು ಕಾಪಿ ಮಾಡೋದಲ್ಲ. ನನ್ನ ಹಳ್ಳಿಯನ್ನು ನಾನು ಪ್ರೀತಿಸ ಬೇಕು ಅಲ್ಲವೆ" ..ಎನ್ನುವ ಕಂಬಾರರು ನುಡಿದಂತೆ ಬರೆದವರು. ಬರೆದಂತೆ ಬದುಕಿದವರು.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !