ಶ್ರೀಮತಿ ಸುಚೇತಾ ಗೌತಮವರ ಪ್ರಿಯವಾದ ಕನ್ನಡ ಸಾಹಿತಿ ಶ್ರೀ ಭೈರಪ್ಪನವರು. ಇವರು, ದಿವಂ|| ಶ್ರೀ ಎಸ್. ಅನಂತನಾರಾಯಣ್ ಮತ್ತು ಆಕೇಯ ತಂದೆ ಡಾ|| ಡೊ. ನಾರಾಯಣಸ್ವಾಮಿ, ಆಕೇಯ ಸಾಹಿತ್ಯದ ಪ್ರೇರಣೆಗೆ ಸ್ರೊತ್ರರು. ಮೊದಲೆರಡು ಕನ್ನಡ ಸಾಹಿತ್ಯದ ಕಣ್ಮಣಿಗಳು (ಭೈರಪ್ಪನವರು ಹಾಗು ಎಸ್. ಅನಂತನಾರಾಯಣ್ ಅವರು) ತಮ್ಮ ತಮ್ಮ ಸಾಹಿತ್ಯದ ಮೂಲ ವಿಚಾರವನ್ನು ಮೊದಲು ಗಾಢವಾಗಿ ಸಂಶೊಧಿಸಿ, ಅದರ ಪ್ರತ್ಯೊಂದು ರಸವನ್ನು ಸೇವಿಸುತ್ತಾ ಅನುಭವಕ್ಕೆತಂದುಕೊಂಡು ಜೀರ್ಣಿಸುತ್ತಾರೇ. ತದನಂತರ ಅದನ್ನು ಒಂದು ಸ್ಥೂಲ ಕಥೆಯರೂಪದಲ್ಲಿ ಈ ಗಂಭೀರ ವಿಚಾರದ ಸಾರಾಂಷವನ್ನು ಪ್ರಕಟಿಸುತ್ತಾರೇ.
ಶ್ರೀಮತಿ ಸುಚೇತಾ ಗೌತಮವರು ಸಹ ಮೂಲತಃ ಇದೇ ಮಾರ್ಗವನ್ನ ತಮ್ಮ ಎಲ್ಲಾ ಸಾಹಿತ್ಯ ರಚನೆಗೆ ಬಳಿಹಿಸುತ್ತಾರೇ. ಬೈನರಿ ಕಾದಂಬರ್ಯನ್ನೇ ನೊಡಿದರೆ, ವೈದ್ಯುತಕಶಾಸ್ತ್ರ (ಏಲೆಕ್ಟ್ರೊನಿಕ್ಸಿ) ಹಾಗು ಅಂಕಿಮಾಹಿತಿಸಂಗಣಕದ (ಕಮ್ಪ್ಯೂಟರ್) ಮೂಲಬದ್ದವಾದ ತಿರುಳನ್ನಾಯ್ಕೆ ಮಾಡಿಕೊಂಡು ತಮ್ಮ ಕಥೆಯನ್ನು ರಚಿಸಿದ್ದಾರೇ. ಈ ಕಾದಂಬರಿಯನ್ನು ಒದಿದ ತಂತ್ರಶಾಸ್ತ್ರಾಭ್ಯರ್ಥಿಗಳು ಮೊದುಲನೇ ವರ್ಷದ ವೈದ್ಯುತಕಶಾಸ್ತ್ರ ಪರೀಕ್ಷೇ ಸರಲವಾಗಿ ತೇಲುತ್ತಾರೇ! ಇದು ಸುಚೇತಾವರ ವಿಶಯ ಸಂಪನ್ನತೆಯನ್ನು ತೊರಿಹಿಸುತ್ತದೇ.
ಈ ಕಾದಂಬರಿ ಸರಣಿಯ ಬಗ್ಗೆ ಏನಾದರು ಟೀಕೆ/ಟಿಪ್ಪಣಿಯನ್ನು ಮಾಡಬೇಕೆಂದರೇ, ಭೈರಪ್ಪನವರಂತೆಯೇ ಕಾದಂಬರಿಯ ಪಾತ್ರಗಳು ತಾವೇ ಪ್ರಾಕೃತಿಕವಾಗಿ ವಿಕಾಸವಾಗುವಂತೆ ಬಿಟ್ಟರೇ ಬಹುಷ ಕಾದಂಬರಿ ಇನ್ನೂ ಚೆನ್ನಾಗಿ ರೂಪಗೊಳ್ಳುತದೆ. ಇದರಿಂದ ಕಥೆಯ ಬಗ್ಗೆ ಆಸಕ್ತಿಯು ಜಾಸ್ತ್ಯಾಗುತದೇ. ಅವಾಗ ಸಾದಾರಣ ಜನರಿಗೂ ನವರಸಗಳ ಅನುಭೂತ್ಯಾಗುವುದು. ಒಸ್ಕರ್ ವೈಲ್ಡವರು ಹೇಳಿದಂತೆ - "ಕಲಾಕಾರನ ಕೆಲಸ ಪ್ರಪಂಚವನ್ನು ಮೂಲರೂಪದಲ್ಲಿಯೆ ಪ್ರದರ್ಶಿಸುವುದು, ಅದರಮೇಲೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನ ಹೇರುವುದಲ್ಲ." - "Artist's (Sic) business is to realise the world as we see it, not to reform it as we know it." - Model Millionaire. ಇದರಿಂದ ಕಾದಂಬರಿಯ ಸಾಹಿತಿಯ ಸೊಂತ ಕಾದಂಬರಿ ಶೈಲಿಯು ವಿಕಾಸವಾಗುವುದು.
ಮೂಲವಾಗಿ ಇದು ಭಹಳ ಉತ್ತಮ ಸರಣಿ. ಹಿಂಗೇ ಇನ್ನು ನೂರಾರು ಪೂರ್ಣ ಕಾದಂಬರಿಗಳನ್ನ ಓದಲು ನಾನು ಬಯಿಸುತ್ತಾ ಸುಚೇತಾವರಿಗೆ ಅಭಿನಂದನೆಗಳು.