ಕುಮಾರವ್ಯಾಸ ಭಾರತದ ಎರಡು ಕಥಾನಕಗಳು.
ತನ್ನ ಪ್ರತಿಭೆಯನ್ನು ಭಗವದಿಚ್ಛೆಯ ಲಿಪಿಕಾರಮಾತ್ರವನ್ನಾಗಿ ಮಾಡಿ ಕೊಂಡು ಮಹಾಕಾವ್ಯವನ್ನು ಸೃಜಿಸಿದ ಮಹಾಕವಿಗಳಲ್ಲಿ ಕುಮಾರವ್ಯಾಸ ಅನ್ಯಾದೃಶ ಸತ್ತ್ವಶಾಲಿ. ಕವಿ ಪ್ರತಿಭೆಯ ದೃಷ್ಟಿಯಲ್ಲಿ ನೋಡಿದರೂ ಅವನು ಪ್ರಾಕೃತಿಕ-ಅದ್ಭುತವಾಗಿಯೇ ಉಳಿದಿದ್ದಾನೆ. ಸ್ವಪ್ರತಿಭೆ ಹಾಗೂ ದಿವ್ಯದರ್ಶನ ಗಳ ವಿರಳಸಂಯೋಗವನ್ನು ಈ ಮಹಾಸತ್ತ್ವನಲ್ಲಿ ಕಾಣುತ್ತೇವೆ. ಮಹಾ ವಿಶಾಲಮತಿಗಳೂ ವಿರಾಟ್ ದರ್ಶನ ಸಂಪನ್ನರೂ ಆದ ಮಹರ್ಷಿ ವ್ಯಾಸರ ಮಾನಸಪುತ್ರನೆನಿಸಿಕೊಳ್ಳುವ ಸೌಭಾಗ್ಯವನ್ನು ಪಡೆದ ಪುಣ್ಯವಂತ ಈ ನಮ್ಮ ಕುಮಾರವ್ಯಾಸ ಯೋಗೀಂದ್ರ. ಕಾವ್ಯ ಸೃಷ್ಟಿಯನ್ನು ಚಾರು ಸೃಷ್ಟಿ ಮಾತ್ರ ವಾಗಿ ಭಾವಿಸದೆ ಭಗವದ್ಯೋಗವಾಗಿ ಸಂಭಾವಿಸಿ ಅನುಭಾವಿಸಿದ ; ಲೌಕಿಕ ಪಾರಮಾರ್ಥಿಕಗಳ, ಮಾನುಷ ಅತಿಮಾನುಷಗಳ, ಮಾನಸ ಅತಿಮಾನಸಗಳ ವ್ಯಾಪಾರಗಳನ್ನು ತನ್ನ ಕಾವ್ಯದಲ್ಲಿ ದಿವ್ಯವಾಗಿ ಸಂಯೋಗಿಸಿದ ಯೋಗಿಕವಿ ಯೀತ. ಮೇಲ್ನೋಟಕ್ಕೆ ಹುಚ್ಚು ಭಕ್ತನಂತೆ ಭಾಸವಾಗಿ, ಭಾವೋದ್ರಿಕ್ತ ನಂತೆ ಮಾತಾಳಿಯಂತೆ ಅವಜ್ಞೆಗೂ ಪಾತ್ರನಾಗಬಹುದಾದ ಈ ಅತಿ ಜಟಿಲ ವಿರಲ ಸರಲ ಕವಿ, ಸಾವಧಾನದ ಅಭ್ಯಾಸಕ್ಕೆ ಭಗವದ್ ಚೋದ್ಯವೆಂಬಂತೆ ಅನುಭೂತವಾದರೆ ಆಶ್ಚರ್ಯವೇನೂ ಇಲ್ಲ. ಹೀಗೆ ಪ್ರಾರಂಭದಲ್ಲಿ ಅತ್ಯಂತ ಸರಲ ವೆಂಬಂತೆ ತೋರಿ ಅನುಭವಕ್ಕೆ ಅತಿ ಸೂಕ್ಷ್ಮ ಸಂಕೀರ್ಣವಾಗಿ ಪ್ರಜ್ಞಾಗೋಚರ ವಾಗುವ ಕವಿಗಳು ಕನ್ನಡದಲ್ಲಿ ವಿರಲವೆಂದೇ ಹೇಳಬೇಕು.
ಪುಟಗಳು: 130
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !