ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಕೆ.ವಿ. ಸುಬ್ಬಣ್ಣನವರು ಮರುರೂಪಿಸಿದ ಹಲವಾರು ಸಂಸ್ಕೃತ ನಾಟಕಗಳಲ್ಲಿ ಒಂದು ಕೃತಿ ಇದು - ಬೋಧಾಯನನ (ಈಚಿನ ಸಂಶೋಧನೆಗಳ ಪ್ರಕಾರ, ಮಹೇಂದ್ರವಿಕ್ರಮವರ್ಮನ) 'ಭಗವದಜ್ಜುಕೀಯಮ್'ದ ಅನುವಾದ ಮತ್ತು ಅದೇ ಕೃತಿಯ ರೂಪಾಂತರ 'ಸೂಳೆ-ಸನ್ಯಾಸಿ'.
೧೯೭೭ರಲ್ಲಿ ಈ ಅನುವಾದ/ರೂಪಾಂತರವು ನಡೆದಿದ್ದು ನಿರ್ದಿಷ್ಟ ರಂಗಪ್ರಯೋಗದ ಅಗತ್ಯಕ್ಕಾಗಿ. ಮತ್ತು, ಇದು ಮೂಲವನ್ನಾಧರಿಸಿ ಕಟ್ಟಿರುವ ಮರುರೂಪವೇ ಹೊರತು ನೇರ ಅನುವಾದವಲ್ಲ. ಸಂಸ್ಕೃತ ಸಾಹಿತ್ಯದ ಮೇರುಕೃತಿಗಳನ್ನು ಕನ್ನಡದ/ಭಾರತದ ಸಮಕಾಲೀನ ಬೌದ್ಧಿಕ ಸಂದರ್ಭಗಳಿಗೆ ಸಂವಾದಿಯಾಗುವಂತೆ ಹೊಸ ರೂಪಗಳಲ್ಲಿ ಇಟ್ಟು ನೋಡುವ ಪ್ರಯೋಗವು ಈ ರೂಪಾಂತರದ ಹಿಂದಿದೆ. ಇಂಥ ಹಿನ್ನೆಲೆ ಸ್ಪಷ್ಟವಾಗಲೆಂಬ ಕಾರಣಕ್ಕಾಗಿ ಮೊದಲ ಮುದ್ರಣ ಮತ್ತು ಪ್ರಯೋಗದ ಸಂದರ್ಭದಲ್ಲಿ ಬರೆಯಲಾದ ಟಿಪ್ಪಣಿಯನ್ನು ಈ ಪುಸ್ತಕದ ತುದಿಗೆ ಅನುಬಂಧವಾಗಿ ಸೇರಿಸಲಾಗಿದೆ.
ಪುಟಗಳು: 74
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !