Click here to Download MyLang App

ಬೀಜಧ್ಯಾನ,  ಡಾ. ನರೇಂದ್ರ ರೈ ದೇರ್ಲ,  Narendra Rai Derla,  Kannada,  Dr. Narendra Rai Derla,   Beeja Dyana,

ಬೀಜಧ್ಯಾನ (ಇಬುಕ್)

e-book

ಪಬ್ಲಿಶರ್
ಡಾ. ನರೇಂದ್ರ ರೈ ದೇರ್ಲ
ಮಾಮೂಲು ಬೆಲೆ
Rs. 175.00
ಸೇಲ್ ಬೆಲೆ
Rs. 175.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಗೋಪಾಲಸ್ವಾಮಿ ಬೆಟ್ಟದಲ್ಲಿ ಬೆಳೆಯುವ ಬೆಳ್ಳುಳ್ಳಿಯ ಗುಣಮಟ್ಟ, ಬಯಲಿನಲ್ಲಿ ಕೃತಕಗೊಬ್ಬರ ನೀರು ಕೊಟ್ಟು ಬೆಳೆಸುವ ಬೆಳ್ಳುಳ್ಳಿಗಿಂತ ಯಾಕೆ ಹೆಚ್ಚು ಎಂದು ಗೋಪಾಲಸ್ವಾಮಿ ಬೆಟ್ಟದ ಬೆಳ್ಳುಳ್ಳಿ ಲೇಖನದಲ್ಲಿ ಹೇಳುತ್ತಾರೆ.

ಬಗೆಬಗೆಯ ಭಾರತ ಮತ್ತು ವಿದ್ಯಾಗಿರಿಯ ಬಾಕಿಮಾರು ಗದ್ದೆ ಲೇಖನದಲ್ಲಿ ವಿದ್ಯಾವಂತರು ಕೃಷಿಯಿಂದ ವಿಮುಖರಾಗಿ, ಕೃಷಿ ಉದ್ಯಮದ ರೂಪ ಪಡೆಯುತ್ತಿರುವುದರ ಅಪಾಯ ಕುರಿತು ಹೇಳುತ್ತಾರೆ. ವಿದ್ಯಾಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯನ್ನು ಪರಿಚಯಿಸಲು ಗದ್ದೆಯನ್ನು ಮಾಡಿರುವ ಕುತೂಹಲಕಾರಿ ವಿಷಯವನ್ನು ಹೇಳುತ್ತಾ ನಮ್ಮ ಶಿಕ್ಷಣ ಕೃಷಿಸ್ನೇಹಿಯಾಗಬೇಕಾದ ಅಗತ್ಯವನ್ನೂ ಹೇಳುತ್ತಾರೆ.

ನೀರಿನ ಮೂಲ ನೋಡದೆ ಊರು ಕಟ್ಟುವ ಆಧುನಿಕತೆ ಎಷ್ಟು ಅವೈಜ್ಞಾನಿಕ ಎಂದು ನದಿ ತಿರುವು ಯೋಜನೆಗಳಿಗೆ ಇದೇ ಕಾರಣ ಎಂದು ಗುರುತಿಸುತ್ತಾರೆ. ವಿದ್ಯುತ್, ಮೊಬೈಲ್ ಸಿಗ್ನಲ್, ರಸ್ತೆ ಸೌಕರ್ಯ ನೋಡಿ ಮನೆ ಕಟ್ಟುವ ಜನರು ನೀರನ್ನು ದೂರದಿಂದ ತಂದರೆ ಸರಿ ಎಂಬ ನಿರ್ಲಕ್ಷ್ಯವನ್ನು ಹೊಂದಿರುತ್ತಾರೆ. ಪಕ್ಕದ ಕೇರಳದಲ್ಲಿ ಕೃಷಿಗೆ ಕೃಷಿಕರಿಗೆ ಇರುವ ಮಹತ್ವವನ್ನು ಕೃಷಿ ಪ್ರಶಸ್ತಿ ಅರ್ಜಿ ತುಂಬಲು ಅಕ್ಷರ ಇಲ್ಲದವರು ಲೇಖನದಲ್ಲಿ ಪ್ರಸ್ತಾಪಿಸುತ್ತಾ ಮನೋರಮ ಪತ್ರಿಕೆಯವರು ಪ್ರಶಸ್ತಿ ಕೊಡಲು, ತಾವೇ ರೈತನ ಮನೆಗೆ ಹೋಗಿ ಅವರನ್ನು ತಮ್ಮ ವಾಹನದಲ್ಲಿ ರಾಜಭವನಕ್ಕೆ ಕರೆತಂದು ರಾಜ್ಯಪಾಲರೊಡನೆ ಕೂರಿಸಿ ಪ್ರಶಸ್ತಿ ನೀಡಿ ರಾಜಭವನದಲ್ಲಿ ಊಟವೂ ಆಗುತ್ತದೆ. ಅಂದರೆ ರೈತರಿಗೂ ಗೌರವ ಸಲ್ಲಿಸಬೇಕು ಎಂಬ ಎಚ್ಚರ ಅಲ್ಲಿ ಮೂಡಿದೆ. ಇಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ನಮ್ಮ ಕೃಷಿ ಕಾರ್ಯಕ್ರಮಗಳು ದೂರದರ್ಶನದಲ್ಲಿ ಬಹುತೇಕ ಸ್ಟುಡಿಯೋದಲ್ಲಿ ನಡೆಯುವ ಪ್ರಶ್ನೋತ್ತರಗಳು ಅಥವಾ ಕೃಷಿ ಅಧಿಕಾರಿಗಳ ಉಪದೇಶ, ಯಾವ ರಸಾಯನಿಕಗಳನ್ನು ಎಷ್ಟು ಪ್ರಮಾಣದಲ್ಲಿ ಸಿಂಪಡಿಸಬೇಕೆಂಬ ಮಾಹಿತಿಗೆ ಸೀಮಿತವಾಗಿ ನೀರಸವಾಗಿರುತ್ತವೆ. ಕೇರಳದ ಮಾಧ್ಯಮ ಗಳು ರೈತಸ್ನೇಹಿಯಾಗಿವೆ. ಅವು ರೈತರ ಕೃಷಿಕ್ಷೇತ್ರಕ್ಕೇ ಹೋಗಿ ಕಾರ್ಯಕ್ರಮ ರೂಪಿಸುತ್ತವೆ. ಕಿಸಾನ್ ಕೃಷಿದೀಪಮ್ ಆಗಲಿ ‘ಭೂಮಿ ಮಲಯಾಳಮ್, ಹರಿತ, ಸುಂದರ ಆಗಲಿ ಅಂತಹ ಕಾರ್ಯಕ್ರಮಗಳು ರೈ ಇದನ್ನು ಸರಿಯಾಗಿ ಗುರುತಿಸಿದ್ದಾರೆ. 

ಗುಟ್ಕ ಹೆಸರಲ್ಲಿ ಅಡಿಕೆಗೇಕೆ ಕೊಲೆಗಾರ ಪಟ್ಟ ಲೇಖನದಲ್ಲಿ ಗುಟ್ಕಾ ನಿಷೇಧದ ಹಿಂದೆ ಅಡಿಕೆಯ ತಪ್ಪಿಲ್ಲದೆ, ಗುಟ್ಕಾಕ್ಕೆ ಹಾಕುವ ವಿಷಕಾರೀ ರಸಾಯನಿಕಗಳನ್ನು ನಿಯಂತ್ರಿಸದೇ ಅಡಿಕೆ ಬೆಳೆಗಾರರಿಗೆ ಆಗುವ ನಷ್ಟವನ್ನು ಕುರಿತು ಬರೆಯುತ್ತಾರೆ. ರೈತಾಪಿಯ ಕಷ್ಟ, ನಷ್ಟಗಳು, ಅಜ್ಞಾನದಿಂದಾಗುವ ಅನಾಹುತಗಳು, ಗ್ರಾಮೀಣ ಬದುಕಿನ ಸೌಂದರ್ಯದ ಜೊತೆಗಿರುವ ತೊಂದರೆಗಳು, ಕಾಡುಗಳೂ, ಕಾಡುಪ್ರಾಣಿಗಳೂ ಹೀಗೆ ರೈ ಅವರ ಅನುಭವ ಜಗತ್ತು ದೊಡ್ಡದು. ಜಲಸಂರಕ್ಷಣೆಯ ಉಪಾಯಗಳನ್ನು ಕುರಿತು ಬರೆಯುವ ಲೇಖಕರು ನೇರವಾಗಿ ಮತ್ತು ಪರೋಕ್ಷವಾಗಿ ಗ್ರಾಮೀಣ ಬದುಕಿನಲ್ಲಿ ನೆರೆಹೊರೆಯವರ ಜೊತೆಗೆ ಇರಬೇಕಾದ ಸಂಬಂಧಗಳ ಕುರಿತೂ ಸೂಚಿಸುತ್ತಾರೆ.

ನನ್ನ ಪರಿಚಿತರೊಬ್ಬರು ತಮ್ಮ ಮಗ ತಮ್ಮಂತೆ ರೈತನಾಗದೆ ನಗರದಲ್ಲಿ ಸುಖವಾಗಿರಲಿ ಎಂದು ಬೆಂಗಳೂರಿಗೆ ಉದ್ಯೋಗಕ್ಕೆ ಕಳಿಸಿದರು. ಆದರೆ ಅವನಿಗೆ ಮದುವೆಯ ನಂತರ ಬರುವ ಸಂಬಳ ಸಾಲದೆ ಅವನ ಬೆಂಗಳೂರು ಖರ್ಚನ್ನು ಇವರೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಆದರೂ ಮಗ ಬೆಂಗಳೂರಲ್ಲಿದ್ದಾನೆ ಎಂದು ಅವರಿಗೆ ಹೆಮ್ಮೆ. ಈ ಬಗೆಯ ಪೊಳ್ಳು ಗ್ರಹಿಕೆ ಇಲ್ಲವಾದ ದಿನ ರೈತ ಹೆಮ್ಮೆಯಿಂದ ಕೃಷಿ ಬದುಕನ್ನು ಅನುಭವಿಸಬಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡುವವರು ವಾರಾಂತ್ಯದ ರಜೆ ಕಳೆಯಲು ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಪ್ರಾರಂಭವಾಗಿರುವ ಹೋಮ್‌ಸ್ಟೇಗಳಿಗೆ ಬರುತ್ತಾರೆ. ಇಲ್ಲಿಯ ಚಟುವಟಿಕೆಗಳಲ್ಲಿ ಕಾಡು ಬೆಟ್ಟ ಹತ್ತುವುದರ ಜತೆಗೆ ಗದ್ದೆ ತೋಟಗಳಲ್ಲಿ ಸುತ್ತಾಡುವುದೂ ಸೇರಿರುತ್ತದೆ. ಗ್ರಾಮೀಣ ಅಡುಗೆ ತಿಂಡಿಗಳೂ ಅವರಿಗೆ ಮೆಚ್ಚುಗೆಯಾಗುತ್ತವೆ. ಆದರೆ ಕೃಷಿ ಕುಟುಂಬದಿಂದ ಬಂದ ಮಕ್ಕಳಿಗೆ ಬೆಂಗಳೂರು ಇಷ್ಟವೇ ಹೊರತು ತಮ್ಮದೇ ಸ್ವಾಮ್ಯ ಇರುವ ಕೃಷಿ ಬದುಕಲ್ಲ. 

 

- ಡಾ. ಎಲ್‌.ಸಿ. ಸುಮಿತ್ರಾ


 

ಪುಟಗಳು: 232

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)