ಪ್ರಕಾಶಕರು: ನಿರುತ ಪಬ್ಲಿಕೇಷನ್ಸ್
Publisher: Niruta Publications
ತಮ್ಮ ಬದುಕಿನಲ್ಲಿ ನಡೆದ ಘಟನೆಗಳ ಅನುಭವದ ಕಥೆಗಳ ಹಿನ್ನೆಲೆಯಲ್ಲಿ ಹಲವು ಹತ್ತು ವಿಷಯಗಳ ಬಗ್ಗೆ ನಮ್ಮನ್ನು ಚಿಂತನೆಗೆ ಹಚ್ಚುವ ಪ್ರಾಮಾಣಿಕ ಪ್ರಯತ್ನವೇ ಈ ಸಂಕಲನ.
ಈ ಕಥಾ ಸಂಕಲನದಲ್ಲಿ ಅಂತರಂಗ-ಬಹಿರಂಗಗಳ ಸಮನ್ವಯ, ಶುದ್ಧಿ, ತಾಯಿ-ತಂದೆಯರ ಪ್ರೀತಿ, ಗುರುಶಿಷ್ಯನ ಬಾಂಧವ್ಯ, ಆಷಾಢಭೂತಿತನದ ವಿಡಂಬನೆ, ಆತ್ಮವಿಶ್ವಾಸ ಮೂಡಿಸುವ-ವೃದ್ಧಿಸುವ ಪ್ರಸಂಗಗಳು, ವ್ಯಕ್ತಿತ್ವ ವಿಕಸನ, ನಕಾರಾತ್ಮಕ ಭಾವನೆಗಳ ತಿರಸ್ಕಾರ, ಸಕಾರಾತ್ಮಕ ಭಾವನೆಗಳ ಪುರಸ್ಕಾರ, ಪ್ರಾಮಾಣಿಕತೆ, ಸೋದರತ್ವ, ಒಳಿತಿಗಾಗಿ ಪರಿವರ್ತನೆ ಮುಂತಾದ ಬದುಕಿನ ಮೌಲ್ಯಗಳನ್ನು ಸದರಿ ಕಥೆಗಳು ಪ್ರತಿಪಾದಿಸುತ್ತವೆ. ಕಥೆಗಳು ಜೀವನದ ಮಾರ್ಗದರ್ಶಕ ಸೂತ್ರಗಳ ಕೆಲಸವನ್ನೂ ಮಾಡುತ್ತವೆ. ಕಥೆಗಳ ವಿಷಯಗಳಲ್ಲಿ ವೈವಿಧ್ಯತೆಯಿದೆ. ಕಥೆಗಳ ಭಾಷೆ ಸರಳವಾಗಿದೆ ಹಾಗೂ ರಸಾತ್ಮಕವಾಗಿದೆ. ನಿರೂಪಣೆ ನೇರ ಹಾಗೂ ಸುಲಭಗ್ರಾಹ್ಯ. ಕಥೆಗಳು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಪ್ರಸಂಗಗಳು ಅನುಭವದ ಮಾತುಗಳಾಗಿರುವುದರಿಂದ ಥಟ್ಟನೆ ಮನಸ್ಸಿಗೆ ತಾಗುತ್ತವೆ.
ಪುಟಗಳು : 151
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !