ಅಣ್ಣನ ನೆನಪು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ, “ರಾಮಾಯಣ ದರ್ಶನಂ” ಕೃತಿಗಾಗಿ ಜ್ಞಾನಪೀಠ ಪಡೆದು ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟವರು. ಕುವೆಂಪುರವರನ್ನು ಒಬ್ಬ ತಂದೆಯಾಗಿ, ಉಪ್ಪು ಖಾರ ತಿನ್ನುವ ಮನುಷ್ಯನಾಗಿ ಚಿತ್ರಿಸಿದ ಒಂದು ಅಪರೂಪದ ಕೃತಿ ‘ಅಣ್ಣನ ನೆನಪು’.
“ಅಣ್ಣನ ನೆನಪು ” ನಿಜಕ್ಕೂ ಒಂದು ಸಂಗ್ರಹಯೋಗ್ಯ ಕೃತಿ. ಇದು ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಗೊಂದಲ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು, ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ.
ಪುಟಗಳು: 210
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !