ಈ ಪುಸ್ತಕ ಒಂದು ಉಪಯುಕ್ತ ಕಿರುಹೊತ್ತಿಗೆಯಾಗಿದ್ದು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕೊಂಡು ಓದಿ ಸಂಗ್ರಹಿಸಿಟ್ಟುಕೊಳ್ಳುವಷ್ಟು ಮಹತ್ವವಾಗಿದೆ. ಆರೋಗ್ಯಕರ ಜೀವನ ನಡೆಸಲು ನಮ್ಮ ಆಹಾರ ಪದ್ಧತಿಯಲ್ಲೇ ಕೊಂಚ ಮಾರ್ಪಾಡು ತಂದುಕೊಂಡರೆ ಸಾಕು ಎಂದು ಈ ಪುಸ್ತಕ ಪ್ರತಿಪಾದಿಸುತ್ತದೆ. ಎಲ್ಲ ರೋಗಗಳಿಗೂ ಮೂಲ ನಮ್ಮ ಜೀವನಶೈಲಿ ಅಥವಾ ನಮ್ಮ ಆಹಾರ ಪದ್ಧತಿ. ಕುರುಕುಲು ತಿಂಡಿ ಸೇವಿಸುವ, ಹಸಿವಿಲ್ಲದಿದ್ದಾಗಲೂ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಆರೋಗ್ಯಕ್ಕೆ ಹಾನಿಯೇ ಹೊರತು ಬೇರೇನೂ ಲಾಭವಿಲ್ಲ ಎಂದು ಇಲ್ಲಿ ಹೇಳಲಾಗಿದೆ.
ಮನೆಯಲ್ಲಿ ಹಿರಿಯರಿದ್ದರೆ ಅವರ ಅನುಭವದ ನುಡಿಗಳು ನಮಗೆ ನೆರವಾಗುತ್ತವೆ. ಇಂತಹ ಹಿರಿಯರ ಪಾತ್ರವನ್ನು ëಅಂಗೈಯಲ್ಲಿ ಆರೋಗ್ಯí
ಪುಸ್ತಕ ನಿರ್ವಹಿಸಲಿದೆ. ಪ್ರತಿಯೊಬ್ಬರ ಖಾಸಗಿ ಸಂಗ್ರಹಕ್ಕೂ ಅತ್ಯಂತ ಅಗತ್ಯವಾದ ಪುಸ್ತಕ ಇದು.
- ಹುಲಿಕಲ್ ನಟರಾಜು
ಪುಟಗಳು : 154
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !