Click here to Download MyLang App

ಅಂದಿನ ರಾಮನ ಮುಂದಿನ ಕಥೆ (ಇಬುಕ್)

ಅಂದಿನ ರಾಮನ ಮುಂದಿನ ಕಥೆ (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ಭವಭೂತಿಯ ಉತ್ತರರಾಮಚರಿತ ನಾಟಕದ ಕನ್ನಡ ಅನುವಾದ

ಅಕ್ಷರ ಕೆ.ವಿ.

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana
  

 

...ಭವಭೂತಿಯು ಈ ನಾಟಕವನ್ನು ವಾಸ್ತವವಾದಿ ಪಾತಳಿಯಲ್ಲಿಯೇ ಕಟ್ಟಿದ್ದಾನೆ. ಕವಿಗೆ ರಾಮನು ದೇವನೇ ಹೌದು. ಹಾಗಿದ್ದೂ, ರಾಮನನ್ನು ತಪ್ಪು ಮಾಡುವ ಸಾಮರ್ಥ್ಯವುಳ್ಳ ಮನುಷ್ಯನನ್ನಾಗಿ ತೋರಿಸಲು ಆತ ಹೆದರುವುದಿಲ್ಲ. ರಾಮ ಸೀತೆಯರ ಕಥೆಗೆ ಮನುಷ್ಯ ಜಗತ್ತಿನ ಅನುಭವಗಳನ್ನೂ, ಭಾವನೆಗಳನ್ನೂ ಈ ನಾಟಕವು ಬೆಸೆಯುವ ಮೂಲಕವೇ ಪ್ರೇಕ್ಷಕರ ಅನುಭವಕ್ಕೆ ಪ್ರಮಾಣಬದ್ಧತೆಯನ್ನೂ ಸ್ಫುಟತೆಯನ್ನೂ ತಂದುಕೊಡುತ್ತದೆ. ರಾಮನನ್ನು ದೇವರೆಂದು ಭಾವಿಸಿ, ಅವನ ಕಥೆಯನ್ನು ಪುರಾಣವೆಂಬಂತೆ ನೋಡುವುದರಲ್ಲಿ ಭವಭೂತಿ ಆಸಕ್ತಿಯನ್ನು ತೋರಿಸುವುದಿಲ್ಲ. ಬದಲು ಆತ ಈ ನಾಟಕವನ್ನು ರಾಮ ಸೀತೆಯರೆನ್ನುವ ಮನುಷ್ಯರ ಕಥೆಯಾಗಿ ಕಟ್ಟಿ ಪ್ರೇಕ್ಷಕರಿಗೆ ವೈಯಕ್ತಿಕವಾಗಿ ತಟ್ಟುವಂತೆ ಮಾಡಿದ್ದಾನೆ. ರಾಮ ಸೀತೆಯರ ಕಥೆಯು ಹಲವು ಪದರಗಳನ್ನು ಹೊಂದಿದ ವಾಸ್ತವದಲ್ಲಿ ಬಿಚ್ಚಿಕೊಳ್ಳುತ್ತದೆ. ದಂಪತಿಗಳ ನಡುವಿನ ಪ್ರೀತಿಯೆಂಬುದು ಪರಸ್ಪರರನ್ನು ಒಳಗೊಳ್ಳುವ ಉತ್ಕಟವಾದ ಅನುಭವವಾಗಿ, 'ಸುಖ ದುಃಖವೆಂಬೆರಡು ಎರಡಲ್ಲವೆಂಬರಿವು' ಹುಟ್ಟಲಿಕ್ಕೆ ಭವಭೂತಿಯ ಬಹುವಾಸ್ತವದ ರಚನೆ ಕವಿಯ ಚಮತ್ಕಾರ ಮಾತ್ರವಾಗಿ ಉಳಿಯದೇ ನಾಟಕದ ಅನಿವಾರ್ಯ ವಿನ್ಯಾಸವಾಗುತ್ತದೆ.


-ಡಾ. ಜಿ.ಕೆ. ಭಟ್ ಅವರು ಸಂಪಾದಿಸಿರುವ ಈ ನಾಟಕದ ಮುನ್ನುಡಿಯಿಂದ

 

ಪುಟಗಳು: 125

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !