ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಡಿ. ಆರ್. ಅವರ ಚಿಂತನೆಗಳು ಬೆಳೆದು ಬಂದ ರಿತಿಯು ಒಂದರ್ಥದಲ್ಲಿ ನಮ್ಮ ಸಂಸ್ಕೃತಿಯ, ಅಂದರೆ ಯಾವುದನ್ನು ನಾವು ತೃತೀಯ ಜಗತ್ತಿನ ಸಂಸ್ಕೃತಿಗಳೆಂದು ವಿಶಾಲಾರ್ಥದಲ್ಲಿ ಗುರುತಿಸುತ್ತೇವೋ ಅಂಥ ಸಂಸ್ಕೃತಿಯ, ಆತಂಕ-ತಲ್ಲಣ-ಬಯಕೆ-ವಿಷಾದಗಳೆಲ್ಲದರ ಜತೆಗೆ ನಡೆಸಿದ ಮುಖಾಮುಖಿಯೂ ಹೌದು. ಇಂಥ ಪ್ರತಿ ಹಂತದಲ್ಲೂ ಡಿ. ಆರ್. ರ ಪಠ್ಯಗಳು ಅಯಾ ಕಾಲದ ಮುಖ್ಯ ಲಕ್ಷಣಗಳ ಜತೆಗೆ ಒಪಿಗೆಯ ರೂಪದಲ್ಲಿ ಯಾ ವಿರೋಧದ ನೆಲೆಯಲ್ಲಿ ಸಂವಾದ ನಡೆಸಿವೆ; ಸಾಂಸ್ಕೃತಿಕ-ರಾಜಕೀಯ ಚರ್ಚೆಗಳನ್ನು ಆರಂಭಿಸಿವೆ. ಇಂಥ ಮುಖಾಮುಖಿ-ಚರ್ಚೆಗಳ ಮೂಲಕವೇ ಡಿ. ಆರ್. ಕನ್ನಡದ ಸಾಂಸ್ಕೃತಿಕ ಬದುಕಿಗೆ ನಿರಂತರವಾಗಿ ಸಂಘರ್ಷವನ್ನು ಕೊಟ್ಟರು ಎನ್ನುವುದು ನನ್ನ ನಂಬಿಕೆ.
-ಎನ್. ಮನು ಚಕ್ರವರ್ತಿ
ಮುನ್ನುಡಿಯಿಂದ
ಪುಟಗಳು: 160
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !