ಬರಹಗಾರ: ಡಾ. ಶಿವರಾಮ ಕಾರಂತ
ಅಳಿದ ಮೇಲೆ ಡಾ. ಶಿವರಾಮ ಕಾರಂತರವರು ರಚಿಸಿರುವ ಒಂದು ಕಾದಂಬರಿ. ಈ ಕೃತಿಯು, ಒಬ್ಬ ವ್ಯಕ್ತಿ ಸತ್ತಮೇಲೆ ಅವನ ಸುತ್ತಲಿನ ಜನ ಹೇಗೆ ಅವನ ಬಗ್ಗೆ ಮಾತಾಡುತ್ತಾರೆ ಅನ್ನುವದರ ಬಗ್ಗೆ ವಿವರಿಸುತ್ತದೆ.
ಇದೊಂದು ಕಾದಂಬರಿ ಓದಿದ ಮೇಲೆ ಇಷ್ಟು ದಿನ ಯಾಕೆ ಓದಲಿಲ್ಲ ಅನ್ನುವ ಕೊರಗು ಕಾಡಿತು. ಶಿವರಾಮ ಕಾರಂತರ ಜೀವನದ ದಟ್ಟ ಅನುವದಿಂದ ಕಟ್ಟಿಕೊಟ್ಟ ಕಾದಂಬರಿ ಅಳಿದಮೇಲೆ. ಒಬ್ಬ ವ್ಯಕ್ತಿಯ ಸಾವಿನ ನಂತರ ಅವನ ಜೀವನವನ್ನು ಮೆಲುಕು ಹಾಕುವ ಕಥಾವಸ್ತು.
ಮೊದಲಿಗೆ ಕಥಾನಾಯಕ ಯಶವಂತನ ಜೀವನವನ್ನು ಅಳೆದು ತೂಗಿ ಲೆಕ್ಕ ಹಾಕಲು ಹೊರಟಿರುವ ನಿರೂಪಕ ಆ ಪಾತ್ರದೊಂದಿಗೆ ಹಬ್ಬಿರುವ ವ್ಯಕ್ತಿಗಳು ಹಾಗೂ ಘಟನೆಗಳು ಮೆಲುಕು ಹಾಕಿ ಯವಂತನ ಘನ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡುತ್ತಾರೆ. ಎಲ್ಲ ಘಟನೆಗಳ ಪೋಣಿಸುವಿಕೆಯ ಕುಸುರಿ, ನಿರೂಪಣೆ ಶೈಲಿ ಹಾಗೂ ಲೇಖಕನೆ ನಿರೂಪಕನಾಗಿ ಒಳಗೊಳ್ಳುವಿಕೆ ತುಂಬಾ ಚನ್ನಾಗಿ ಮೂಡಿ ಬಂದಿದೆ.
- Shreeshail Magadum
ಕೃಪೆ
ಪುಟಗಳು: 215
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !