ಬರಹಗಾರ: ಪೂರ್ಣಚಂದ್ರ ತೇಜಸ್ವಿ
ತೇಜಸ್ವಿಯವರು ಅವರ ಅಂಡಮಾನ್ ಪ್ರವಾಸ ಒಂದು ಆಕಸ್ಮಿಕ ಎಂದು ಹೇಳುತ್ತಾರೆ.. ಅವರು ಅವರ ಮಂಗಳೂರು, ಬೆಂಗಳೂರು ಗೆಳೆಯರ ಜೊತೆಗೂಡಿ ಮೂಡಿಗೆರೆಯಿಂದ ಮದ್ರಾಸಿಗೆ ಹೋಗುತ್ತಾರೆ.. ಅಲ್ಲಿಂದ ಹಡಗಲ್ಲಿ ಅಂಡಮಾನ್ ನತ್ತ ಪಯಣ.. ಹಡಗಿನ ಪ್ರಯಾಣದ ಅನುಭವ, ರೀಲು ರಾಡು ಗಾಳ ಹಿಡ್ಕೊಂಡು ಮೀನು ಬೇಟೆ ಮಾಡಲು ಹೊರಟಿದ್ದು ಎಲ್ಲವನ್ನೂ ರಸವತ್ತಾಗಿ ವಿವರಿಸಿದ್ದಾರೆ.. ಮುಂದೆ ಪೋರ್ಟ್ ಬ್ಲೇರ್ ಅಲ್ಲಿ ನಡುಕ ಹುಟ್ಟಿಸಿದ ಸೈಕೊಲೊಜಿಕಲ್, ಫಿಸಿಕಲ್ ಮಲೇರಿಯಾ ಕಥೆಗಳು.. ಅಲ್ಲಿ ನೋಡಿದ ಕರಿಯ ಮೀನು, ತೆಂಗಿನಕಾಯಿ ಸಿಪ್ಪೆಯನ್ನು ತನ್ನ ಕೊಂಬಿನಿಂದ ಸೀಳುವ ಮಡ್ ಕ್ರ್ಯಾಬ್, ದೈತ್ಯ ಕಪ್ಪೆಚಿಪ್ಪುಗಳು, ನೀಲಿಯ ಮೀನು, ಗಪೂಕ್ ಎಂದು ಶಬ್ದ ಮಾಡುವ ಹಕ್ಕಿ, ಸಮುದ್ರದ ದಡದಲ್ಲೇ ಆರಾಮವಾಗಿ ಬಂದ ಅಕ್ಟೋಪಸ್!! ವಂಡೂರಿನ ಹವಳದ ದಂಡೆಗಳು ಹೀಗೆ ಪ್ರತಿಯೊಂದನ್ನೂ ನೋಡುವುದೂ ಮಾತ್ರವಲ್ಲದೆ ಅವುಗಳ ಬಗ್ಗೆ ಆಳವಾಗಿ ವರ್ಣಿಸಿದ್ದಾರೆ.. ದಿಗ್ಲಿಪುರದಲ್ಲಿ ಅವರ ಗಾಳಕ್ಕೆ ಸಿಕ್ಕ ಸ್ಕ್ವಿಡ್, ಈ ಭಯಾನಕ ಸಮುದ್ರ ಜೀವಿ ಬಗ್ಗೆ ಅವರು ಬರೆದಿದ್ದನ್ನೂ ನೋಡಿ, ಜಲಕ್ರೀಡೆ ಆಡಿದ್ದ ನಂಗೆ ಒಂದೇ ಸಲ ಮೈ ಛಳಿ ಬಂದಂಗಾಯ್ತು!
ಹಾಗೆಯೇ ಪುಸ್ತಕದ ಕೊನೆಯ ಕೆಲವು ಪುಟಗಳಲ್ಲಿ, ಮಹಾನದಿ ನೈಲ್ ಬಗ್ಗೆ ಅತ್ಯಂತ ಸವಿಸ್ತಾರವಾಗಿ ತಿಳಿಸಿದ್ದಾರೆ.. ಅದರ ಉಗಮ, ಅದರ ಮೇಲೆ ನಡೆದ ಸಂಶೋಧನೆಗಳು, ಅಲ್ಲಿನ ಜನ ಜೀವನ ಹೀಗೆ ಹಲವು ವಿಷಯಗಳನ್ನು ಬರೆದಿದ್ದಾರೆ..
- ಸುಪ್ರೀತಾ ವೆಂಕಟ್, ಪುಸ್ತಕಪ್ರೇಮಿ ಬ್ಲಾಗ್ ವಿಮರ್ಶೆ
ಪುಟಗಳು: 130
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !