ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Publisher: Panchami Media Publications
ಇದನ್ನು ಕೇಳಿದ್ದು ಜಗದ್ವಿಖ್ಯಾತ ನಿರ್ದೇಶಕ ಅಕಿರಾ ಕುರಸಾವಾ ತನ್ನೊಂದು ಸಂದರ್ಶನದಲ್ಲಿ. ಆವತ್ತಿನಿಂದ ಸುಮ್ಮನೆ ಆ ಮಾತಿನ ಜಾಡು ಹಿಡಿದು ಹೋದರೆ ಎಷ್ಟೊಂದು ಪಾಪಪ್ರಜ್ಞೆಗಳು ನಮ್ಮ ಸುತ್ತಮುತ್ತ ಕಾಲಿಗೆ ತೊಡರುತ್ತವೆ ಅನ್ನಿಸಿತು. ಧಾರ್ಮಿಕ ಪಾಪಪ್ರಜ್ಞೆ, ಭಾಷಿಕ ಪಾಪಪ್ರಜ್ಞೆ, ಕೋಮು ಪಾಪಪ್ರಜ್ಞೆ, ಸಂಬಂಧದೊಳಗಿನ ಪಾಪಪ್ರಜ್ಞೆ, ಅಂತಸ್ತು ಹುಟ್ಟಿಸಿದ ಪಾಪಪ್ರಜ್ಞೆ. ಬಡವರಾಗಿದ್ದ ನಾವು ಕ್ರಮೇಣ ಶ್ರೀಮಂತರಾದರೆ ಬಡವರನ್ನು ಕಂಡಾಗೆಲ್ಲ ಪದೇಪದೇ ನಮ್ಮ ಪಾಪಪ್ರಜ್ಞೆ ಜಾಗೃತವಾಗುತ್ತದೆ. ನಮ್ಮ ಮಕ್ಕಳನ್ನು ನಾವು ಸರಿಯಾಗಿ ಬೆಳೆಸುತ್ತಿಲ್ಲವೆಂದಾದರೆ ಎಲ್ಲೋ ಮಕ್ಕಳು ತಂದೆ ತಾಯಿಗಳನ್ನೇ ಕೊಂದ ಸುದ್ದಿ ಓದಿದರೆ ನಮ್ಮ ಪಾಪಪ್ರಜ್ಞೆ ಜಾಗೃತವಾಗುತ್ತದೆ. ಯಾವುದೋ ಕೋಮು ಗಲಭೆ ಸುದ್ದಿಯಾದರೆ ನಮ್ಮೊಳಗೆ ನಾವು ಗುಟ್ಟಾಗಿ ಇಟ್ಟುಕೊಂಡಿರುವ ಕೋಮುವಾದ ಜಾಗೃತವಾಗುತ್ತದೆ. ನಮ್ಮ ದಾಂಪತ್ಯದ ಬಿರುಕು, ನಾವು ನೋಡುವ ಚಿತ್ರ, ಓದುವ ಕತೆಗಳ ಬಿರುಕಿನ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತದೆ.
ನಮ್ಮ ಪಾಪಪ್ರಜ್ಞೆ ಕಲೆಯ ಪಾಪಪ್ರಜ್ಞೆಯೂ ಆಗುತ್ತಿರುವುದು ಹೀಗೇ, ಹಾಗಾಗಿ ಯಾವತ್ತೋ ಹೇಳಿದ ಕುರಸಾವಾನಾ ಮಾತು ಪ್ರಸ್ತುತವಾಗುತ್ತಾ ಹೋಗುತ್ತಿದೆ. ಇತ್ತೀಚೆಗೆ ಹಲವು ದೃಶ್ಯಮಾಧ್ಯಮಗಳಲ್ಲಿ ಬರುತ್ತಿರುವ ಇಂಥಹ ದಂಡಿದಂಡಿ ಕಿರುಚಿತ್ರ, ಸಿನಿಮಾ, ಸರಣಿಗಳು ಅದಕ್ಕೆ ಸಾಕ್ಷಿಯಾಗಿವೆ. ಮೊನ್ನೆ ಮೊನ್ನೆ ಮಲೆಯಾಳಂನಲ್ಲಿ ಬಂದ ‘ವಿಕೃತಿ’ ಸಿನಿಮಾ ಆಗಲೀ, ಕನ್ನಡದಲ್ಲಿ ಬಂದ ‘ಪಬ್ಲಿಕ್ ಟಾಯ್ಲೆಟ್’ ಆಗಲೀ ಈ ಕಾಲದ ಸೋಶಿಯಲ್ ಮೀಡಿಯಾ ಬಳಕೆ ಬಗ್ಗೆ ನಮಗೆಲ್ಲ ಇರುವ ಪಾಪಪ್ರಜ್ಞೆಯ ಕಲಾರೂಪವೇ. ಇದನ್ನೆಲ್ಲ ಜ್ಞಾಪಿಸುವಂತೆ ಕತೆಗಾರ ಸತೀಶ್ ಶೆಟ್ಟಿ ವಕ್ವಾಡಿ ಅವರ ‘ಅಜ್ಜ ನೆಟ್ಟ ಹಲಸಿನ ಮರ’ ಅವರ ಕಥಾಸಂಕಲನ ಕೈಯಲ್ಲಿದೆ.
ಕುಂದಾಪುರದ ಪ್ರಾಂತ್ಯದಿಂದ ಬಂದ, ಆ ಪರಿಸರದ ಕತೆಗಳನ್ನೇ ಹೆಚ್ಚು ಬರೆದಿರುವ, ಗ್ರಾಮೀಣ ಭಾಗವನ್ನು ಸೂಕ್ಷ್ಮವಾಗಿ ಹಿಡಿದಿಡುವ ಸತೀಶ್ ಶೆಟ್ಟಿ, ಸಂಕಲನದ ಒಂದಿಲ್ಲೊಂದು ಕತೆಗಳಲ್ಲಿ ಮನುಷ್ಯನ ಪಾಪಪ್ರಜ್ಞೆಯನ್ನು ತಂದಿರಿಸುತ್ತಾ ಹೋಗುತ್ತಾರೆ. ಭಿನ್ನಕೋಮಿನ ಕತೆಯನ್ನು ಸಾಮಾಜಿಕ ಪ್ಲಾಟ್ಫಾರ್ಮ್ನ ಮೇಲಿಡುವ ‘ಬಣ್ಣದ ನೆರಳು’, ಪರಂಪರೆಯನ್ನು ಬಿಗಿದಪ್ಪಿಕೊಂಡು ನಿಲ್ಲಬೇಕಾ, ಆಧುನಿಕತೆಯನ್ನು ಬರಮಾಡಿಕೊಳ್ಳಬೇಕಾ ಎನ್ನುವ ಅಭಿವೃದ್ಧಿ ಬಗೆಗಿನ ಪಾಪಪ್ರಜ್ಞೆಗೆ ಹಚ್ಚುವ ‘ಅಜ್ಜ ನೆಟ್ಟ ಹಲಸಿನ ಮರ’- ಕತೆಗಳು ‘ಗಿಲ್ಟ್’ ಅನ್ನುವ ಕುರಸಾವಾ ಮಾತುಗಳಿಗೆ ಪುರಾವೆಯೆನ್ನುವಂತೆ ಕೈಗೆ ಸಿಕ್ಕವು. ಕಥೆಗಾರರ ಒಟ್ಟು ಕಥಾಪ್ರಜ್ಞೆಯಲ್ಲಿ ಈ ಗಿಲ್ಟ್ ಒಂದಲ್ಲಾ ಒಂದು ಬಗೆಯಲ್ಲಿ ಸಿಗುತ್ತಲೇ ಹೋಗುತ್ತವೆ.
ಪುಟಗಳು: 112
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !