ಲೇಖಕರು:
ವಿವಿಧ ಲೇಖಕರು
ಅನುವಾದ ಸಿ. ಸೀತಾರಾಮ್
ಪ್ರಧಾನ ಸಂಪಾದಕ ನಿರಂಜನ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮಲಪುಕೋ ಉಷಷಂದೋ ಲ್ವಯೋ..ಆಫ್ರಿಕದ ಹಾಡಿನೊಂದು ಸಾಲು. ಅರ್ಥ ನಮ್ಮ ಅನಂತರದವರನ್ನು ಮೇಲೇತ್ತು..ಕಗ್ಗಾಡು. ವಸಾಹತುದಾರರು ಅಲ್ಲಿನ ಕ್ರೂರ ಮೃಗಗಳು. ನೀಲಿ ಗಗನ. ಕಂದು ನೆಲ. ಕರಿಯನನ್ನು ಹಿಂಡುತ್ತಾನೆ. ಬಿಳಿದೊಗಲ ಸುಲಿಗೆದಾರ. ಆದರೆ ಮಸಣದ ರಣಬಿಸಿಲಿಗೆ ಅಲ್ಲಿ ಇಲ್ಲಿ ಇದಿರಾಗುತ್ತದೆ ಹಿಂಡುವ ಚಳಿ, ಶೋಷಕರ ವಿರುದ್ಧ ಜನಾಂಗಗಳು ಬಂಡೇಳುತ್ತವೆ, ತಮ್ಮ ಸ್ವಾತಂತ್ರ್ಯವನ್ನು ಸಾರುತ್ತವೆ, ಸಮಪಾಲಿನ ಸಮಬಾಳಿನ ಹೊಸ ಗಾಳಿಗೆ ಮೈಯೊಡ್ಡುತ್ತವೆ. ಗೊಂಡಾರಣ್ಯದ ಕತ್ತಲನ್ನೂ ಅದನ್ನು ಇರಿಯುತ್ತಿರುವ ಪ್ರಭೆಯನ್ನೂ ಪ್ರತಿಬಿಂಬಿಸುವ ಹದಿಮೂರು ಕಥೆಗಳ ಅಮೂಲ್ಯ ಸಂಕಲನ ಆಫ್ರಿಕದ ಹಾಡು.
ಇದು ವಿಶ್ವಕಥಾಕೋಶದ ಎರಡನೆಯ ಸಂಪುಟ.
ಪುಟಗಳು: 168
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !