ಪರಮಾತ್ಮನು ಜೀವಿಗಳನ್ನು ಸೃಷ್ಟಿಸುವಾಗ ಉದ್ದೇಶ ಪೂರ್ವಕವಾಗಿಯೇ, ಪ್ರತಿಯೊಂದು ಜೀವಿಗೂ ಒಂದೊoದು ಕೊರತೆಯನ್ನಿಟ್ಟಿರುತ್ತಾನಂತೆ!.ಇದರಿoದಲಾದರೂ ಮನುಜ ತನ್ನ ಅಹಂಭಾವವನ್ನು ತೊರೆದು,ಕೊಂಚವಾದರೂ ಮನುಷ್ಯತ್ವದಿಂದ ಬಾಳಲಿ ಎಂದು! ಆದರೆ ನಾವುಗಳಿಂದು ಹಣ,ಅಧಿಕಾರ ಮತ್ತಿತರ ಸಲಕರಣೆಗಳಿಂದ ಈ ಕೊರತೆಗಳನ್ನು ಸರಿಪಡಿಸಿಕೊಂಡೇ ತೀರುತ್ತೇವೆಂಬ ಭ್ರಮೆಯಲ್ಲಿ.ಮಾನವತೆಯನ್ನು ಬದಿಗಿಟ್ಟು,ಮಾಡಬಾರದ ಅನಾಚಾರಗಳನ್ನು ಮಾಡಿ.ನಮ್ಮ ಕಾರ್ಯ ಸಾಧನೆಗೆ ಇಂದು ಕಾತುರರಾಗಿದ್ದೇವೆ.ಇಂತಹುದೇ ಒಂದು ಘಟನೆಗೆ ನಿದರ್ಶನ ಈ ನಡುರಾತ್ರಿ ನಾಗಸಂದ್ರದಲ್ಲಿ ಬರುವ ಬಡ್ಡಿಯ ಪಾತ್ರ.
ತಾನೂ ಸಹ ಅಪ್ಪನೆನಿಸಿಕೊಂಡು,ಸಮಾಜ ತನ್ನನ್ನು ಪುರುಷನೆಂದು ಒಪ್ಪಿಕೊಳ್ಳಬೇಕೆಂಬ ಹಠದಿಂದ.ಮಾಟಗಾರ ಅಸುರಾಚಾರಿಯನ್ನು ಸಂಪರ್ಕಿಸಿ.ಅವನ ಮುಟ್ಟಾಳ ಮಾತುಗಳನ್ನೇ ನಿಜವೆಂದೇ ಭಾವಿಸಿ. ಬಡ,ಅಮಾಯಕ ತುಂಬು ಗರ್ಭಿಣಿಯಾದ ದೇವ್ರಾಣಿಯನ್ನು ತನ್ನ ಸಂಗಡಿಗರಿoದ ಅಪಹರಿಸಿ ತಂದು.ಕಾದ ಕಬ್ಬಿಣದ ಸಲಾಕೆಯಿಂದ ಆಕೆಯ ದೇಹದ ಮೇಲೆ ಬರೆಗಳನ್ನು ಎಳೆದು! ನರಳಿಸುತ್ತಾ ಸಾಯಿಸಿ.ಆಕೆಯ ಗರ್ಭದ ರಕ್ತವನ್ನು ಕೊಂಡೊಯ್ದು ತನ್ನ ಹೆಂಡತಿಯ ಹೊಟ್ಟೆಗೆ ಸೊಂಕಿಸಲು ಪಾಪಿ ಬಡ್ಡಿ ಮುಂದಾಗುತ್ತಾನೆ.
ಆದರೆ ತನ್ನ ಮಗಳು ಅಪಾಯದಲ್ಲಿದ್ದಾಳೆಂದು,ತಿಳಿದ ಶಾಂತಮ್ಮ,ಧಾವಿಸಿ ಬಂದು. ಆಕೆಯನ್ನು ಪಾರು ಮಾಡಿಕೊಂಡು ಕರೆದೊಯ್ಯುವಾಗ,ಕಾಲು ಜಾರಿ ಬಾವಿಯೊಳಗೆ ಬಿದ್ದು.ಅಮ್ಮ-ಮಗಳಿಬ್ಬರೂ ದುರಂತ ಸಾವಿಗೀಡಾಗುತ್ತಾರೆ.ಆದರೆ ಶಾಂತಮ್ಮ ಸಾಯುವ ಮುನ್ನ ಕೊನೆಗಳಿಗೆಯಲ್ಲಿ ಕಂಡ ಒಂದು ಬೈಕ್‌ನಿಂದ ತನ್ನ ಮಗಳ ದುರಂತಕ್ಕೆ,ಈ ಬೈಕಿನ ಮೇಲೆ ಸದಾ ಸವಾರಿ ಮಾಡುವ ಹರಿ,ಗುರು ಮತ್ತು ಚಂದ್ರುವೇ ಕಾರಣರೆಂದು ಕುರುಡಾಗಿ ನಂಬುತ್ತಾ,ಅವರ ಮೇಲೆ ಪ್ರತೀಕಾರಕ್ಕಾಗಿ ಹಲವಾರು ರೀತಿ ಪ್ರಯತ್ನಿಸುತ್ತಾಳೆ.ಆದರೆ ಶಾಂತಮ್ಮನ ಮಗಳ ದುರಂತಕ್ಕೆ ಬಡ್ಡಿ,ಸೋಪು ಮತ್ತು ಗಲ್ಲಿಯೆಂಬ ದುರುಳರು ನೈಜ ಕಾರಣರಾಗಿರುತ್ತಾರೆ.ಇದಿಷ್ಟೂ ವಿಚಾರವನ್ನು ಸಿದ್ಧಿ ಪುರುಷ ನಾಗಮಲ್ಲಯ್ಯನರಿಂದ ಅರಿತ,ಕಥಾನಾಯಕರು.ನಾಗಮಲ್ಲಯ್ಯನವರ ಸೂಚನೆಯಂತೆ ಬಡ್ಡಿ,ಸೋಪು ಮತ್ತು ಗಲ್ಲಿಯನ್ನು ಸಂಚನ್ನೂಡಿ ಕರೆತಂದು.ಶಾoತಮ್ಮನ ಆತ್ಮದ ಮುಂದೆ ನಿಜ ಒಪ್ಪಿಸಲು ಮುಂದಾಗುತ್ತಾರೆ.ಆದರೆ ಕೊನೇ ಕ್ಷಣದಲ್ಲಿ ಬಡ್ಡಿ ಮತ್ತು ಸಂಗಡಿಗರು ಉಲ್ಟಾ ಹೊಡೆದ ಕಾರಣದಿಂದ ಶಾಂತಮ್ಮನ ಸಿಟ್ಟು ತಾರಕಕ್ಕೇರಿ.ಕಥಾನಾಯಕರಿಗೆ ಇನ್ನು ಸಾವೇ ಗತಿಯೆಂದು ನಿರ್ಧಾರವಾಗುತ್ತದೆ.ಆದರೆ ಗಿರೀಶ್,ಮಾಲಾ ಮತ್ತು ನಾಗಮಲ್ಲಯ್ಯನವರ ಬುದ್ಧಿವಂತಿಕೆಯಿoದ,ಅಚ್ಚರಿಯ ರೀತಿಯಲ್ಲಿ ಕಥಾನಾಯಕರು ಪಾರಾಗಿ. ಬಡ್ಡಿ ಮತ್ತು ಸಂಗಡಿಗರೇ ಶಾಂತಮ್ಮನ ಸೇಡಿಗೆ ಬಲಿಯಾಗುತ್ತಾರೆ.