"ತರಂಗ" ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದೊಂದು ರಮ್ಯ, ಸಾಹಸಮಯ ನಿಧಿ ಶೋಧನೆ ಬಗೆಗೆ ಕಾದಂಬರಿ. ನಂಜನಗೂಡಿನ ಬಳಿಯ ಹಳ್ಳಿಯೊಂದರಲ್ಲಿ ವಾಸವಾಗಿದ್ದ ಒಬ್ಬ ಸಾತ್ವಿಕ ವೃದ್ಧರ ಅಪಹರಣವಾಗುತ್ತದೆ. ಅದು ಅವರ ಮನೆಯಲ್ಲಿದ್ದ ಒಂದು ಬೆತ್ತದ ಪೆಟ್ಟಿಗಾಗಿ. ಮಗ ಅಲೋಕನಿಗೆ ಫೋನಿನಲ್ಲಿ ಆ ಬೆತ್ತದ ಪೆಟ್ಟಿಗೆಯನ್ನು ತಂದೊಪ್ಪಿಸುವ ಬೆದರಿಕೆ ಒಡ್ಡುತ್ತಾರೆ ಕಿಡ್ನ್ಯಾಪ್ ಮಾಡಿದವರು. ಅಲೋಕ ಕುತೂಹಲಕ್ಕೆ ಪೆಟ್ಟಿಗೆ ತೆಗೆದು ನೋಡುತ್ತಾನೆ. ಹಳೆಯ ಕಾಲದ ನಾರು, ಬೇರು, ಗಂಟೆ, ಶಂಖ ಮತ್ತು ದೇವರ ಸ್ತುತಿಸುವ ತಾಳೆಗರಿಗಳು ಕಾಣಿಸುತ್ತವೆ. ಅವು ಬೆಲೆಬಾಳುವಂತವಲ್ಲ ಎನ್ನಿಸಿದರು ಅನುಮಾನದಿಂದ ಅದನ್ನು ನಕಲು ಮಾಡಿ ನಕಲಿ ವಾಸ್ತುಗಳನ್ನಿಟ್ಟು ಪೆಟ್ಟಿಗೆ ಕಿಡ್ನ್ಯಾಪರ್ಸ್ಗಳಿಗೆ ಹಸ್ತಾಂತರಿಸುತ್ತಾನೆ. ಅವನ ತಂದೆ ಶ್ರೀರಂಗಪಟ್ಟಣದ ಹೊರವಲಯದ ಫಾರಮ್ ಒಂದರಲ್ಲಿ ಬಂಧಿಯಾಗಿರುತ್ತಾರೆ. ಅಲ್ಲೊಂದು ಷೂಟ್ ಔಟ್ ನಡೆದು ತಪ್ಪಿಸಿಕ್ಕೊಳ್ಳುತ್ತಾರೆ. ಪೆಟ್ಟಿಗೆಯಲ್ಲಿದ್ದ ತಾಳೆಗರಿಯಲ್ಲಿನ ಪಠ್ಯವನ್ನು ಓದಲು ಇತಿಹಾಸ ಪ್ರಾಧ್ಯಾಪಕರ ಮೊರೆ ಹೋಗುತ್ತಾನೆ. ಅದೊಂದು ನಿಧಿಯ ನಿಗೂಢ ಮಾಹಿತಿ ಎನ್ನುವುದು ತಿಳಿಯುತ್ತಲೇ ಅಲೋಕ ಮತ್ತು ಅವನ ಪ್ರೇಯಸಿ ಭುವಿ. ಒಂದು ಕಡೆ ಕಿಡ್ನ್ಯಾಪರುಗಳು ಮತ್ತೊಂದೆಡೆ ಅಲೋಕ ಮತ್ತು ಭುವಿ ಪ್ರಯತ್ನಿಸುತ್ತಾರೆ. ಅಲೋಕನಿಗೆ ಸಹಾಯ ಮಾಡಲು ಹೊರಟ ಪೋಲೀಸ್ ಎಸ್ಸೈಗಳು ಕೂಡ ನಿಧಿಯ ಬೆನ್ನು ಹತ್ತುತ್ತಾರೆ. ಆ ಪ್ರಯತ್ನ ಹತ್ತಾರು ರೋಚಕ ತಿರುವುಗಳಲ್ಲಿ ನಿಧಿಯ ಜಾಗಕ್ಕೆ ಕರೆದೊಯ್ಯುತ್ತದೆ. ನಿಧಿಯನ್ನು ತಾನೇ ಕಬಳಿಸುವ ರತನ್ ಎಂಬ ಭೂಗತ ಲೋಕದವನ ಪ್ರಯತ್ನ ನಿಧಿ ಭೂಮಿಯ ಒಡಲು ಸೇರುತ್ತದೆ. ಕೊನೆಯಲ್ಲಿ ಶೂನ್ಯ ಸಂಪಾದನೆಯನ್ನು ಮಾಡಿದ ಅನುಭ ನಾಯಕಿ, ನಾಯಕನಿಗೆ.