ಡಾ. ಅಜಿತ್ ಹರೀಶಿಯವರ 'ಕೃತಿಕರ್ಷ' ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಸಾಹಿತ್ಯ ಎಂದು ನನಗೆ ಅನ್ನಿಸಿದೆ. ಯಾಕೆಂದರೆ ಡಾ. ಅಜಿತ್‌ರವರು ಇತ್ತೀಚೆಗೆ ಸಾಹಿತ್ಯ ಲೋಕದಲ್ಲಿ ಸಂಚಲನವನ್ನು ಉಂಟು ಮಾಡಿದ ಸಾಹಿತಿ. ನಾಡಿನಲ್ಲಿ ಪ್ರಕಟಗೊಂಡ ಅನೇಕ ಉತ್ತಮ ಕತೆ, ಕಾದಂಬರಿ, ಕವನ ಸಂಕಲನಗಳ ಒಂದು ಸ್ಥೂಲವಾದ ನೋಟ ಕೃತಿಕರ್ಷದ ಬರಹಗಳಿಂದ ಸಾಧ್ಯವಾಗುತ್ತದೆ. ಮೌಲ್ಯಮಾಪನ ಸಂದರ್ಭದಲ್ಲಿ ರೆಡಿ ರೆಕೋನರ್‌ನಂತೆ ಅಥವಾ ಕೈಪಿಡಿಯಂತೆ ಇಂಥ ಪುಸ್ತಕಗಳು ನೆರವಿಗೆ ಬರುತ್ತವೆ. ಅಲ್ಲದೇ ಡಾ. ಅಜಿತ್‌ರವರ ಓದಿನ ಹರಹು ಎಷ್ಟು ವಿಶಾಲವೂ, ಗಂಭೀರವೂ ಮತ್ತು ಆಳವೂ ಆಗಿದೆ ಎನ್ನುವುದನ್ನು ನೋಡುವುದಕ್ಕೂ ಅನುಕೂಲವಾಗಲಿದೆ. ಆದ್ದರಿಂದ 'ಕೃತಿಕರ್ಷ' ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಸಾಹಿತ್ಯ ಪರಿಕರವಾಗುತ್ತದೆಂದು ಹೇಳಲು ಇಷ್ಟಪಟ್ಟಿದ್ದೇನೆ. ಸಹೃದಯ ಓದುಗರ ಇಂಥ ಟಿಪ್ಪಣಿಯು ಲೇಖಕನಿಗೆ ಸ್ಪೂರ್ತಿದಾಯಕವೂ ಆಗುತ್ತದೆ ಎನ್ನುವ ಮಾತುಗಳನ್ನು ನಾನು ಕೇಳಿಸಿಕೊಳ್ಳುತ್ತ ಬಂದಿದ್ದೇನೆ. ಕವಿ, ಕತೆಗಾರನಾದವನ ಓದು, ಸಾಮಾನ್ಯ ಓದುಗನ ದೃಷ್ಟಿಕೋನದಂತಿರುವುದಿಲ್ಲ. ಸಾಮಾನ್ಯ ಓದುಗನು ವ್ಯಕ್ತಪಡಿಸುವ ಅಭಿವ್ಯಕ್ತಿ, ಅಭಿಪ್ರಾಯಗಳಿಗಿಂತ ಭಿನ್ನವಿರುತ್ತವೆ. ವಿಭಿನ್ನವಾಗಿರಬೇಕೆಂದು ಸೃಜನಶೀಲ ಲೋಕವೂ ಅಪೇಕ್ಷೆ ಪಡುತ್ತದೆ. ಹೀಗೆ ಓದಿದವುಗಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇಳುವುದರ ಮೂಲಕ ಆ ಸಾಹಿತ್ಯಗಳಿಗೆ ಒಂದು ರೀತಿಯ ನ್ಯಾಯ ಒದಗಿಸಬಹುದು. ಅದರಿಂದ ಬರಹಗಾರನಿಗೆ ಮಾರ್ಗದರ್ಶಿಯೂ ಆಗಬಹುದು. ಸಾಹಿತ್ಯ ಪ್ರಪಂಚಕ್ಕೆ ಅನುಕೂಲವಾಗುತ್ತದೆ. ಲೇಖಕ ಒಳ್ಳೆಯ ಕೃತಿಗಳನ್ನು ನೀಡಲು ನೆರವಾಗುತ್ತದೆ. - ಅಶೋಕ ಹಾಸ್ಯಗಾರ ಆಯ್ದ ಎಪ್ಪತ್ತೇಳು ಲೇಖಕರ ಎಂಬತ್ತೇಳು ಕೃತಿಗಳ ಕುರಿತ ಒಂದು ಬೆಳಕಿಂಡಿ ಇಲ್ಲಿದೆ. ಇದನ್ನು ಓದಿ, ಆ ಪುಸ್ತಕಗಳು ಇಷ್ಟವಾದರೆ, ಈ ಪ್ರಯತ್ನ ಸಾರ್ಥಕವಾದಂತೆ. - ಡಾ. ಅಜಿತ್ ಹರೀಶಿ
ಕೃತಿಕರ್ಷ, ಡಾ. ಅಜಿತ್ ಹರೀಶಿ,Krutikarsha,Ajit Harishi