ಇದು ಬೆಂಗಳೂರಿನಲ್ಲಿ ಅದೇ ತಾನೆ ನೌಕರಿ ಹಿಡಿದು ಒಂದು ಮನಯಲ್ಲಿ ವಾಸವಾಗಿದ್ದ ಮೂರು ರೂಂಮೇಟುಗಳ ಜೀವನದ ಬಗೆಗಿನ ಲಘುಬರಹಗಳ ಸಂಗ್ರಹ. ಹದಿವಯಸ್ಸು ದಾಟಿ, ಮುದಿವಯಸ್ಸು ಇನ್ನೂ ದೂರವಿರುವ, ಮದಿ(ವಿ) ವಯಸ್ಸಿನ ಮೂರು ಯುವಕರ ಬೆಂಗಳೂರಿನ ಜೀವನದಲ್ಲಿ ನಡೆಯುವ ತಮಾಶೆಯ ಘಟನೆಗಳೇ ಇಲ್ಲಿನ ಹೂರಣ.
ಇವುಗಳಲ್ಲಿ ಒಂದು ಬರಹಕ್ಕೆ ೨೦೧೦ರ ಜನೇವರಿಯಲ್ಲಿ ಕೊರವಂಜಿ-ಅಪರಂಜಿ ಟ್ರಸ್ಟ್ ನಡೆಸಿದ್ದ ಪಡುಕೋಣೆ .ರಮಾನಂದರಾವ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ಇನ್ನೊಂದು ಬರಹ ವಿಜಯ ಕರ್ನಾಟಕ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿತ್ತು. ಉಳಿದ ಬಹುತೇಕ ಬರಹಗಳು ದಾಟ್ಸ್ಕನ್ನಡ ಜಾಲತಾಣದಲ್ಲಿ ಪ್ರಕಟಗೊಂಡಿದ್ದವು.
ಈ ಬರಹಗಳನ್ನು ನಾನು ಬರೆದದ್ದು ೨೦೧೦ರ ಎಡ-ಬಲದಲ್ಲಿ.. ಬರಹಗಳು ಒಂದು ದಶಕದ ಹಿಂದಿನವಾದರೂ ಈಗಿನ ಪೀಳಿಗೆಯವರಿಗೂ ಅವು ಇಷ್ಟವಾದಾವು ಎಂದು ನನ್ನ ನಂಬಿಕೆ.