
ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಕಷ್ಟದ ಕಾಲವಿದು - ಒಂದು ಕಡೆಗೆ ನೀನು ಇಂಥ ನೆಲೆಗೆ ಸೇರಿದವವನೆಂದು ಘೋಷಿಸಿಕೋ ಎಂದು ಒತ್ತಾಯಿಸುವ ಜನನಾಯಕರು, ಇನ್ನೊಂದೆಡೆ ನಕಾಶೆಯಲ್ಲಿರುವ ನೆಲವನ್ನೇ ಇಲ್ಲದ ಹಾಗೆ ಮಾಡುವ ಭೂಗಳ್ಳರು, ಇವತ್ತು ಪರಸ್ಪರ ಕೈಕೂಡಿಸಿದ್ದಾರೆ. ಇವರಿಬ್ಬರ ಭೂಗತ ಸಂಬಂಧದ ನೆಲೆಗಟ್ಟಿನ ಮೇಲೆ ಇಂದಿನ ಮಹಾನಗರಗಳು ಮೇಲೆದ್ದು ನಿಂತು ನಮ್ಮನ್ನು ಕೈ ಬೀಸಿ ಕರೆಯುತ್ತಿವೆ. ಆ ಕರೆಗೆ ಓಗೊಟ್ಟ ನಾಗರಿಕ ಸಮಾಜದ ಸುಪ್ತಪ್ರಜ್ಞೆಯೊಳಕ್ಕೆ ಸ್ವಂತದ ನೆಲ ಮತ್ತು ನೆಲೆಗಳ ಹುಡುಕಾಟದ ಕನಸಿದೆ, ಹಳವಂಡವಿದೆ. ಇಂಥ ಹೊಸಗಾಲದ ಜಗತ್ತಿನ ಒಂದು ನಾಟಕೀಯ ಆಖ್ಯಾನವನ್ನು ಪ್ರಸ್ತುತ ಕೃತಿಯು ಆದಷ್ಟೂ ಉದ್ವೇಗ ಮತ್ತು ಗದ್ದಲಗಳಿಲ್ಲದೆ ನಮ್ಮ ಕಿವಿಯೊಳಕ್ಕೆ ಉಸುರುತ್ತಿರುವಂತೆ ತೋರುತ್ತಿದೆ.
ಪುಟಗಳು: 78
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !