Click here to Download MyLang App

ಭಾರತೀಪುರ (ಇಬುಕ್)

ಭಾರತೀಪುರ (ಇಬುಕ್)

e-book

ಪಬ್ಲಿಶರ್
ಯು.ಆರ್‌. ಅನಂತಮೂರ್ತಿ
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 130.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

‘ಭಾರತೀಪುರ’, ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ವಿರಸದ ಸಮಗ್ರ ಪರಿಚಯದ ಅಸಲುಚಿತ್ರ. ಮೌಲ್ಯಗಳ, ಕಟ್ಟಡಗಳ, ವ್ಯಕ್ತಿಗಳ ನಡುವಣ ಈ ವಿರಸಕ್ಕೆ ಸಾಹಿತ್ಯಕವಾದದ್ದೇ ಅಲ್ಲದೆ, ಬಹುಬಾರಿ ಸಮಾಜಶಾಸ್ತ್ರದ್ದು ಹಾಗೂ ಒಮ್ಮೊಮ್ಮೆ ದಾರ್ಶನಿಕವಾದದ್ದು ಆದ ಆಯಾಮವೂ ಉಂಟು. ವಸ್ತುಸ್ಥಿತಿಯ ಮಟ್ಟದಲ್ಲಿ, ಕಾನಂಬರಿಯ ಮುಖ್ಯ ಗೊಡವೆ ಸಂಪ್ರದಾಯಬದ್ಧ ಸಮಾಜದ ಆಧುನೀಕರಣ; ಆ ಸಮಾಜದ ಮೂರ್ತ-ಅಮೂರ್ತ ಸಂಕೇತಗಳನ್ನು ತೊಡೆದುಹಾಕುವುದು; ಕನಿಷ್ಠ ಅವುಗಳನ್ನು ಅಪಮೌಲ್ಯಗೊಳಿಸುವುದು, ಹೊಸ ವಸ್ತುಸ್ಥಿತಯನ್ನು, ಮೌಲ್ಯಗಳನ್ನು ನಿರ್ಮಿಸುವುದು. ವ್ಯಕ್ತಿಯ ಮಟ್ಟದಲ್ಲಿ ಅದರ ಮುಖ್ಯ ಗೊಡವೆ ಬ್ರಾಹ್ಮಣ ಜಮೀನ್ದಾರನ ಕುಟುಂಬದಲ್ಲಿ ಹುಟ್ಟಿದ ಧೀಮಂತನೊಬ್ಬ ತನ್ನ ಜಾತಿ ಹಾಗೂ ವರ್ಗಗಳಿಂದ ಮುಕ್ತನಾಗಿ ತನ್ನ ವರ್ಗ-ಜಾತಿಯ ಶೋಷಣೆಗೆ ಗುರಿಯಾಗಿದ್ದ ದಲಿತರ ಜೊತೆಗೆ ಏಕೀಭಾವ ಸಾಧಿಸುವುದರ ಸಂಕಟ. ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈತುಂಬಿಸಿಕೊಂಡ ಈ ಕಾದಂಬರಿ ಅತ್ಯಂತ ಅರ್ಥವತ್ತಾದ ವಿವರಪೂರ್ಣವಾದ ಕಥೆಯನ್ನು ನೇಯುತ್ತದೆ. ಕಾದಂಬರಿಯಲ್ಲಿ ಒಂದು ಮೋಹಕವಾದ ದಾರ್ಶನಿಕ ಅರಾಜಕತೆಯಿದೆ. ಅದರಲ್ಲಿ ಮಾರ್ಕ್ಸ್, ಸಾರ್ತ್ರೆ, ಲೋಹಿಯಾ ಒಬ್ಬರನ್ನೊಬ್ಬರು ತಳ್ಳಾಡುತ್ತಾರೆ. ಅನಂತಮೂರ್ತಿಯವರು ಈ ಮೂವರು ದಾರ್ಶನಿಕರು ನೀಡುವ ಬೆಳಕಿನಲ್ಲಿ ಮಾನವನ ಪಾಡನ್ನು ಶೋಧಿಸಬಲ್ಲ ಸಾಮರ್ಥ್ಯ ಉಳ್ಲವರು.

-ಎಸ್. ವೆಂಕಟರಾಮ್ ‘ಭಾರತೀಪುರ

- ಒಂದು ಸಮೀಕ್ಷೆ’ ಲೇಖನದಿಂದ

 

ಪುಟಗಳು: 277

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
P
Phanish Muralidhar
ಅತ್ಯುತ್ತಮ ಸಂದೇಶವಿದೆ, ಒಳ್ಳೆಯ ಕಥೆಯಿದೆ

ನಾನು ಇತ್ತೀಚಿಗೆ ಓದಿ ಇಷ್ಟಪಟ್ಟ ಪುಸ್ತಕ. ನಾಯಕನು ವಿದೇಶಕ್ಕೆ ಹೋಗಿ ಕೆಲವು ವರ್ಷಗಳ ನಂತರ ಹಿಂದಿರುಗುತ್ತಾನೆ. ಆ ಕಾಲದ ಸಾಮಾಜಿಕ ಕಟ್ಟುಪಾಡುಗಳನ್ನು ಮುರಿಯಬೇಕೆಂದು ಪಣ ತೊಡುತ್ತಾನೆ. ಕಥೆಯಲ್ಲಿ ತಿರುವಿದೆ, ವಿಡಂಬನೆ ಇದೆ. ಕೆಲವು ಘಟನೆಗಳನ್ನು ರೋಮಾಂಚನವಾಗುವಂತೆ ಬರೆದಿದ್ದಾರೆ ಯು. ಆರ್. ಅನಂತಮೂರ್ತಿಗಳು.

ಈ ಪುಸ್ತಕವನ್ನು ಓದಿದ ನಂತರ ನಾನು ಮಾಡಿದ ವೀಡಿಯೋ ರಿವ್ಯೂ ಇಲ್ಲಿದೆ.

https://www.youtube.com/watch?v=pf9hgcyF9DU&feature=youtu.be