Click here to Download MyLang App

ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ

ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ

e-book
ಪಬ್ಲಿಶರ್
ಎಚ್‌ ಪಟ್ಟಾಭಿರಾಮ ಸೋಮಯಾಜಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

 

ಪ್ರಕಾಶಕರು: ಅಹರ್ನಿಶಿ ಪ್ರಕಾಶನ

Publisher: Aharnishi Prakashana

 

ಯು. ಆರ್. ಅನಂತಮೂರ್ತಿಯವರು ವಿವಿಧ ಕ್ಷೇತ್ರಗಳಲ್ಲಿ ದುಡಿಮೆ ಮಾಡಿದ ವಿಶ್ವದ ಹತ್ತು ಗಣ್ಯರ ಜೊತೆ ನಡೆಸಿದ ಮಾತುಕತೆಯ ಸಂಗ್ರಹವೇ ಎಚ್. ಪಟ್ಟಾಭಿರಾಮ ಸೋಮಯಾಜಿ ಅವರು ಸಂಪಾದಿಸಿದ ‘ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ’ ಕೃತಿ. ಇಲ್ಲಿನ ಬಹುತೇಕ ಸಂದರ್ಶನಗಳು ಮೈಸೂರು ಆಕಾಶವಾಣಿಯ "ಚೆಲುವ ಕನ್ನಡ ನಾಡು" ಎಂಬ ಕಾರ್ಯಕ್ರಮ ಸರಣಿಗೆ ಮಾಡಿದವುಗಳಾಗಿವೆ, ಒಂದೆರಡನ್ನು ಹೊರತುಪಡಿಸಿ. ೧೯೭೪ರಲ್ಲಿ ನಡೆಸಿದ ಈ ಸಂದರ್ಶನಗಳು ಓದುಗರಿಗೆ ಕರ್ನಾಟಕದ ಗತ ಸಾಹಿತ್ಯ ವೈಭವವನ್ನು ಕಟ್ಟಿಕೊಡುತ್ತವೆ. ಅಂದಿನ ಸಾಹಿತ್ಯ ದಿಗ್ಗಜರಾದ ಶಿವರಾಮ ಕಾರಂತರು, ಗೋಪಾಲಕೃಷ್ಣ ಅಡಿಗರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗಿರೀಶ್ ಕಾರ್ನಾಡ್, ಜಿ.ಎಸ್ ಶಿವರುದ್ರಪ್ಪ, ನಾಟಕವನ್ನೇ ಬದುಕಾಗಿಸಿಕೊಂಡಿದ್ದ ಕೆ.ವಿ.ಸುಬ್ಬಣ್ಣ, ರಾಜಕಾರಣಿಗಳಾದ ಜೆ.ಹೆಚ್ ಪಟೇಲ್, ಎಸ್.ಎಂ.ಕೃಷ್ಣ ಇನ್ನಿತರರೊಂದಿಗೆ ಅನಂತಮೂರ್ತಿಯವರು ನಡೆಸಿದ ಸಂವಾದಗಳು ಇಲ್ಲಿವೆ. ಕೆಲವೆಡೆ ಅನಂತಮೂರ್ತಿಯವರ ಪ್ರಶ್ನೆಗಳೇ ಉತ್ತರಗಳಿಗಿಂತ ದೀರ್ಘವಾಗಿವೆ. ಅನಂತಮೂರ್ತಿಯವರ ಬೌದ್ಧಿಕ ಕೌಶಲ್ಯ ಮತ್ತು ಅಧ್ಯಯನಶೀಲತೆಯನ್ನು ಆ ಪ್ರಶ್ನೆಗಳು ಬಿಂಬಿಸುತ್ತವೆ. ಈ ಸಂದರ್ಶನಗಳು ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದ ಸ್ಥೂಲ ಪರಿಚಯ ಮಾಡಿಕೊಡುತ್ತವೆ. ಅಲ್ಲದೇ ಆ ವ್ಯಕ್ತಿತ್ವಗಳು ಅದೆಷ್ಟು ಯೋಗ್ಯ ಮಾದರಿಗಳಾಗಿದ್ದವು ಎಂಬುದನ್ನು ಆ ಮಾತುಗಳು ಧ್ವನಿಸುತ್ತವೆ. ಸರಿದುಹೋದ ಕಾಲದ ಹಾದಿಯ ಮೇಲೆ ಓದುಗನನ್ನು ಕೊಂಡೊಯ್ಯುತ್ತವೆ. ಅದೊಂದು ಭಾವಯಾನ, ಕರ್ನಾಟಕ, ಭಾರತದ ಇತಿಹಾಸ ಯಾನ. - ವಸಂತ ಕುಮಾರ್

 

ಪುಟಗಳು: 160

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !