Click here to Download MyLang App

ವಿಶ್ವದ ವೈವಿಧ್ಯ,   ಪಾಲಹಳ್ಳಿ ವಿಶ್ವನಾಥ್,  Vishwada Vaividhya,  Palahalli Vishwanath,

ವಿಶ್ವದ ವೈವಿಧ್ಯ (ಭೌತವಿಜ್ಞಾನ ಮತ್ತು ಖಗೋಳವಿಜ್ಞಾನ ಕುರಿತ ಲೇಖನಗಳು) (ಇಬುಕ್)

e-book

ಪಬ್ಲಿಶರ್
ಡಾ|| ಪಾಲಹಳ್ಳಿ ಆರ್. ವಿಶ್ವನಾಥ್
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಕಳೆದ ೩-೪ ವರ್ಷಗಳಲ್ಲಿ ನಾನು ಬರೆದ ಹಲವು ಪತ್ರಿಕಾ ಲೇಖನಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿದ್ದೇನೆ. ಇವುಗಳ ವಿಷಯ: ಜಗತ್ತಿನ ಅತಿ ಸಣ್ಣ ಮತ್ತು ಅತಿ ದೊಡ್ಡ ವಸ್ತುಗಳ ಬಗ್ಗೆ (‘ಮೈಕ್ರೊ ಅಂಡ್ ದಿ ಮ್ಯಾಕ್ರೊ’). ಮುಖ್ಯವಾಗಿ ಭೌತವಿಜ್ಞಾನ, ಖಗೋಳವಿಜ್ಞಾನ, ಅವೆರಡರ ಸಂಗಮವಾದ ಖಭೌತವಿಜ್ಞಾನ ಮತ್ತು ಕಣವಿಜ್ಞಾನ ಈ ಸಂಗ್ರಹದ ಲೇಖನದ ವಿಷಯಗಳು. ನನ್ನ ಮೊದಲ ಲೇಖನ ಸಂಗ್ರಹ ‘ಪಾಪ ಪ್ಲೂಟೊ’ ಎಂಬ ಹೆಸರಿನಲ್ಲಿ ೨೦೧೫ರ ಜುಲೈನಲ್ಲಿ ಪ್ರಕಟವಾಗಿದ್ದು ಅದರಲ್ಲಿನ ಲೇಖನಗಳು ಹೆಚ್ಚಾಗಿ ಜನಪ್ರಿಯ ಖಗೋಳವಿಜ್ಞಾನದ ಬಗ್ಗೆ ಇದ್ದವು. ಆದರೆ ಈ ಪುಸ್ತಕದ ಲೇಖನಗಳು ಹಲವಾರು ಮೂಲಭೂತ ವಿಷಯಗಳ ಬಗ್ಗೆ ಹೆಚ್ಚು ಆಳಕ್ಕೆ ಹೋಗಿ, ಐತಿಹಾಸಿಕ ಮೌಲ್ಯವನ್ನು ಇರಿಸಿಕೊಳ್ಳುವುದರ ಜೊತೆ ಅವುಗಳ ಪ್ರಸ್ತುತತೆಯನ್ನೂ ತೋರಿಸಬಹುದೆಂದು ನಂಬಿದ್ದೇನೆ.

ಮೊದಲ ೫ ಲೇಖನಗಳು ಭೌತವಿಜ್ಞಾನದ ಹಲವು ಮುಖ್ಯ ಮೂಲಭೂತ ಪ್ರಯೋಗಗಳನ್ನು ಚರ್ಚಿಸಿದ್ದು ಇಂದೂ ಅವು ಹೇಗೆ ಆಧುನಿಕ ಆವಿಷ್ಕಾರಗಳಿಗೆ ಸಹಾಯವಾಗುತ್ತಿವೆ ಎಂಬುದನ್ನು ತೋರಿಸಿವೆ. ಗೆಲಿಲಿಯೊವಿನ ಪೀಸಾ ಗೋಪುರದ ಪ್ರಯೋಗಗಳು ವಿಜ್ಞಾನದಲ್ಲಿ ಸಿದ್ಧಾಂತಗಳಿಗೆ ಪ್ರಯೋಗಗಳ ಸಾಕ್ಷಿಯ ಅವಶ್ಯಕತೆಯನ್ನು ಎತ್ತಿತೋರಿಸಿದ್ದು ಇಂದು ಆ ಪ್ರಯೋಗವನ್ನು ಸುಧಾರಿಸುತ್ತಲೇ ಇದ್ದಾರೆ. ಶಬ್ದದ ಅಲೆಗಳ ಬಗ್ಗೆ ಪ್ರತಿಪಾದಿಸಿದ್ದ ಡಾಪ್ಲರ್ ಪರಿಣಾಮಕ್ಕೆ ರೈಲಿನಲ್ಲಿ ನಡೆಸಿದ ಪ್ರಯೋಗದಿಂದ ಹೇಗೆ ಸಾಕ್ಷಿ ಸಿಕ್ಕಿತು ಮತ್ತು ಆ ಪರಿಕಲ್ಪನೆಯಿಂದ ಎಡ್ವಿನ್ ಹಬಲ್ ವಿಶ್ವದ ವಿಸ್ತಾರವನ್ನು ಹೇಗೆ ಕಂಡುಹಿಡಿದರೆಂಬುದನ್ನು ಎರಡನೆಯ ಲೇಖನದಲ್ಲಿ ನೋಡಬಹುದು. ಪಾಸ್ಕಲ್ ಮತ್ತು ಟಾರಿಸಿಲಿಯ ಪ್ರಯೋಗಗಳಿಂದ ನಿರ್ವಾತದ ಪರಿಕಲ್ಪನೆ ಸುಧಾರಿಸಿದ್ದು ಇಂದು ನಿರ್ವಾತಕ್ಕೆ ಅದರದ್ದೇ ಹೊಸ ಮತ್ತು ಮೂಲಭೂತ ವ್ಯಾಖ್ಯಾನವಿದೆ. ರುದರ್ಫರ್ಡರ ನ್ಯೂಕ್ಲಿಯಸ್ ಆವಿಷ್ಕಾರದ ಪ್ರಯೋಗದ ವಿಧಾನದಿಂದ ಇಂದು ಮೂಲಭೂತಕಣಗಳಾದ ಕ್ವಾರ್ಕುಗಳ ಅಸ್ತಿತ್ವಕ್ಕೆ ಸಾಕ್ಷಿ ಸಿಕ್ಕಿವೆ. ಐನ್‌ಸ್ಟೈನರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದ ಒಂದು ಭವಿಷ್ಯವಾಣಿಯಾದ ಗುರುತ್ವದ ತರಂಗಗಳು ಈಗ ತಾನೇ ಕಂಡುಹಿಡಿಯಲ್ಪಟ್ಟಿವೆ.

‘ತಾರಾಲೋಕ’ ಭಾಗದಲ್ಲಿ ತಾರೆಗಳ ಹುಟ್ಟು, ಜೀವನ ಮತ್ತು ಅಂತ್ಯದ ಬಗ್ಗೆ ಹಲವಾರು ಲೇಖನಗಳಿವೆ. ಉದಾಹರಣೆಯಾಗಿ ನಮಗೆ ಅತಿ ಹತ್ತಿರದ ನಕ್ಷತ್ರವಾದ ಸೂರ್ಯನ ಭವಿಷ್ಯವೇನಾಗಬಹುದು ಎಂಬುದರ ಬಗ್ಗೆ ಚರ್ಚೆಯಿದೆ. ಇಂದು ಮನೆಮಾತಾಗಿರುವ ಸೂಪರ್ನೋವಾ, ನ್ಯೂಟ್ರಾನ್ ನಕ್ಷತ್ರ, ಪಲ್ಸಾರ್ ಮತ್ತು ಕಪ್ಪು ಕುಳಿಗಳ ಪರಿಕಲ್ಪನೆ ಮತ್ತು ಈಗ ಅವುಗಳ ಬಗ್ಗೆ ಹೊಸ ಚಿಂತನೆಗಳ ಚರ್ಚೆ ಇದೆ. ಹಾಗೆಯೇ ಖಭೌತ ವಿಜ್ಞಾನಕ್ಕೆ ಬೆಳಕಿನಷ್ಟೇ ಉಪಯೋಗಕ್ಕೆ ಬರುತ್ತಿರುವ ನ್ಯೂಟ್ರಿನೊ ಕಣಗಳ ಮಹತ್ವದ ಬಗ್ಗೆ ಒಂದು ಲೇಖನವಿದೆ, ಸೃಷ್ಟಿ ವಿಜ್ಞಾನದ ವಿವಿಧ ಮಜಲುಗಳ ಬಗ್ಗೆ ಮೂರು ಲೇಖನಗಳಿವೆ. ವಿಶ್ವದ ಸೀಮೆಯನ್ನು ಅತಿಯಾಗಿ ಹೆಚ್ಚಿಸಿದ ಅತಿ ದೂರದ ಕ್ವೇಸಾರ್ ಆಕಾಶಕಾಯಗಳು, ಜಗತ್ತನ್ನು ಆವರಿಸಿರುವ ಅಗೋಚರ ದ್ರವ್ಯರಾಶಿ ಮತ್ತು ಚೈತನ್ಯ, ಮಹಾಸ್ಫೋಟ ಮತ್ತು ಅದಕ್ಕೆ ಸಾಕ್ಷಿಯಾದ ವಿಶ್ವವಿಕಿರಣಗಳು ಇವೇ ಆ ಲೇಖನಗಳು.

ಪುಸ್ತಕದ ಮಧ್ಯೆ ಇರುವ ‘ವೀಕ್ಷಣಾಲೋಕ’ ಭಾಗದಲ್ಲಿ ಇಂದಿನ ಖಗೋಳವಿಜ್ಞಾನದ ಹರವನ್ನು ನೋಡಬಹುದು. ಹಬಲ್ ದೂರದರ್ಶಕದ ಅದ್ಭುತ ಕೊಡುಗೆಗಳಲ್ಲದೆ ರೇಡಿಯೊ ಖಗೋಳವಿಜ್ಞಾನ ಮತ್ತು ಇತರ ವಿವಿಧ ಆಧುನಿಕ ಖಗೋಳವಿಜ್ಞಾನದ ಬಗ್ಗೆ ಲೇಖನಗಳಿವೆ. ಧೂಮಕೇತುವೊಂದನ್ನು ಅರಸಿಕೊಂಡುಹೋದ ರೊಸೆಟ್ಟ ವಾಹನ ಮತ್ತು ಸೆರೆಸ್ ಎಂಬ ಕ್ಷುದ್ರಗ್ರಹವನ್ನು ಅಧ್ಯಯನ ಮಾಡಲು ಹೋದ ಡಾನ್ ನೌಕೆ ಇಂದಿನ ಬಾಹ್ಯಾಕಾಶದ ಪ್ರಯೋಗಗಳ ವ್ಯಾಪ್ತಿಯನ್ನು ತೋರಿಸುತ್ತವೆ. ಈ ಎಲ್ಲ ಲೇಖನಗಳಲ್ಲೆಲ್ಲಾ ಮುಖ್ಯ ಬದಲಾವಣೆಯ ಸಾಧ್ಯತೆ ಇರುವುದು ಮಂಗಳದ ಬಗ್ಗೆಯ ಲೇಖನದಲ್ಲಿ ಮಾತ್ರ; ಮುಂದಿನ ಹಲವಾರು ದಶಕಗಳಲ್ಲಿ ಮಂಗಳದ ಬಗ್ಗೆ ಇನ್ನೂ ಬಹಳ ಮಾಹಿತಿ ಸಿಕ್ಕೇಸಿಗುತ್ತದೆ.

ಬಹಳ ಇತ್ತೀಚಿನ ಸಂಶೋಧನಾ ವಿಷಯಗಳನ್ನು ಅಳವಡಿಸಲು ಪ್ರಯತ್ನಿಸಿದ್ದೇನೆ. ಈ ಲೇಖನಗಳು ದೈನಂದಿನ ಪತ್ರಿಕೆಗಳಾದ ವಿಜಯವಾಣಿ ಮತ್ತು ಕನ್ನಡಪ್ರಭದಲ್ಲಿ ಅಲ್ಲದೆ ನಿಯತಕಾಲಿಕೆಗಳಾದ ವಿಜ್ಞಾನ ಲೋಕ, ಹೊಸತು, ಟೀಚರ್‌ಗಳಲ್ಲಿ ಪ್ರಕಟವಾಗಿದ್ದವು. 

- ಪಾಲಹಳ್ಳಿ ವಿಶ್ವನಾಥ್‌


 

ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)