Click here to Download MyLang App

ನಮಾಮಿ ಗಂಗೆ,  ಕೆ.ಆರ್‌.ಚಂದ್ರಶೇಖರ್‌,  namami gange,  Namaami Gange,  K.R.Chandrashekar,

ನಮಾಮಿ ಗಂಗೆ (ಇಬುಕ್)

e-book

ಪಬ್ಲಿಶರ್
ಕೆ.ಆರ್‌.ಚಂದ್ರಶೇಖರ್‌
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರೆದವರು: ಕೆ.ಆರ್‌.ಚಂದ್ರಶೇಖರ್‌

ಪ್ರಕಾಶಕರು: ಮೈಲ್ಯಾಂಗ್ ಬುಕ್ಸ್

Publisher: MyLang Books

 

ಒಮ್ಮೊಮ್ಮೆ ಕ್ಷುಲ್ಲಕವೆಂಬಂತೆ ತೋರುವ ಘಟನೆಗಳಿಂದ ಪ್ರಾರಂಭವಾದ ಸರಪಳಿ ಪ್ರಕ್ರಿಯೆ ಹೇಗೆ ಒಂದಕ್ಕೊಂದು ಎಡೆಮಾಡಿ ಮಾನವ ಕುಲವನ್ನು ರೂಪಿಸಿದೆ ಎಂದು ಅವಲೋಕಿಸಿದರೆ ಆಶ್ಚರ್ಯವಾಗುತ್ತದೆ. ಹೀಗಲ್ಲದಿದ್ದರೆ ಈ ಸರಣಿ ಘಟನೆಗಳನ್ನು ಹೇಗೆಂದು ಅರ್ಥೈಸುವುದು?


ಒಂದು ಸೇಬು ಒಬ್ಬನ ತಲೆಯ ಮೇಲೆ ಬೀಳುತ್ತದೆ, ಗುರುತ್ವಾಕರ್ಷಣೆಯ ನಿಯಮಗಳು ನಿರ್ಮಿಸಲ್ಪಡುತ್ತವೆ.

ಒಬ್ಬ ಮನುಷ್ಯ ರೈಲಿನಿಂದ ಹೊರಗೆಸೆಯಲ್ಪಡುತ್ತಾನೆ, ಒಂದು ದೇಶ ಸ್ವತಂತ್ರವಾಗುತ್ತದೆ.

ಒಂದು ಬುಗುರಿ ಹೇಲುಗುಂಡಿಯೊಳಗೆ ಬೀಳುತ್ತದೆ, ಒಂದೊಳ್ಳೆ ಕತೆಯಾಗುತ್ತದೆ.

ನಾನೊಂದು ಹೇಳುತ್ತೇನೆ: ವಿಸ್ಕಿ ನೀರಿಗೆ ಬಿತ್ತು, ಬೆಂಗಳೂರು ಉದ್ವಿಗ್ನಗೊಡಿತು, ಬದಲಾಗಲೇಬೇಕಾದ ಅನಿವಾರ್ಯತೆ ಬಂದೊದಗಿತು!


ನನಗೆ ಗೊತ್ತು, ಏ ತೆಗೀರಿ, ಏನು ಹೇಳುತ್ತಿದ್ದೀರಿ, ದಿನಾಲೂ ಜಗತ್ತಿನಾದ್ಯಂತ ವಿಸ್ಕಿಗೆ ನೀರು ಬೀಳ್ತಾನೇ ಇರುತ್ತೆ, ಇದ್ಯಾವ ಪ್ರಸಂಗ ಬಿಡಿ ಸ್ವಾಮಿ, ಎನ್ನುತ್ತೀರಿ.

ವಿಸ್ಕಿಗೆ ನೀರು ಬೀಳುವುದಕ್ಕೂ, ವಿಸ್ಕಿ ನೀರಿಗೆ ಬೀಳುವುದಕ್ಕೂ ಬಹಳ ವ್ಯತ್ಯಾಸವಿದೆ.


ಅದು ಏನೇನಕ್ಕೆಲ್ಲಾ ಎಡೆಮಾಡಿತು ಎಂದು ವಿವರಿಸಿದರೆ ನೀವು ಆಶ್ಚರ್ಯಪಡುವುದರಲ್ಲಿ ಸಂದೇಹವೇ ಇಲ್ಲ.


ಬರೀ ವಿಸ್ಕಿ ಎಂದರೆ ಅರ್ಧಂಬರ್ಧ ಹೇಳಿದಂತಾಗುತ್ತದೆ, ನಿಮಗೆ ಗೊಂದಲವಾಗುತ್ತದೆ.

ವಿಸ್ಕಿ ಎಂಬ ರೇಷಿಮೆಯಂತಹ ಚಿನ್ನದ ಬಣ್ಣದ ಕೂದಲುಳ್ಳ ಗೋಲ್ಡನ್ ರಿಟ್ರೀವರ್ ನಾಯಿಯು ಅಪಘಾತದಲ್ಲಿ ಪಾಲ್ಗೊಂಡು ಬೆಂಗಳೂರಿನ ನಯಾಗರ ಎಂದೇ ಕುಖ್ಯಾತವಾಗಿರುವ ಬೈರಮಂಗಲ ಕೆರೆಗೆ ಬಿತ್ತು ಎಂದರೆ ನಿಮಗೆ ಗೊಂದಲ ಸ್ವಲ್ಪ ಕಡಿಮೆಯಾಗಬಹುದು.


ಹೀಗೆ ಪ್ರಾರಂಭವಾದ ಈ ಕತೆಯು ನಿಮ್ಮನ್ನು ಜೀವಜಾಲದ ಮೂಲಕ್ಕೇ ಕರೆದೊಯ್ದು ಬುಡದಲ್ಲಿ ಅಲ್ಲಾಡಿಸದಿದ್ದರೆ ಎಲ್ಲೋ ಏನೋ ಐಬಿದೆ ಎಂದರ್ಥ!



- ಕೆ.ಆರ್.ಚಂದ್ರಶೇಖರ



ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
V
Vittal Shenoy
ಸಕಾಲಿಕವಾದ, ಚಿಂತನೆಗೊಳ ಪಡಿಸುವ ಕಾದಂಬರಿ

ಜಲ ಸಂಪನ್ಮೂಲ, ಪರಿಸರ ಪ್ರಜ್ಞೆಯ ಜೊತೆ ರಾಜಕೀಯ ವಿಡಂಬನೆ ಮತ್ತು ತಿಳಿಹಾಸ್ಯ(sarcasm) ಮಿಶ್ರಿತವಾದ ಈ ಕಾದಂಬರಿ ಬಹಳ ಇಷ್ಟವಾಯಿತು. ಇಂತಹ ವಿಭಿನ್ನತೆಯಿಂದ ಕೂಡಿದ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗುವುದು ಸ್ವಾಗತಾರ್ಹ ಬೆಳವಣಿಗೆ. Erin brockowich ನಂತಹ ಹಾಲಿವುಡ್ ಚಲನಚಿತ್ರ ಇಷ್ಟ ಪಟ್ಟವರು ಇದನ್ನು ಓದಲೇಬೇಕು.

ದಿವಾಕರ.ಬಿ.ಎಸ್.
ವಿಕಟ ವಿಡಂಬನೆ.

ಬದುಕಿನ ಜೀವನಾಧರವಾದ ಜಲಸಂಪತ್ತು ಮತ್ತು ಜಲಮೂಲಗಳನ್ನು ವಿಷ ಕೂಪವಾಗಿಸಿದ ಸೋ ಕಾಲ್ಡ್ ಆಧುನಿಕ ನಾಗರೀಕತೆಯ ದುರಂತವನ್ನು ನಮಾಮಿ ಗಂಗೆ ಚಿತ್ರಿಸಿದೆ.ಇಡೀ ವ್ಯವಸ್ಥೆ ಆತ್ಮಹತ್ಯಾತ್ಮಕ ದಾರಿಯಲ್ಲಿ ಸಂಭ್ರಮಿಸುವ ಸ್ಥಿತಿ ದಿಗ್ಭ್ರಮೆ ಮೂಡಿಸಿದೆ.ನವಿರು ಹಾಸ್ಯ ವಿಷಾದಕ್ಕೆ ಹಿಡಿದ ಕನ್ನಡಿ.ಒಳ್ಳಯ ಓದು.ಅಭಿನಂದನೆಗಳು.

S
Shivananda R.S
ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕ ವಿಷಯಗಳನ್ನು ಕಾದಂಬರಿ ಮೂಲಕ ನಿರೂಪಿಸುವ ವಿನೂತನ ಪ್ರಯತ್ನ

Perfect blend on Thriller narrative along with technical information on Lakes of Bangalore with Bairamangala lake as focus. Exploring details of Lake contamination by Industries, Garbage Mafia, Corruption in Politics, administration, police department all interwoven in a complex way. public indifference indirectly promoting above. Domestic level solutions like Grey water treatment is also explained in brief. Few people fighting the above big problems is not going to work. It needs a change in the system, which is not impossible, is the final message of the book. ಶುಭಾಶಯಗಳು