Click here to Download MyLang App

ಬುದ್ಧ ಮತ್ತು ಪರಂಪರೆ-ಓಶೋ,   ಡಾ. ಟಿ.ಎನ್. ವಾಸುದೇವಮೂರ್ತಿ,  T.N. Vasudeva Murthy,    budha,  buddha,  Budda Mattu Parampare,  budda,

ಬುದ್ಧ ಮತ್ತು ಪರಂಪರೆ-ಓಶೋ (ಇಬುಕ್)

e-book

ಪಬ್ಲಿಶರ್
ಡಾ. ಟಿ.ಎನ್. ವಾಸುದೇವಮೂರ್ತಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ವಂಶಿ ಪ್ರಕಾಶನ

Publisher: Vamshi Prakashana

 

ಲೇಖಕರು: ಲೇಖಕರು: ಓಶೋ

ಅನುವಾದಕರು: ಡಾ.ಟಿ.ಎನ್.ವಾಸುದೇವಮೂರ್ತಿ

 

ಮನುಸ್ಮೃತಿಯ ಕರ್ತೃ ಭಾರತೀಯ ಮನಸ್ಸುಗಳನ್ನು ಇಂದಿವರೆಗೂ - ಐದು ಅಥವಾ ಏಳು ಸಾವಿರ ವರ್ಷಗಳ ತರುವಾಯವೂ - ನಿಯಂತ್ರಿಸುತ್ತಲೇ ಬಂದಿದ್ದಾನೆ. ಭಾರತೀಯ ಸಮಾಜವು ಇಂಥವನಿಗೆ ಋಷಿಯ ಸ್ಥಾನಮಾನ ನೀಡಿ ತನ್ನೊಳಗೆ ಗುಲಾಮತನ ಬೆಳೆಸಿಕೊಂಡಿದೆ. ಆ ಗುಲಾಮತನವನ್ನು ಇಲ್ಲಿನ ಜಾತಿಪದ್ಧತಿಯಲ್ಲಿ ಈಗಲೂ ನಾವು ಕಾಣಬಹುದು. ಈ ವ್ಯವಸ್ಥೆಯು ಹೆಣ್ಣನ್ನು ಸಹ ಕೆಳಮಟ್ಟದ ಜೀವಿ ಎಂದು ಬಿಂಬಿಸುತ್ತದೆ. ಗೌತಮಬುದ್ಧ ಈ ಜಾತಿ ಪದ್ಧತಿಯ ವಿರುದ್ಧ ಧ್ವನಿಯೆತ್ತಿದ, ಅದೇ ಇಲ್ಲಿ ಅವನು ಎಸಗಿದ ಅಪರಾಧ. ಜಾತಿಪದ್ಧತಿಯನ್ನು ಬೆಂಬಲಿಸುವ ಪಂಡಿತರು ಮತ್ತು ಪುರೋಹಿತರುಗಳಲ್ಲಿ ಒಬ್ಬನಿಗೂ ಬುದ್ಧನಿಗೆ ಮುಖಾಮುಖಿಯಾಗುವ ಛಾತಿ ಇರಲಿಲ್ಲ. ಅಂದು ಒಬ್ಬನೇ ಒಬ್ಬ ವ್ಯಕ್ತಿ ಮನುಷ್ಯಜಾತಿಯ ಅತ್ಯಂತ ಪ್ರಾಚೀನ ಪರಂಪರೆಗೆ ಸವಾಲೆಸೆದಿದ್ದ. ಗೌತಮಬುದ್ಧನು ಮನುಷ್ಯನ ಇತಿಹಾಸದಲ್ಲಿ ಸ್ವಾತಂತ್ರ್ಯ ಎಂಬ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದ ಏಕಮಾತ್ರ ವ್ಯಕ್ತಿಯಾಗಿದ್ದ ಎಂದು ನಾನು ತಿಳಿದಿದ್ದೇನೆ.

ಬುದ್ಧ ಒತ್ತಾಯವಿಲ್ಲದೆ, ಹಿಂಸೆಯಿಲ್ಲದೆ, ರಕ್ತಪಾತವಿಲ್ಲದೆ ಇಡೀ ಏಷ್ಯಾ ಖಂಡವನ್ನು ಮತಾಂತರಿಸಿದ. ಬುದ್ಧನ ಉಪದೇಶಗಳನ್ನು ಸರಿಯಾಗಿ ಪಾಲಿಸಿದಲ್ಲಿ ಲೋಕದ ಇಂದಿನ ಎಷ್ಟೋ ಗೊಂದಲಗಳು ಬಗೆಹರಿಯುತ್ತವೆ. ಬುದ್ಧ ಕಾವ್ಯ ಮತ್ತು ಪುರಾಣ ಗ್ರಂಥಗಳನ್ನು ಬರೆಯಲಿಲ್ಲ. ‘ಅನುಭಾವಿಯಾದವನು ಕಾವ್ಯಾಲಂಕಾರಗಳಲ್ಲಿ ಒಮ್ಮೆ ತೊಡಗಿಕೊಂಡರೆ ಅದಕ್ಕೆ ಕೊನೆಯೇ ಇರುವುದಿಲ್ಲ’ ಎಂದು ಪದೇ ಪದೇ ಎಚ್ಚರಿಸುತ್ತಿದ್ದ. ಜಗತ್ತಿನ ಶೇ. ೯೦ ರಷ್ಟು ಧರ್ಮಗಳು ಕಾವ್ಯಾಲಂಕಾರಗಳ ಮೇಲೆ ನಿಂತಿವೆ. ಜಗತ್ತಿನಲ್ಲಿ ಸುಮಾರು ಮುನ್ನೂರು ಧರ್ಮಗಳಿವೆ ಎನ್ನುತ್ತಾರೆ. ಪ್ರತಿಯೊಂದೂ ತನ್ನದೇ ಕಟ್ಟುಕತೆಗಳನ್ನು ಹೆಣೆದುಕೊಂಡಿವೆ. ಆದುದರಿಂದಲೇ ಬುದ್ಧ ಕೊನೆತನಕ ದೇವರ ಬಗ್ಗೆ ಒಂದೇ ಒಂದು ಸೊಲ್ಲನ್ನೂ ನುಡಿಯಲಿಲ್ಲ. ಉಪನಿಷತ್ತುಗಳಾದರೂ ದೇವರನ್ನು ‘ಅವ್ಯಕ್ತ’ನೆಂದು ಕರೆದವು. ಬುದ್ಧ ಕೊನೆಯ ಪಕ್ಷ ಆ ಮಾತುಗಳನ್ನೂ ಹೇಳಲಿಲ್ಲ. ಏಕೆಂದರೆ ಅವ್ಯಕ್ತನೆಂದು ವರ್ಣಿಸುವುದೂ ದೇವರ ಮತ್ತೊಂದು ಗುಣವನ್ನು ಪರೋಕ್ಷವಾಗಿ ಸೂಚಿಸಿದಂತೆಯೇ.

ಉಪನಿಷತ್ತುಗಳು ವೇದಗಳ ಮುಂದುವರಿಕೆಯಲ್ಲ. ಆದರೆ ಪುರೋಹಿತಶಾಹಿಯು ತನ್ನ ಕೆಲವು ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಇಂತಹ ಹುಸಿ ತಿಳಿವಳಿಕೆಯನ್ನು ಪ್ರಚಾರ ಮಾಡಿದೆ. ವಾಸ್ತವದಲ್ಲಿ ಉಪನಿಷತ್ತುಗಳು ವೇದಗಳ ವಿರುದ್ಧ ಹುಟ್ಟಿಕೊಂಡ ಮೊದಲ ಬಂಡಾಯವಾಗಿದೆ. ಸಮಸ್ಯೆಯೆಂದರೆ ಉಪನಿಷತ್ತುಗಳಲ್ಲಿ ಬಂಡಾಯದ ಏರುಧ್ವನಿ ಇರಲಿಲ್ಲ, ತನ್ನೊಳಗೆ ಬಂಡಾಯದ ಚೈತನ್ಯವನ್ನು ಹುದುಗಿಸಿಕೊಂಡೂ ಅವು ತುಂಬ ಮೃದು-ಮಧುರ ಶೈಲಿಯಲ್ಲಿ ನುಡಿದವು. ಹಾಗಾಗಿ ಬುದ್ಧ ಬಹು ಎಚ್ಚರಿಕೆಯಿಂದ ಭಾಷೆಯನ್ನು ಬಳಸಬೇಕಾಯಿತು. ಉಪನಿಷತ್ತುಗಳ ವೈಫಲ್ಯವನ್ನು ಕಂಡಿದ್ದ ಬುದ್ಧನು ವಜ್ರಚ್ಛೇದಕವಾದ ತನ್ನ ಕತ್ತಿಯನ್ನು ಇನ್ನೂ ಹರಿತಗೊಳಿಸಿಕೊಳ್ಳಬೇಕಾಯಿತು. ಅವನು ಯಾವುದೇ ಊರಿಗೆ ಹೋದರೂ ಕೆಲವು ಪ್ರಶ್ನೆಗಳನ್ನು ನನ್ನ ಬಳಿ ಪ್ರಸ್ತಾಪಿಸಬಾರದು ಎಂದು ಮುನ್ನವೇ ತಿಳಿಸಿಬಿಡುತ್ತಿದ್ದ. ಆ ‘ಕೆಲವು ಪ್ರಶ್ನೆಗಳು’ ಹಿಂದಣ ಪರಂಪರೆಯ ಸಮಸ್ತ ರೋಗಗಳನ್ನೂ ಪುನರುಜ್ಜೀವಿಸುವ ಬಗೆಯ ಪ್ರಶ್ನೆಗಳಾಗಿದ್ದವು.

ಬುದ್ಧನನ್ನು ನೇರವಾಗಿ ಅನುಸಂಧಾನ ಮಾಡಿದಾಗ ಅವನನ್ನು ಖಂಡಿತವಾಗಿ ಕಾವ್ಯದ ಪರಿಕರಗಳಿಂದ ಹಿಡಿದಿಡಲಾಗದು. ಆದರೆ ನನ್ನ ನುಡಿಗಳಲ್ಲಿ ಅವನು ತುಂಬ ಕಾವ್ಯಾತ್ಮಕವಾಗಿ ಬಿಂಬಿತನಾಗುವನು. ನಾನು ಬುದ್ಧನನ್ನು ಕುರಿತು ನುಡಿವಾಗ ಸಹಜವಾಗಿಯೇ ನನ್ನದೇ ಹಿನ್ನೆಲೆ, ಪ್ರೇರಣೆಗಳು ಕೆಲಸ ಮಾಡುತ್ತಿರುತ್ತವೆ. ಮೂಲತಃ ನಾನೊಬ್ಬ ಕಾವ್ಯಪ್ರೇಮಿ, ಕಾವ್ಯಾನುಭವವಿಲ್ಲದ ಕಡೆಗಳಲ್ಲೂ ಕಾವ್ಯವನ್ನು ಹುಡುಕುವವನು. ಬುದ್ಧ ಒಂದು ಮರುಭೂಮಿಯಂತೆ, ನಾನಾದರೂ ಮರು ಭೂಮಿಯಲ್ಲಿ ಮರೀಚಿಕೆಗಳ ಅನ್ವೇಷಣೆಗೆ ಹೊರಟವನು.

ಪ್ಲೇಟೋ ತನ್ನ ‘ರಿಪಬ್ಲಿಕ್’ ಕೃತಿಯಲ್ಲಿ ಕವಿಗಳನ್ನು ತನ್ನ ಆದರ್ಶರಾಜ್ಯದಿಂದ ಉಚ್ಚಾಟಿಸುತ್ತಾನೆ. ಅಷ್ಟಕ್ಕೂ ಕಾವ್ಯವೆಂದರೇನು? ಸುಂದರವಾದ ಪದಗಳಿಂದ ಅಲಂಕೃತವಾದ ಹಸೀ ಸುಳ್ಳುಗಳಲ್ಲವೇ? ಮಹಾಸತ್ಯನಿಷ್ಠನಾದ ಬುದ್ಧನೂ ಪ್ಲೇಟೋ ತರಹವೇ ಯೋಚಿಸಿದ್ದ. ಆದರೆ ನಾನು ಅವರುಗಳಂತೆ ಯೋಚಿಸುವವನಲ್ಲ. ನಿರ್ಜೀವವಾದ ಮತ್ತು ಮೃತಪ್ರಾಯವಾದ ಧರ್ಮವನ್ನು ನಾನಂತೂ ಕಲ್ಪಿಸಿಕೊಳ್ಳಲಾರೆ. ಸಂತೋಷ, ಸಂಭ್ರಮ, ಸಂಗೀತ, ಉತ್ಸವಗಳನ್ನು ಒಳಗೊಂಡಿರದ ಧರ್ಮ ಎಂದಿಗೂ ನನ್ನ ಕಲ್ಪನೆಯ ಧರ್ಮವಾಗದು. ನಾನೇನಾದರೂ ಪ್ಲೇಟೋ ತರಹದ ಆದರ್ಶ ರಾಜ್ಯವನ್ನು ಕಲ್ಪಿಸಿಕೊಂಡರೆ ಆ ರಾಜ್ಯದಲ್ಲಿ ಕವಿ, ಕಲಾವಿದರುಗಳೇ ಪ್ರಜೆಗಳಾಗಿರುತ್ತಾರೆ; ನನ್ನ ರಾಜ್ಯದ ಏಕಮೇವ ಪ್ರಜಾಪತಿಗಳಾಗಿರುತ್ತಾರೆ. ನನ್ನ ಕಲ್ಪನೆಯ ಆದರ್ಶ ರಾಜ್ಯದಲ್ಲಿ ಕವಿಯಲ್ಲದ ಅನ್ಯರಿಗೆ ಪ್ರವೇಶವಿರುವುದಿಲ್ಲ. ಸೌಂದರ್ಯವೆಂಬುದು ಸತ್ಯಕ್ಕಿಂತಲೂ ಸಾವಿರ ಪಾಲು ಹಿರಿದೆಂದು ನಾನು ದೃಢವಾಗಿ ನಂಬಿದ್ದೇನೆ. ನನ್ನ ಕೇಳುಗರಿಗೆ ಬುದ್ಧನಲ್ಲಿ ಸೌಂದರ್ಯದ ಕಿಂಚಿತ್ ದರ್ಶನವಾದರೂ ಅದಕ್ಕೆ ನಾನು ಹೊಣೆ ಎಂಬುದನ್ನು ಅವರು ಸದಾ ನೆನಪಿಡಬೇಕು; ಅದಕ್ಕಾಗಿ ಕ್ಷಮೆಯಿರಲಿ. ಹೀಗಲ್ಲದೆ ಬೇರೆ ಮತ್ತೊಂದು ರೀತಿಯಲ್ಲಿ ಬುದ್ಧನನ್ನು ನಿರ್ವಚಿಸಲು ನನಗೆ ತಿಳಿಯದು. ಆದುದರಿಂದಲೇ ನಾನು ಜಗತ್ತಿನಾದ್ಯಂತ ಎಲ್ಲ ಬೌದ್ಧಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಜಗತ್ತಿನಾದ್ಯಂತ ಎಲ್ಲ ಬೌದ್ಧ ವಿದ್ವಾಂಸರುಗಳೂ ನನ್ನನ್ನು ತೀವ್ರವಾಗಿ ಖಂಡಿಸುತ್ತಿರುವರು.

ಇಷ್ಟುಕಾಲ ನಾವು ಬದುಕುತ್ತ ಬಂದಿರುವ ಸಾಮಾಜಿಕ ವ್ಯವಸ್ಥೆಯಿಂದ ಬಿಡುಗಡೆ ಹೊಂದುವ ಕಾಲವಿಂದು ಸನ್ನಿಹಿತವಾಗಿದೆ. ನಾವು ಕಟ್ಟಿಕೊಂಡಿರುವ ಸಾಮಾಜಿಕ ರಚನೆಯೇ ಒಂದು ರೋಗಗ್ರಸ್ತ ರಚನೆಯಾಗಿದೆ. ನಮ್ಮ ಒಟ್ಟು ನಾಗರಿಕತೆಯೇ ಹುಸಿಯೆಂದು ಸಾಬೀತಾಗಿದೆ. ನಾಗರಿಕತೆಯ ಬಗ್ಗೆ ಎಚ್.ಜಿ. ವೇಲ್ಸ್‌ನ ಅಭಿಪ್ರಾಯವನ್ನು ಕೇಳಿದಾಗ ಅವನು “ಅದೊಂದು ತುಂಬ ಒಳ್ಳೆಯ ಕಲ್ಪನೆ, ಯಾರಾದರೂ ಅದನ್ನು ಇನ್ನು ಮುಂದಾದರೂ ಜಾರಿಗೆ ತಂದರೆ ಚೆನ್ನಾಗಿರುತ್ತದೆ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದನಂತೆ. ಈಗಲೂ ನಾವು ಒಂದು ಮೃಗಪ್ರಭುತ್ವದ ಅಧೀನದಲ್ಲಿ ಜೀವನ ನಡೆಸುತ್ತಿದ್ದೇವೆ. ಬುದ್ಧನ ಅರಿವನ್ನು ಸಾಧಿಸಿಕೊಳ್ಳಲು ನಮಗೆ ಸಾಧ್ಯವಾದಲ್ಲಿ ಮಾತ್ರ ಗತಕಾಲವನ್ನು ಸಾರಾಸಗಟಾಗಿ ತಿರಸ್ಕರಿಸಿದ ಒಂದು ಹೊಸ ಭವಿಷ್ಯವನ್ನು ರೂಪಿಸಿಕೊಳ್ಳಲು ನಮಗೆ ಸಾಧ್ಯವಾದೀತು. ಅಂತಹುದೊಂದು ಸಾಧ್ಯತೆ ಇಂದು ನಮ್ಮೆದುರು ತೆರೆದುಕೊಂಡಿದೆ.

-ಓಶೋ

 

ಪುಟಗಳು: 465


ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)