Click here to Download MyLang App

ಮೈಲ್ಯಾಂಗ್ ಈಸಿ ಪಬ್ಲಿಶ್

                                                                                        ನಿಮ್ಮ ಪುಸ್ತಕ, ನೀವೇ ಪ್ರಕಟಿಸಿ, ಎಲ್ಲಿಂದ, ಯಾವಾಗ ಬೇಕಿದ್ದರೂ ಕ್ಷಣದಲ್ಲೇ!

"ನಾನೊಂದು ಹೊಸ ಕತೆ, ಕಾದಂಬರಿ ಬರೆದಿದ್ದೇನೆ ಆದರೆ ಪ್ರಕಟಿಸುವವರು ಯಾರೂ ಇಲ್ಲ.” 


“ನಾನಿರುವುದು ಕರ್ನಾಟಕದ ಮೂಲೆಯಲ್ಲಿರುವ ಒಂದು ಸಣ್ಣ ಊರಿನಲ್ಲಿ. ನಮ್ಮಂತಹ ಬರಹಗಾರರು ಬರೆದಿದ್ದನ್ನು ಯಾರು ಪ್ರಕಟಿಸುತ್ತಾರೆ?”, 

“ಕನ್ನಡಕ್ಕೆ ಹೊಸತಾದ ಒಂದು ಪುಸ್ತಕ ಬರದಿದ್ದೇನೆ, ಆದರೆ ಕೋವಿಡ್ ತರದ ಆರೋಗ್ಯದ ಬಿಕ್ಕಟ್ಟಿನಿಂದಾಗಿ ಅದನ್ನ ಪ್ರಕಟಿಸಲಾಗುತ್ತಿಲ್ಲ.”,

“ಈ ಹೊತ್ತಿನಲ್ಲಿ ನಾವು ಬರೆದ ಪುಸ್ತಕವನ್ನು ಇಬುಕ್, ಆಡಿಯೋ ರೂಪದಲ್ಲಿ ಸುಲಭವಾಗಿ ಪ್ರಕಟಿಸುವಂತಿದ್ದರೆ ಚೆನ್ನಾಗಿರುತ್ತಿತ್ತು.”



 ಇಂತಹ ಹಲವು ಪ್ರಶ್ನೆಗಳಿಗೆ ಈಗ ಮೈಲ್ಯಾಂಗ್ ತರುತ್ತಿದೆ ಒಂದು ಸರಳ ಪರಿಹಾರ ! ಪರಿಚಯಿಸುತ್ತಿದ್ದೇವೆ “ಮೈಲ್ಯಾಂಗ್ ಈಸಿ ಪಬ್ಲಿಶ್”. ಇನ್ನು ಮುಂದೆ ನಿಮ್ಮ ಪುಸ್ತಕಗಳನ್ನು ಇಬುಕ್/ಆಡಿಯೋ ಬುಕ್ ರೂಪದಲ್ಲಿ ನಿಮ್ಮ ಮೈಲ್ಯಾಂಗ್ ಅಲ್ಲಿ ನೀವೇ ಪ್ರಕಟಿಸಿ ಮಾರಾಟಕ್ಕೆ ತನ್ನಿ ನಿಮಿಷಗಳಲ್ಲೇ !

ನೀವು ಮಾಡಬೇಕಿರುವುದು ಇಷ್ಟೇ:

1. ಮೈಲ್ಯಾಂಗ್ ಈಸಿ ಪಬ್ಲಿಶ್ ತಾಣಕ್ಕೆ ಭೇಟಿ ಕೊಡಿ ಹಾಗೂ ನಿಮ್ಮ ಖಾತೆ ತೆರೆಯಿರಿ.
2. ಇಬುಕ್ ಆಗಿದ್ದಲ್ಲಿ, ನಿಮ್ಮ ಪುಸ್ತಕದ ಕಂಟೆಂಟ್ ಅನ್ನು ಯುನಿಕೋಡ್ ಪಠ್ಯದಲ್ಲಿ ಅಧ್ಯಾಯವಾರು ಅಪ್ಲೋಡ್ ಮಾಡಿ. ಆಡಿಯೋ ಆವೃತ್ತಿಯಾಗಿದ್ದಲ್ಲಿ, ಅದರ ಎಂಪಿತ್ರಿ ಫೈಲ್ಸ್ ಗಳನ್ನು ಅಧ್ಯಾಯವಾರು ಅಪ್ಲೋಡ್ ಮಾಡಿ.
3. ಪುಸ್ತಕದ ವಿವರಗಳನ್ನು ನಮೂದಿಸಿ ಮತ್ತು ಬೆಲೆಯನ್ನು ನಿಗದಿ ಮಾಡಿ.
4. ಅಪ್ಲೋಡ್ ಮುಗಿದ ಮೇಲೆ ಪುಸ್ತಕದ ಇಬುಕ್/ಆಡಿಯೋಪುಸ್ತಕ ಪ್ರತಿಯನ್ನು ಮೈಲ್ಯಾಂಗ್ ಆಪ್ ಮೂಲಕ ತೆರೆದು ಎಲ್ಲ ಸರಿಯಿದೆಯೇ ಪರಿಶೀಲಿಸಿ.
5. ಪ್ರಕಟಿಸಲು ಮೈಲ್ಯಾಂಗ್ ತಂಡಕ್ಕೆ ಕಳಿಸಿ.

ಮೈಲ್ಯಾಂಗ್ ತಂಡ ಪರಿಶೀಲಿಸಿ ಒಪ್ಪಿಗೆ ಕೊಟ್ಟ ತಕ್ಷಣವೇ ನಿಮ್ಮ ಪುಸ್ತಕ www.mylang.in ಮೂಲಕ ಮಾರಾಟಕ್ಕೆ ಸಜ್ಜು !

ಇನ್ಯಾಕೆ ತಡ, ಕೂತಲ್ಲಿಂದಲೇ ನಿಮ್ಮ ಪುಸ್ತಕ ಪ್ರಕಟಿಸಿ, ಮಾರಾಟ ಮಾಡಿ ಹಾಗೂ ನಿಮ್ಮ ಓದುಗರನ್ನು ತಲುಪಿ. 

ಹ್ಯಾಪಿ ಈಸಿ ಪಬ್ಲಿಶಿಂಗ್ !


ರೆಜಿಸ್ಟರ್ ಮಾಡಿ