ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಬಹುಮಟ್ಟಿಗೆ ರಾಕ್ಷಸೀಯವಾಗಿಬಿಟ್ಟಿರುವ ಸಮಾಜದ ಹಿನ್ನೆಲೆಯಲ್ಲಿ ಯಾವುದನ್ನು ಸಹಜ, ಸ್ವಾಭಾವಿಕ (ಆದ್ದರಿಂದ, ಮಾನವೀಯ) ಎಂದು ಭಾವಿಸುತ್ತೇವೋ ಅಂಥದನ್ನು ಮತ್ತೆ ನೋಡಿ ಅದರ ಬಗ್ಗೆ ಪುನರಾಲೋಚಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತದೆ – ‘ವೋಯ್ಜೆಕ್’. ಯಾರು ಜಗತ್ತಿನ ಬಗ್ಗೆ ಭಿನ್ನವಾದ ದೃಷ್ಟಿಯನ್ನಿಟ್ಟುಕೊಂಡಿರುತ್ತಾರೋ ಭಿನ್ನವಾದ ಭಾಷೆಯಲ್ಲಿ ಮಾತಾಡುತ್ತಾರೋ ಅಂಥವರನ್ನೆಲ್ಲ ನಾವು ಪಶುಗಳೆಂದು ಭಾವಿಸಿಬಿಡುತ್ತೇವಲ್ಲ, ಈ ನಮ್ಮ ರೂಢಿಗೆ ‘ವೋಯ್ಜೆಕ್’ ಪ್ರಶ್ನಾರ್ಥಕವಾಗಿ ನಿಂತು ನಮ್ಮನ್ನು ಚಿಂತಿಸಲು ಹಚ್ಚುತ್ತದೆ...
ಈ ನಾಟಕವು ಏಕಕಾಲಕ್ಕೆ ಮಹಾಕಾವ್ಯವೂ ಹೌದು, ಅಜ್ಞಾತವನ್ನು ತಡಕುವಂಥದೂ ಹೌದು... ಬುಶ್ನರ್ನು ಒಂದು ರೀತಿಯ ಆದಿಮ ಬ್ರೆಖ್ಟ್ ಎಂಬಂತೆ ಕಾಣಿಸುತ್ತಾನೆ. ಈ ಇನ್ನೊಬ್ಬ ಬ್ರೆಖ್ಟ್, ಗುಪ್ತಪ್ರಜ್ಞೆಗಳನ್ನು ಬಗೆಯಲಿಕ್ಕೂ ಬೆದರುವುದಿಲ್ಲ, ಅಜ್ಞಾತವನ್ನು ಎದುರಿಸಲಿಕ್ಕೂ ಭಯಪಡುವುದಿಲ್ಲ...
‘ವೋಯ್ಜೆಕ್’ನಲ್ಲಿ ಬದುಕು ವಿಲಕ್ಷಣವಾಗಿ ಕಾಣುತ್ತದೆ. ಬಹುಮಟ್ಟಿಗೆ ನಿಷ್ಕರುಣದ್ದಾಗಿ ಕಾಣುತ್ತದೆ. ಮಧ್ಯೆ ಮಾರ್ದವದ ಕ್ಷಣಗಳಿವೆ, ನೋವಿನಿಂದ ಇರಿಯುವಂಥವು.
- ರುಸ್ತುಂ ಭರೂಚಾ
ಪುಟಗಳು: 69
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !