Click here to Download MyLang App

ಶಿಶಿರ ವಸಂತ,   ಅಕ್ಷರ ಕೆ.ವಿ.,  Shishira Vasantha,  Akshara K.V.,

ಶಿಶಿರ ವಸಂತ (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಲೇಖಕರು:

ಶೇಕ್‌ಸ್ಪಿಯರನ 'ದಿ ವಿಂಟರ್ಸ್ ಟೇಲ್' ನಾಟಕದ ಕನ್ನಡ ರಂಗರೂಪ

ಕನ್ನಡಕ್ಕೆ: ಅಕ್ಷರ ಕೆ.ವಿ.

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana
 

 

ಶೇಕ್‌ಸ್ಪಿಯರ್ ತನ್ನ ಬರಹದ ಬದುಕಿನ ಕಡೆಯ ಘಟ್ಟದಲ್ಲಿ ಬರೆದ ರಮ್ಯ-ಹರ್ಷ-ದುರಂತ ಮಿಶ್ರಿತ ಗುಣದ ನಾಟಕಗಳಲ್ಲೊಂದು -- ‘ದಿ ವಿಂಟರ‍್ಸ್ ಟೇಲ್’. ನಾಲ್ಕು ನೂರು ವರ್ಷಗಳ ಕೆಳಗೆ, ನಮಗಿಂತ ತುಂಬ ಬೇರೆಯದೇ ಆದೊಂದು ಕಾಲದೇಶ ಸಂದರ್ಭದಲ್ಲಿ ರಚಿತವಾದ ಈ ನಾಟಕವು ೨೧ನೆಯ ಶತಮಾನದ ಆದಿಯಲ್ಲಿರುವ ನಮಗೆ ತುಂಬ ಪರಿಚಿತವೂ ಆಪ್ತವೂ ಆದ ಕಥೆಯಾಗಿ ಕಾಣುತ್ತದೆ ಎಂಬುದು ಈ ನಾಟಕದ ಮಹತ್ತ್ವಕ್ಕೆ ದ್ಯೋತಕ. ಶಿಶಿರದಲ್ಲಿ ಆರಂಭವಾಗಿ ವಸಂತದಲ್ಲಿ ಮುಕ್ತಾಯಗೊಳ್ಳುವ ಈ ನಾಟಕವು ಮೂಲತಃ ಕೌಟುಂಬಿಕ ಸಂಘರ್ಷಗಳಲ್ಲಿ ಮೊದಲುಗೊಂಡು ಅಂತಿಮವಾಗಿ ಸಾಮರಸ್ಯ ಸಾಧನೆಯ ದಿಕ್ಕಿಗೆ ಸಾಗುವ ಒಂದು ರೂಪಕಾತ್ಮಕವಾದ ರಮ್ಯ ಕಥೆ. ಆದರೆ, ಅಂಥ ರಮ್ಯ ಕಥನ, ಅಸಂಭವನೀಯ ಕಥೆ, ಉತ್ಪ್ರೇಕ್ಷಿತ ನಾಟಕೀಯತೆಗಳ ಮೂಲಕವೇ ಈ ನಾಟಕವು ತುಂಬ ಮಹತ್ತ್ವಪೂರ್ಣವಾದ ಗಹನ ಜಿಜ್ಞಾಸೆಗಳನ್ನು ಎತ್ತುತ್ತದೆ. ಗಂಡುಹೆಣ್ಣಿನ ಸಂಬಂಧಗಳು ದಾಂಪತ್ಯದ ಚೌಕಟ್ಟಿನೊಳಗೆ ಬೆಳೆದು ಪರಿಪಕ್ವಗೊಳ್ಳುವ ಬಗೆ ಯಾವುದು? ಪ್ರಕೃತಿಯನ್ನು ಪರಿಷ್ಕರಿಸಿ ಉತ್ತಮಗೊಳಿಸುವ ದಾರಿಯಾಗಿ ಕಾಣುವ ಸಂಸ್ಕ ತಿಯು ನಿಜವಾಗಿ ಅಂಥ ಕೆಲಸ ಮಾಡುತ್ತದೆಯೆ ಅಥವಾ ಅದಕ್ಕೆ ತದ್ವಿರುದ್ಧ ಪರಿಣಾಮವನ್ನು ಉಂಟುಮಾಡುತ್ತದೆಯೆ? ವಾಸ್ತವದ ಬದುಕು ಮತ್ತು ವಾಸ್ತವವನ್ನು ಮೀರಿ ಕಟ್ಟುವ ಕಲೆಗಳ ಸಂಬಂಧ ಎಂಥದು? - ಇವೇ ಮೊದಲಾದ ಹತ್ತಾರು ದಾರ್ಶನಿಕ ಪ್ರಶ್ನೆಗಳು ಈ ನಾಟಕದ ಭಿತ್ತಿಯಲ್ಲಿ ಹುದುಗಿವೆ. ಮತ್ತು ಇದೇ ಕಾರಣದಿಂದ, ಈ ನಾಟಕವು ಶೇಕ್‌ಸ್ಪಿಯರನ ಸುಪ್ರಸಿದ್ಧ ದುರಂತ ನಾಟಕಗಳಿಗಿಂತ ಭಿನ್ನಮಾರ್ಗ ಹುಡುಕುತ್ತ ‘ಅಭಿಜ್ಞಾನ ಶಾಕುಂತಲಮ್’ನಂಥ ಭಾರತೀಯ ನಾಟಕಗಳ ಸಮೀಪಕ್ಕೆ ಸರಿಯುತ್ತದೆ.

 

ABOUT THE AUTHOR

Born 24th April 1960, Akshara K.V. got his BA in literature at Sagara, and then got theatre training at National School of Drama, New Delhi and MA in theatre arts from the Workshop Theatre, University of Leeds, UK. He is associated with the Ninasam group of organizations as a teacher and theatre director as well as administrator. He also heads Akshara Prakashana, a prominent publishing house in the Kannada language. He has written 6 plays, directed more than 60 productions in Kannada, has taught theatre at Ninasam and elsewhere, and has presented papers in various seminars. He has published more than 30 books in Kannada, related to literature, theatre, cinema, culture and has translated essays and books related to culture and society from English. Three of his books have received the Karnataka Sahitya Akademi award, and he is also a recipient of the Karnataka Nataka Academy fellowship and the central Sangeet Natak Akademi Award. He has also received VM Inamdar Award, Kanthavara Kannada Sangha Award, BH Sridhara Prashasti and Alva’s Nudisiri Prashasti for his work in theatre and literature.

 

ಪುಟಗಳು: 111

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
B
Biradar B N
ಇದು ಒಂದು ಅತ್ಯುತ್ತಮ ನಾಟಕ. ಆಂಗ್ಲ ಭಾಷೆಯಿಂದ ಅನುವಾದಿತ ವಿದ್ದಾಗ್ಯೂ ಮೂಲ ಕೃತಿಯಂತೆ ಸಾರಯುಕ್ತವಾಗಿದೆ

ಅತ್ಯುತ್ತಮ ನಾಟಕ