ಓದುಗರಿಗಾಗಿ : ಚಾರಣ ಸವಿ ಹೂರಣ ಪುಸ್ತಕವು ಒಬ್ಬ ಹಿರಿಯ ನಾಗರಿಕನು ತನ್ನ 62ನೇ ವಯಸ್ಸಿನಿಂದ 72ನೇ ವಯಸ್ಸಿನ ಅವಧಿಯಲ್ಲಿ 25 ಹಿಮಾಲಯದಲ್ಲಿನ ಪ್ರದೇಶಗಳೆಡೆಗೆ ಮತ್ತು 17 ಪಶ್ಚಿಮ ಘಟ್ಟಗಳೆಡೆಗೆ ಹಾಗೂ 55ಬಾರಿ ತಿರುಮಲ ಬೆಟ್ಟ ಹತ್ತಿರುವ ಅಲ್ಲದೆ ಅಮೆರಿಕದಲ್ಲಿ 2 ಸುಪ್ರಸಿದ್ದ ಪ್ರದೇಶಗಳೆಡೆಗೆ ಮಾಡಿದ ಚಾರಣ ಮತ್ತು ಅಲ್ಲಿನ 190 ಮೈಲುಗಳ ಟ್ರೈಲ್ ಗಳಲ್ಲಿ ನಡೆದಾಡಿದ ಅನುಭವಗಳ ಕಥನ. ಈ ಪುಸ್ತಕವನ್ನು ಇಷ್ಟೆಲ್ಲ ಚಾರಣ ಮಾಡಿದ ಹಿರಿಯ ನಾಗರಿಕನೇ ಬರೆದು ಪ್ರಕಟಿಸಿದ್ದು. ಈ ಲೇಖಕನ ಮೊತ್ತ ಮೊದಲ ಚಾರಣವೇ 2005ರಲ್ಲಿ ಅಮರನಾಥದೆಡೆಗೆ ಹಾಗೂ ನಿವೃತ್ತಿಯ 3 ವರ್ಷಗಳ ನಂತರ 2012ರಲ್ಲಿ ಕೈಲಾಸ ಪರಿಕ್ರಮ.