Click here to Download MyLang App

ನನ್ನ ಮನೆ,  ಕುವೆಂಪು,  Nanna Mane,  kuvempu,

ನನ್ನ ಮನೆ (ಇಬುಕ್)

e-book

ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 23.00
ಸೇಲ್ ಬೆಲೆ
Rs. 23.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana


ಕುವೆಂಪು ಅವರು ಮಕ್ಕಳಿಗಾಗಿ ಬರೆದಿರುವ ಕವಿತೆಗಳ ಸಂಗ್ರಹ "ನನ್ನ ಮನೆ". ಚಿಣ್ಣರ ಮನಗೆಲ್ಲುವ ಸರಳ ಕವಿತೆಗಳು ಇಲ್ಲಿವೆ. ಒಂದು ಮಕ್ಕಳು ಮೆಚ್ಚಿದ ಕವಿತೆ ಹೀಗಿದೆ:

ಮನೇ ಮನೇ ಮುದ್ದು ಮನೇ
ಮನೇ ಮನೇ ನನ್ನ ಮನೇ !
ನನ್ನ ತಾಯಿಯೊಲಿದ ಮನೆ,
ನನ್ನ ತಂದೆ ಬೆಳೆದ ಮನೆ:
ನನ್ನ ಗೆಳೆಯರೊಡನೆ ಕೂಡಿ
ಮುದ್ದು ಮಾತುಗಳನು ಆಡಿ
ಮಕ್ಕಳಾಟಗಳನು ಹೂಡಿ
ನಾನು ನಲಿದ ನನ್ನ ಮನೆ !
ನನ್ನ ಗಿರಿಜೆಯಿದ್ದ ಮನೆ,
ನನ್ನ ವಾಸುವಿದ್ದ ಮನೆ:
ಮನೆಯ ಮುತ್ತಿ ಬರಲು ಚಳಿ
ಆಳು ಮಂಜ ಒಲೆಯ ಬಳಿ
ನಮ್ಮನೆಲ್ಲ ಕತೆಗಳಲಿ
ಕರಗಿಸಿದ್ದ ನನ್ನ ಮನೆ !
ತಾಯಿ ಮುತ್ತು ಕೊಟ್ಟ ಮನೆ,
ತಂದೆ ಎತ್ತಿಕೊಂಡ ಮನೆ:
ಮನೆಗೆ ಬಂದ ನಂಟರೆಲ್ಲ
ಕೂಗಿ ಕರೆದು ಕೊಬ್ಬರಿ ಬೆಲ್ಲ –
ಗಳನು ಕೊಟ್ಟು, ಸವಿಯ ಸೊಲ್ಲ –
ನಾಡುತ್ತಿದ್ದ ನನ್ನ ಮನೆ !
ನಾನು ನುಡಿಯ ಕಲಿತ ಮನೆ,
ನಾನು ನಡಿಗೆಯರಿತ ಮನೆ:
ಹಕ್ಕಿ ಬಳಗ ಸುತ್ತ ಕೂಡಿ
ಬೈಗು ಬೆಳಗು ಹಾಡಿ ಹಾಡಿ
ಮಲೆಯನಾಡ ಸಗ್ಗಮಾಡಿ
ನಲಿಸುತ್ತಿದ್ದ ನನ್ನ ಮನೆ !
ನಾನು ಬಿದ್ದು ಎದ್ದ ಮನೆ,
ಮೊದಲು ಬೆಳಕು ಕಂಡ ಮನೆ:
ತಿಪ್ಪ ತಿಪ್ಪ ಹೆಜ್ಜೆಯಿಟ್ಟು
ಬಿಸಿಲ ಕೋಲ ಹಿಡಿದು ಬಿಟ್ಟು
ತಂಗಿ ತಮ್ಮರೊಡನೆ ಹಿಟ್ಟು
ತಿಂದು ಬೆಳೆದ ನನ್ನ ಮನೆ !

 

ಪುಟಗಳು: 20

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Ramya S N
ಮನೆ ಮನ ಕ್ಕೆ ಬಹಳ ಹತ್ತಿರ, ಮನಸ್ಸುಗಳಿಗೆ ಸದಾ ಮಿಡಿಯುವಂತ ಅಜೀವ

ಮನುಷ್ಯನಿಗೆ ಮಾತ್ರ ಮನೆಯಲ್ಲ, ಪ್ರಾಣಿಗಳಿಗೆ ಗುಹೆ, ಪಕ್ಷಿಗಳಿಗ ಗೂಡು, ಹೀಗೆ ವಾಸಕ್ಕೆ ಸ್ಥಳ ಮುಖ್ಯ ವಾಗಿದೆ, ಮನುಷ್ಯನಿಗಿರುವಂತೆ ಅವುಗಳಿಗೆ ಯಾವುದರಲ್ಲೂ ಅತೀ ಆಸೆ ಇಲ್ಲ, ಅವು ಮನುಷ್ಯನಿಗೆ ಕೇಡು ಬಯಸೋದಿಲ್ಲ,