Click here to Download MyLang App

ನಾನು ಬಡವ ನಾನೇ ಸುಖಿ,  ನವ್ಯ ಸಾಹಿತ್ಯ,  ಜೋಗಿ,  Naanu Badava Naane Sukhi,  Jogi,  badava nanu suki,

ನಾನು ಬಡವ ನಾನೇ ಸುಖಿ (ಇಬುಕ್)

e-book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

ಬರಹಗಾರರು: ಜೋಗಿ

 

ನನ್ನ ಅಮ್ಮ ನನ್ನಲ್ಲಿ ಹೇಗೆ ನೆಲೆಸಿದ್ದಾರೆ ಅಂತ ನೋಡುವ ಪ್ರಯತ್ನವಾಗಿ ಈ ಪುಸ್ತಕ ಹೊರಬರುತ್ತಿದೆ. ಪ್ರತಿಯೊಬ್ಬರಲ್ಲೂ ಅಮ್ಮ ಅವ್ಯಕ್ತ ಪೋಷಕಾಂಶವಾಗಿ ಜೀವಂತವಾಗಿರುತ್ತಾಳೆ. ಅಮ್ಮನ ನೆನಪಿನಿಂದ ಪಾರಾಗುವುದಕ್ಕೆ ನಮಗೆ ಸಾಧ್ಯವೇ ಆಗುವುದಿಲ್ಲ. ಪಾರಾಗುವ ಉದ್ದೇಶವೂ ನಮಗಿರುವುದಿಲ್ಲ. ಅಮ್ಮ ಕಲಿಸಿದ ಎಷ್ಟೋ ಸಂಗತಿಗಳು ನಮ್ಮನ್ನು ಕೊನೆ ತನಕವೂ ಕೈ ಹಿಡಿಯುತ್ತವೆ ಅನ್ನುವುದನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ಅಮ್ಮ ಹೇಳಿದಾಗ ರೋಧಿಸಿದಂಥ ಎಷ್ಟೋ ಸಂಗತಿಗಳನ್ನು ನಾನೇ ಈಗ ಹೇಳುತ್ತಿರುವುದು ಕೂಡ ನನ್ನನ್ನು ಅಚ್ಚರಿಗೊಳಿಸಿದೆ.

- ಜೋಗಿ

 

ಎಲ್ಲರ ಅಮ್ಜಂದಿರೂ ಎಲ್ಲೋ ಒಂದು ಕಡೆ ಶಾರದಮ್ಮನೇ ಆಗಿರುತ್ತಾರೆ. ತಾವು ಕಂಡ ಶಾರದಮ್ಮನನ್ನು, ಅಂತರಂಗದ ತಿಳಿನೀರ ಕೊಳದಲ್ಲಿ ಕಾಪಿಟ್ಟುಕೊಂಡಿರುವ ಅಮ್ಮನನ್ನು, ತಮ್ಮ ಬಾಲ್ಯದ ಬಡತನದೊಟ್ಟಿಗಿನ ಆಟಪಾಠ, ಕಲಿಕೆ, ಸವಿಯೂಟಗಳ ನೆನಹುಗಳನ್ನು ಹೃದಯ ಬಸಿದುಕೊಂಡು ಬರೆದಿದ್ದಾರೆ ಜೋಗಿ.

- ಎಸ್‌ ಕೆ ಶಾಮಸುಂದರ

 

ತಾಯಿಯ ನೆನಪುಗಳ ಮೂಲಕ ಒಡಮೂಡಿದ ಜೋಗಿಯವರ ಆತ್ಮಕಥಾನಕವೋ, ಮಗನೊಬ್ಬ ಬರೆದ ತಾಯಿಯ ಜೀವನಗಾಥೆಯೋ ಎಂಬ. ಭೇದವನ್ನು ಮಸುಕು ಮಾಡುವ ಬರಹ ಇದು. ತಾಯಿಯ ಕುರಿತಾದ ಜೋಗಿ ಅವರ ಈ ನೆನಪಿನ ನೆರೆಯೊಳಗೆ ಭಯವಿದೆ, ತಾಕಲಾಟಗಳಿವೆ, ಅದಕ್ಕೆ ತನ್ನದೇ ಆದ ಚೆಲುವೂ ಇದೆ.

 - ಜ ನಾ ತೇ ಜ ಶ್ರೀ

 

ಅಮ್ಮನನ್ನು ಕೊನೆಯ ದಿನಗಳಲ್ಲಿ ಸುಖವಾಗಿಟ್ಟವಳು ಜ್ಯೋತಿ. ಅಮ್ಮನ ಮಾತಿಗೆ ಕಿವಿಯಾದವಳು ಖುಷಿ. ನಾನು. ಬೆಂಗಳೂರಿಗೆ ಬಂದ ದಿನಗಳಲ್ಲಿ ಪುಟ್ಟ ಮನೆಯೊಳಗೆ ನಾವು ಎಂಟು ಮಂದಿ ಬದುಕುತ್ತಿದ್ದಾಗ ಅಮ್ಮ ಥೇಟ್‌ ಕುಂತಿಯ ಹಾಗೆ ಎಲ್ಲರನ್ನೂ ಸಲಹುತ್ತಿದ್ದದ್ದು ನೆನಪಿದೆ. ನಾನು ಎಷ್ಟೇ ಅಪರಾತ್ರಿಯಲ್ಲಿ ಮನೆಗೆ ಬಂದರೂ ಊಟ ಮಾಡು ಅಂತಷ್ಟೇ ಅಮ್ಮ ಹೇಳುತ್ತಿದ್ದಳು. ನನ್ನಲ್ಲಿ ಇವತ್ತಿಗೂ ಉಳಿದಿರುವ ನೋವೆಂದರೆ ಅಮ್ಮನನ್ನು ನಾನು ಇನ್ನೊಂಚೂರು ಚೆನ್ನಾಗಿ ನೋಡಿಕೊಳ್ಳಬಹುದಿತ್ತು ಅನ್ನುವುದೇ. ಅದು ಎಲ್ಲಾ ಮಕ್ಕಳ ಮನಸ್ಸಲ್ಲೂ ಉಳಿದಿರುವ ಅಕ್ಕರೆಯಂತೆ ನನ್ನ ಕಾಣಿಸುತ್ತದೆ.

- ಜೋಗಿ

 

 

ಪುಟಗಳು: 252

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !


Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
A
Anonymous

Must read.

B
Bhargavi Chandrashekar
Binary

Binary ಬಗ್ಗೆ ತುಂಬಾ ತಿಳಿದು ಬಂತು...ಇನ್ನೊಮ್ಮೆ ಓದುವ ಮನಸ್ಸಾಗುತ್ತದೆ.....

G
Guru
ವರ್ಣಿಸಲು ಪದಗಳಿಲ್ಲ!!!

ಒಂದೊಂದು ಅಧ್ಯಾಯವೂ ಮುಗಿದ ನಂತರ ನಾವು ಮಾಡಿದ ತಪ್ಪುಗಳು, ಅಮ್ಮ ಅನುಭವಿಸಿದ ಕಷ್ಟಗಳು ನೆನಪಿಗೆ ಬಂದವು. ಕಣ್ಣು ಒದ್ದೆಯಾಯಿತು, ಮನಸ್ಸು ಭಾರವಾಯಿತು. ಅಮ್ಮನನ್ನು ವರ್ಣಿಸಲು ಪದಗಳಿಲ್ಲ. ಒಮ್ಮೆ 'ನಾನು ಬಡವ ನಾನೇ ಸುಖಿ' ಓದಿ, ಅಮ್ಮನ ಒಟ್ಟಿಗೆ ಕಳೆದ ಅದ್ಭುತ ಕ್ಷಣಗಳನ್ನು ನೆನಪಿಸಿಕೊಳ್ಳಿ.