Click here to Download MyLang App

ಮೃಗಬೇಟೆ : ಮಲೆನಾಡಿನ ರೋಚಕ ಕತೆಗಳು ಭಾಗ 13 (ಇಬುಕ್),    ಗಿರಿಮನೆ ಶ್ಯಾಮರಾವ್,  Mruga Bete,  girimane shyamrao,  girimane shyamarav,  Girimane Shyamarao,  girimane shyaamarao,  girimane shamrao,

ಮೃಗಬೇಟೆ : ಮಲೆನಾಡಿನ ರೋಚಕ ಕತೆಗಳು ಭಾಗ 13 (ಇಬುಕ್)

e-book

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಇವರು ದುಷ್ಟರು, ಇವರು ಶಿಷ್ಟರು ಎಂದೇನೂ ನೋಡದೆ ಪ್ರಕೃತಿ ಎಲ್ಲರಿಗೂ ಆಶ್ರಯ ಕೊಡುತ್ತದೆ. ಆದರೆ ದುಷ್ಟರು ಕೂಡಾ ಮಾಡಿದ್ದನ್ನು ಅನುಭವಿಸಲೇ ಬೇಕು ಎನ್ನುವುದು ಪ್ರಕೃತಿಯನ್ನೂ ದುಷ್ಟರನ್ನೂ ನಿರ್ಮಾಣ ಮಾಡಿದ ಭಗವಂತನ ನಿಯಮ. ಇದು ವೀರಪ್ಪನ್ ಕತೆಯಲ್ಲ: ಆದರೆ ಅದನ್ನೇ ಹೋಲುವ ಕಾಡಿನ ಬದುಕನ್ನು ಹೊರಜಗತ್ತಿಗೆ ತೋರಿಸುವ ಪರೋಕ್ಷ ಪ್ರಯತ್ನ ಅಷ್ಟೇ. ಜ್ಞಾನದ ಕೊರತೆ ಇರುವ ಮನುಷ್ಯ ಹೇಗೆ ಮೃಗದಂತೆ ವರ್ತಿಸುತ್ತಾನೆ:ಅನಿವಾರ್ಯತೆ ಎಂತಹ ವಾತಾವರಣ ಸೃಷ್ಟಿಸುತ್ತದೆ; ಹುಟ್ಟುಗುಣದಂತೆ ಪರಿಸರ ಕೂಡ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಸೂಕ್ಷ್ಮವೂ ಇದರಲ್ಲಿ ಸಿಗಬಹುದು. ಇನ್ನೊಬ್ಬರ ಕಷ್ಟ ಅರ್ಥ ಮಾಡಿಕೊಳ್ಳದವರ ಬದುಕಿನ ಕತೆ-ವ್ಯಥೆಯೂ ಇದರಲ್ಲಿದೆ. ಒಬ್ಬ ವ್ಯಕ್ತಿ ದುಷ್ಟನಾಗಲು ಸಮಾಜದ ಕೊಡುಗೆಯೂ ಕಾರಣವಾಗುತ್ತದೆ ಎನ್ನುವುದನ್ನು ಕೂಡ ಮರೆಯುವಂತಿಲ್ಲ.

ಕತೆಯ ಜೊತೆಗೇ ಪಶ್ಚಿಮ ಘಟ್ಟದ ಚಳಿ, ಮಳೆ, ಬಿಸಿಲು, ಮಂಜು, ಕಷ್ಟ-ನಷ್ಟ, ಗುಡ್ಡ-ಬೆಟ್ಟ, ಪ್ರಾಣಿ-ಪಕ್ಷಿ, ಪರಿಸರಗಳ ಬಗ್ಗೆಯೂ ಒಂದಷ್ಟು ರೋಚಕ ಚಿತ್ರಣ ನೀಡುವ ಉದ್ದೇಶವೂ ಇದರಲ್ಲಿದೆ. ಮಲೆನಾಡಿನಲ್ಲೆ ಹುಟ್ಟಿ ಕಾಡಿನಲ್ಲಿ ಕಳೆದ ಅನುಭವಗಳು ಬೆನ್ನಿಗಿವೆ. ‘ಮಲೆನಾಡಿನ ರೋಚಕ ಕತೆ’ಗಳ ಸರಣಿಯಲ್ಲಿ ಎಲ್ಲವನ್ನೂ ಒಂದೊಂದಾಗಿ ಓದುಗರ ಮುಂದಿಡಲು ಯತ್ನಿಸುತ್ತಿದ್ದೇನೆ.  

 

 ಪುಟಗಳು : 240

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)