ಈ ಪ್ರವಾಸಕಥನವನ್ನು ಬರೆದಿರುವ ಭಾರತಿ ಭಟ್ ಅವರು ತಮ್ಮ ‘ಅಡಿಗೆಯ ಒಳಗುಟ್ಟು’ ಮತ್ತು ‘ಮನೆಗೆಲಸದ ಒಳಗುಟ್ಟು’ ಎಂಬ ಎರಡು ಪುಸ್ತಕಗಳ ಮೂಲಕ ಈಗಾಗಲೇ ಓದುಗರಿಗೆ ಪರಿಚಿತರಾಗಿದ್ದಾರೆ. ಬೆಲ್ಜಿಯಂಗೆ ತಾವೊಬ್ಬರೇ ಪ್ರಯಾಣಿಸಬೇಕಾದಾಗ ಪಡೆದ ಅನುಭವ ಮತ್ತು ಅಲ್ಲಿಂದ ಜರ್ಮನಿಯ ಕೋನ್ಸ್ಟಾನ್ಸ್ ಹಾಗೂ ನೆದರ್ಲೇಂಡಿನ ಅಮ್ಸ್ಟರ್ಡಾಮ್ಗಳಿಗೆ ಪ್ರವಾಸ ಮಾಡಿದ ಅನುಭವ – ಇವನ್ನು ಅವರು ಈ ಪುಸ್ತಕದಲ್ಲಿ ಮನಮುಟ್ಟುವಂತೆ ವರ್ಣಿಸಿದ್ದಾರೆ. ಈ ಪ್ರವಾಸಕಥನದಲ್ಲಿ ಒಬ್ಬ ಗೃಹಿಣಿಯ ದೃಷ್ಟಿಕೋನವನ್ನು ಕಾಣಬಹುದು.
ನನ್ನ ಬೆಲ್ಜಿಯಂ ಪ್ರವಾಸ,Nanna Belgium Pravasa,ಭಾರತಿ ಭಟ್,Bharathi Bhat