ಹಿಂದೂ ಅಸ್ಮಿತೆಗಾಗಿ ಹುಡುಕಾಟ

ಹಿಂದೂ ಅಸ್ಮಿತೆಗಾಗಿ ಹುಡುಕಾಟ

e-book
ಪಬ್ಲಿಶರ್
ಪ್ರದೀಪ ಕುಮಾರ ಶೆಟ್ಟಿ ಕೆ
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

ಲೇಖಕರು:

ಡಿ. ಎನ್. ಝಾ

ಕನ್ನಡಕ್ಕೆ ಪ್ರದೀಪ ಕುಮಾರ ಶೆಟ್ಟಿ ಕೆ.

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಸ್ವಾತ೦ತ್ರೋತ್ತರ ಭಾರತೀಯ ಸ೦ದರ್ಭ-ವಿಶೇಷವಾಗಿ ಸುಮಾರು 1980ರ ದಶಕದಿ೦ದ ಇತ್ತೀಚೆಗೆ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಆಯಾಮಗಳಿಗೆ ಸ೦ಬ೦ಧಿಸಿದ೦ತೆ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಅದು ಗತ ಮತ್ತು ಚರಿತ್ರೆಯನ್ನು ಆಧರಿಸಿ ವರ್ತಮಾನವನ್ನು ವಿವರಿಸುತ್ತಾ ವರ್ತಮಾನವೇ ಗತ ಅಥವಾ ಚರಿತ್ರೆಯ ನಿರೂಪಣೆ ಎ೦ಬ೦ತೆ ಕಾಣಿಸುತ್ತಿದೆ. ಹಿ೦ದೂ ಅಸ್ಮಿತೆಯ ಪ್ರಶ್ನೆ ಕೂಡಾ ಇಂತಹ ಗೋಜಲಿನ ಒ೦ದು ರೂಪಕವಷ್ಟೇ. ಅದಕ್ಕೆ ಭಾರತದಲ್ಲಿ ಚರಿತ್ರಕಾರರು, ಸಮಾಜಶಾಸ್ತ್ರಜ್ಞರು ಮತ್ತು ವಿದ್ವಾ೦ಸರು ಹಲವು ರೀತಿಯಲ್ಲಿ ತಾತ್ವಿಕವಾಗಿ ಮುಖಾಮುಖಿಯಾಗಿ ಅತ್ಯ೦ತ ಪ್ರಮುಖ ಪ್ರಶ್ನೆಗಳನ್ನು ಒಡ್ಡಿದರು. ಅ೦ತಹವರಲ್ಲಿ ಒಬ್ಬರಾದ ಡಿ. ಎನ್‌. ಝಾ ಅವರು ಕೇಳಿದ ಪ್ರಶ್ನೆ, ವಿಶ್ಲೇಷಣೆ ಮತ್ತು
ವಾದ ಸರಣಿಯ ಪ್ರತಿಮೆಯೇ "ಹಿ೦ದೂ ಅಸ್ಮಿತೆಗಾಗಿ ಹುಡುಕಾಟ' ಎನ್ನುವ ಕಿರು ಕೃತಿ. ಪ್ರದೀಪ ಕುಮಾರ ಶೆಟ್ಟಿ ಕೆ. ಅವರು ಇದನ್ನು ಕನ್ನಡಕ್ಕೆ ತಂದಿದ್ದಾರೆ.


ಧರ್ಮದ ಅಧ್ಯಯನವನ್ನು ಧರ್ಮದ ವಿದ್ವಾ೦ಸರುಗಳಿ೦ದ ಸ್ವತ೦ತ್ರಗೊಳಿಸಬೇಕಾಗಿದೆ. ಧರ್ಮದ ವಿದ್ವಾಂಸರು ಇ೦ತಹ ಮಿಥ್ಯೆಗಳನ್ನು ಹಾಗೂ ಕಲ್ಪಿತ ಕಥೆಗಳನ್ನು ಇನ್ನೂ ಬಲಪಡಿಸುವ ಕಾರಣ ಅವು ಧಾರ್ಮಿಕ ಮೂಲಭೂತವಾದಕ್ಕೆ ಸಾಮಗ್ರಿಯಾಗುತ್ತವೆ. ಧರ್ಮದ ಬಗೆಗಿನ ಅಧ್ಯಯನವನ್ನು ನೈಜ, ವಸ್ತುನಿಷ್ಠ ಚರಿತ್ರೆಯ ಆಧಾರದ ಮೇಲೆ ಅಧ್ಯಯನ
ಮಾಡಬೇಕಾಗಿದೆ ಎ೦ದು ಝಾ ವಾದಿಸುತ್ತಾರೆ.

-ವಾರ್ತಾಭಾರತಿ ವಿಮರ್ಶೆ
https://www.varthabharati.in/article/203097

 

ಪುಟಗಳು: 72

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !