ಚೀಲಕ್ಕೆ ಹಾಕಲಾಗುತ್ತಿದೆ
GET FREE SAMPLE
ಪ್ರಕಾಶಕರು: ಸಾವಣ್ಣ
Publisher: Sawanna
ಧರ್ಮಗಳು,ಅಧ್ಯಾತ್ಮ ಪರಂಪರೆಗಳು ಕಥೆಗಳನ್ನು ಬಳಸಿಕೊಂಡಿರುವ ಬಗೆ ಬೆರಗು ಹುಟ್ಟಿಸುವಂಥದ್ದು.ಒಂದು ಗಂಟೆಯ ಉಪನ್ಯಾಸದ ಸಾರವನ್ನು ಒಂದು ಪುಟದ ಕಥೆಯಲ್ಲಿ ಕಟ್ಟಿಕೊಡುವ ತಂತ್ರಗಾರಿಕೆಯೇ ಅವು ಜನರಿಗೆ ಆಪ್ತವಾಗಲು ಕಾರಣ.ಈ ನಿಟ್ಟಿನಲ್ಲಿ ಕಾಣ್ಕೆಯ ಕತೆಗಳು ನಮ್ಮ ದೈನಂದಿನ ಬದುಕನ್ನು ಸಹ್ಯವೂ ಸುಂದರವೂ ಆಗಿಸುವ ಜೀವ ಕಣಜವೆಂದರೆ ತಪ್ಪಾಗದು.ಈ ನಿಟ್ಟಿನಲ್ಲಿ ವಿವಿಧ ಮೂಲಗಳಿಂದ ಸಂಗ್ರಹಿಸಿ ಅನುವಾದಿಸಿರುವ ಝೆನ್,ಸೂಫಿ,ಪುರಾಣ ಮತ್ತು ಜನಪದ ಕತೆಗಳ ಒಟ್ಟು ಸಂಖ್ಯೆ ಐನೂರು ಸಮೀಪಿಸಿದೆ. ಅವುಗಳಲ್ಲಿ ೧೫೦ ಝೆನ್ ಮತ್ತು ಸೂಫಿ ಕತೆಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದೇವೆ.
ಒಂದು ಕಪ್ ಚಹಾದೊಡನೆ ಓದಲು ಕುಳಿತರೆ,ಅದನ್ನು ಹೀರಿ ಮುಗಿಸುವುದರೊಳಗೆ ಮುಗಿದುಹೋಗುವಷ್ಟು ಚಿಕ್ಕ ಕತೆಗಳಿವು. ಹಾಗೆಂದೇ ಇವನ್ನು ಟೀ ಟೈಮ್ ಸ್ಟೋರೀಸ್ ಎಂದು ಕರೆದಿದ್ದೇವೆ.
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !
ಎಡ ಬಲ arrow key ಗಳನ್ನು ಬಳಸಿ ಅಥವಾ ಸ್ವೈಪ್ ಮಾಡುವುದರ ಮೂಲಕ ಸ್ಲೈಡ್ಸ್ ಅನ್ನು ನೋಡಿ