Click here to Download MyLang App

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (ಇಬುಕ್)

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (ಇಬುಕ್)

e-book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ

 

"ನಾನು ವಿಜ್ಞಾನದ ಪದವೀಧರನೂ ಅಲ್ಲ. ವಿಜ್ಞಾನಿಯೂ ಅಲ್ಲ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತಲ ಕೌತುಕಮಯ ವಿದ್ಯಮಾನಗಳನ್ನು ನೋಡುತ್ತಾ, ಪಶು-ಪಕ್ಷಿ, ಕ್ರಿಮಿಕೀಟಗಳ ವ್ಯಕ್ತಿತ್ವವನ್ನು ತಿಳಿದುಕೊಳ್ಳಲಷ್ಟೆ ನಾನು ಅವುಗಳ ಬಗ್ಗೆ ಅಭ್ಯಾಸ ಮಾಡಿದವನು" ಅನ್ನುತ್ತ ವಿಜ್ಞಾನವನ್ನು ರಸವತ್ತಾದ ಫಿಕ್ಷನ್ ರೂಪದಲ್ಲಿ ಕನ್ನಡಿಗರ ಎದುರು ತಂದ ತೇಜಸ್ವಿ ಅವರ ಕತೆಗಳ ಸಂಕಲನ ಇದು. ಕೀಟ ಮತ್ತು ಪ್ರಾಣಿ ಜಗತ್ತಿನ ಬಗ್ಗೆ ಸುಮ್ಮನೆ ಗಮನಿಸುತ್ತ, ಆ ಅನುಭವವನ್ನೇ ಕಥೆಯ ರೂಪದಲ್ಲಿ ತಂದ ಈ ಕತೆಗಳು ಅವರೊಳಗಿನ ಅಪರೂಪದ ವಿಜ್ಞಾನಿಯನ್ನು ಹೊರಗೆಳೆದಂತವು. ನವಿರು ಹಾಸ್ಯದ ಜೊತೆ ಚಿಂತನೆಗೆ ದೂಡುವ ತೇಜಸ್ವಿ ಅವರ ಶೈಲಿ ಇಲ್ಲಿಯೂ ಮುಂದುವರೆದಿದೆ.

 

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
A
AMARESH.K.RAICHUR
ತೇಜಸ್ವಿಯವರ ಕೃತಿಗಳು ಓದುವುದೆಂದರೆ ಒಂದು ಹೊಸ ಲೋಕದತ್ತ ಪ್ರಯಾಣ ಮಾಡಿದಂತೆ

ನಾನು 8ನೇ ತರಗತಿಯಿಂದ ತೇಜಸ್ವಿಯವರ ಕೃತಿಗಳು ಓದುತ್ತಿದ್ದೇನೆ. ಅವರ ಮಲೆನಾಡಿನ ಭಾಷೆಯಲ್ಲಿ ಕಥೆಗಳನ್ನು ಬಹಳ ಸುಂದರವಾಗಿ ಬರೆದಿದ್ದಾರೆ. ನಾನು ಬಯಲು ಸೀಮೆಯವನು ಆಗಿದ್ದರಿಂದ ಅವರ ಭಾಷೆ ನನಗೆ ಇಷ್ಟವಾಯಿತು. ಅವರು ವಿಜ್ಞಾನ, ನಿಸರ್ಗ ಸೌಂದರ್ಯ, ಕಾಡು, ಪ್ರಾಣಿಗಳು, ಪಕ್ಷಿಗಳು, ಜೇನು, ಮುಂತಾದುವುಗಳ ಬಗ್ಗೆ ಅಚ್ಚು ಕಟ್ಟಾಗಿ ಬರೆದಿದ್ದಾರೆ. ತೇಜಸ್ವಿಯವರ ಯಾವುದಾದರೂ ಪುಸ್ತಕ ಓದುವಾಗ ಒಂದು ಹೊಸ ಲೋಕಕ್ಕೆ ಹೋಗಿ ಬಂದಂತೆ ಆಗುತ್ತದೆ ನನಗೆ.

ಮ
ಮಹಾಶ್ವೇತಾ
ಇಷ್ಟದ ಲೇಖಕರ ಪುಸ್ತಕ ಮತ್ತೆ ಓದುವ ಸಂಭ್ರಮ

ತೇಜಸ್ವಿ ಅವರ ಪುಸ್ತಕ ನನಗೆ ಬಲು ಇಷ್ಟ. ದೂರದ ದೇಶದಲ್ಲಿ ಇದ್ದು ಕನ್ನಡ ಪುಸ್ತಕಗಳನ್ನು ಮತ್ತೆ ಈ - ಪುಸ್ತಕ ರೂಪದಲ್ಲಿ ಓದಲು ಖುಷಿ. ವೈವಿಧ್ಯಮಯ ಕೀಟ, ಹಕ್ಕಿ, ಚಿಟ್ಟೆ ಬಗ್ಗೆ ವೈಜ್ಞಾನಿಕವಾಗಿ ಬರೆದ ಕಥಾ ಗುಚ್ಛ ಬೇಗನೆ ಓದಿಕೊಂಡು ಹೋಗುತ್ತದೆ. ತೇಜಸ್ವಿ ಅವರ ಮಲೆನಾಡಿನ ಕಥೆಗಳು ತಮಾಷೆ-ಗಂಭೀರ ಶೈಲಿ ಎಲ್ಲ ವಯಸ್ಕರಿಗೆ ಸೂಕ್ತ.