Click here to Download MyLang App

ಎಲ್ ಡೋರಾಡೋ- ಚಿನ್ನದ ನಗರಿಯ ಬೆನ್ನ ಹತ್ತಿ

ಎಲ್ ಡೋರಾಡೋ- ಚಿನ್ನದ ನಗರಿಯ ಬೆನ್ನ ಹತ್ತಿ

audio book

ಪಬ್ಲಿಶರ್
ಇಂದಿರಾತನಯ(ಹರೀಶ ಕೃಷ್ಣಪ್ಪ)
ಮಾಮೂಲು ಬೆಲೆ
Rs. 50.00
ಸೇಲ್ ಬೆಲೆ
Rs. 50.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಸಾವಿರಾರು ವರ್ಷಗಳ ಹಿಂದೆ, ಅದೊಂದು ದಟ್ಟವಾದ ಕಾನನ, ಗಗನ ಚುಂಭೀ ವೃಕ್ಷಗಳು, ವೈವಿಧ್ಯಮಯ ಜೀವ ಸಂಕುಲ,ಅದು ಆಧುನಿಕತೆಯಿಂದ ಬಹು ದೂರವಿದ್ದ ಪ್ರದೇಶ. ಅಲ್ಲೊಂದು ದೊಡ್ಡ ಸರೋವರ, ಮುಂಜಾನೆಯ ಸೂರ್ಯ ಆಗತಾನೇ ಉದಯಿಸುತ್ತಿದ್ದಾನೆ. ಆ ಬಂಗಾರದ ಬಣ್ಣದ ಬೆಳಕಿನಲ್ಲಿ, ಆ ಬೆಳಕಿಗೆ ಎದುರಾಗಿ ಕಟ್ಟುಮಸ್ತಾದ ,ವಿಶಾಲವಾದ ಎದೆಯ, ಶಕ್ತಿಯುತವಾದ ಮಾಂಸ ಖಂಡಗಳ ,ಬಂಡೆಯಂತೆಯೇ ಬಲಿಷ್ಠವಾದ ದೇಹವನ್ನು ಹೊಂದಿರುವ ಒಬ್ಬ ಅಜಾನುಬಾಹು ನಿಂತಿದ್ದಾನೆ. ಅವನ ದೇಹಕ್ಕೆ ಸುತ್ತಲಿದ್ದವರೆಲ್ಲಾ ದೂಳನ್ನು ಎಸೆಯುತ್ತಿದ್ದಾರೆ. ಏಕೆ ಎಲ್ಲರೂ ಆ ರೀತಿ ಮಾಡುತ್ತಿದ್ದಾರೆ? ಅವನೇನಾದರೂ ಅಪರಾಧ ಮಾಡಿದ್ದಾನೆಯೇ?ಅವರು ಎರಚುತ್ತಿರುವುದು ಮಣ್ಣಿನ ಧೂಳಿನ ಕಣಗಳೇ? ಮೇಲಿನ ಕಾದಂಬರಿಯ ಸಾಲುಗಳು ಮಕ್ಕಳಲ್ಲಿ ಖಂಡಿತಾ ಕುತೂಹಲವನ್ನು ಮೂಡಿಸುತ್ತದೆ ಎಂಬುದು ನನ್ನ ನಂಭಿಕೆ, ಇದೊಂದು ಮಕ್ಕಳಿಗಾಗಿ ಸರಳವಾದ ಭಾಷೆಯಲ್ಲಿ ಅವರಿಗೆ ಅರ್ಥವಾಗುವ ರೀತೀಯಲ್ಲಿ ಬರೆದಿರುವ ಪುಟ್ಟ ಕಾದಂಬರಿ. ಇದರಲ್ಲಿ ಎಲ್ ಡೋರಾಡೋ ಬಗೆಗಿನ ಮೂಲ ಕಥೆಯಿಂದ ಹಿಡಿದು , ಅದರ ಸುತ್ತ ಎಣೆದುಕೊಂಡ ದಂತ ಕಥೆಗಳನ್ನೂ ಅದರ ಹಿಂದೆ ಬಿದ್ದು ಸಾಹಸ ಮಾಡಿ ಸೋತ/ಗೆದ್ದ ಕಥೆಗಳನ್ನು ಒಬ್ಬ ತಂದೆ ತನ್ನ ಮಗಳಿಗೆ ಹೇಳುವ ಸಂವಾದಾತ್ಮಕ ಕಥೆಯ ರೂಪದಲ್ಲಿ ಮೂಡಿ ಬಂದಿದೆ. ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡಿನ ಬಗೆಗಿನ ವಿವರಣೆಗಳು, ಯುರೋಪಿಯನ್ನರು ಅಲ್ಲಿಗೆ ಕಾಲಿಟ್ಟ ನಂತರ ಅಲ್ಲಿನ ಮೂಲ ನಿವಾಸಿಗಳ ಪರಿಸ್ಥಿತಿಗಳು.ಎಲ್ ಡೋರಾಡೊ ದಂತಕಥೆಯಿಂದ ಉಂಟಾದ ಋಣಾತ್ಮಕ ಮತ್ತು ಧನಾತ್ಮಕ ಅಂಶಗಳನ್ನು ಈ ಕಾದಂಬರಿಯು ಒಳಗೊಂಡಿದೆ.

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Raghavendra K
ಸರಳ ಸುಂದರವಾದ ಮಕ್ಕಳ ಕಥೆ 

 ಚಿನ್ನದ ನಗರಿಯ ಅನ್ವೇಷಣೆಗೆ ಹೊರಟ ಸಾಹಸಿಗರ ಕಥೆಗಳ ಜೊತೆ ಜೊತೆಗೆ ಅಮೆರಿಕಾದ ಅಮೆಜಾನ್ ಕಾಡು ಮತ್ತು ಅಲ್ಲಿನ ಜನ ಜೀವನದ ಬಗ್ಗೆ  ಮಕ್ಕಳಿಗೆ ಇಷ್ಟವಾಗುವ ಸರಳವಾದ ಭಾಷೆಯಲ್ಲಿ ಮೂಡಿ ಬಂದಿರುವುದು. ಬಹಳ ಸಂತೋಷದ ವಿಚಾರ. ಇದೇ ರೀತಿಯ ಹಲವು ಕಥೆಗಳು ನಿಮ್ಮಿಂದ ಬರಲಿ ಎಂದು ಆಶಿಸುತ್ತೇವೆ,